ವರುಣಗೌಡ್ರ ದಂಪತಿಗೆ ಗೌರವ ಸನ್ಮಾನ
ಶಿಗ್ಗಾವಿ 01: ಜಗದ್ಗುರು ರೇಣುಕಾಚಾರ್ಯರ 12 ನೇ ವರ್ಷದ ಮಹಾಗಡ್ಡಿ ರಥೋತ್ಸವ ಕಾರ್ಯಕ್ರಮವು ಸವಣೂರ ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ನೆರವೇರಿತು ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಲ್ಯಾಂಡ್ ಲಾರ್ಡ್ ವರುಣಗೌಡ ಪಾಟೀಲ ಹಾಗೂ ಧರ್ಮಪತ್ನಿ ಚೇತನಾ ವರುಣಗೌಡ ಪಾಟೀಲರವರು ಗೌರವ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ನಾಗರಾಜ ಕ್ಯಾಬಳ್ಳಿ ಹಾಗೂ ಗ್ರಾಮಸ್ಥರಾದ ನಾಗರಾಜ ಓಲೇಕಾರ, ಮಲ್ಲಿಕಾರ್ಜುನ ಶಿರಬಡಗಿ ಹಾಗೂ ಜಾತ್ರಾ ಕಮಿಟಿಯ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.