ಚಲವಾದಿ ಸಮಾಜದ ವಿಧ್ಯಾರ್ಥಿಗೆ ಗೌರವ ಸನ್ಮಾನ
ಶಿಗ್ಗಾವಿ 19 : ಬಸಾಪೂರದ ಕಿತ್ತೂರ ರಾಣಿ ಚೆನ್ನಮ್ಮ ವ್ಯಾಸಂಗ ಮಾಡುತ್ತಿದ್ದ ಚಲವಾದಿ ಸಮಾಜದ ಕುಮಾರಿ ಋಷಿತಾ ಸಿ ಸಂಜೀವಣ್ಣವರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 611 ಅಂಕ ಪಡೆದು ತಾಲೂಕಿಗೆ ಕೀರ್ತಿ ತಂದ ಕುಮಾರಿಗೆ ಸಮತಾ ಸೈನಿಕದಳದ ಜಿಲ್ಲಾಧ್ಯಕ್ಷ ಅಶೋಕ್ ಕಾಳೆ ನೇತೃತ್ವದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುರುಬ ಸಮಾಜದ ಅಧ್ಯಕ್ಷ ಫಕೀರ್ಪ ಕುಂದೂರ, ಪ್ರಾಧ್ಯಾಪಕ ಡಾ ನಾಗರಾಜ್ ಎಸ್, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಮಮ್ಮದ್ ಗೌಸ್ ಅಗಸನಮಟ್ಟಿ, ಅಬ್ದುಲ್ ಸತ್ತಾರ ತಿಳವಳ್ಳಿ, ಮೊಲಾಲಿ ಸೈಕಲಕಿ, ಪಂಚಾಕ್ಷರಿ ಹಿರೇಮಠ. ಎಸ್ ಆರ್ ಸಂಜೀವಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.