ಅನ್ನದಾನೀಶ್ವರ ಇಕೋ ಕ್ಲಬ್‌ನ್ನು ನಿವೃತ್ತ ಪ್ರಾಚಾರ್ಯ ಅರಸನಾಳ ಉದ್ಘಾಟನೆ
ಮುಂಡರಗಿ 18: ಉತ್ತಮ ಪರಿಸರಕ್ಕಾಧಾಗಿ ವಿದ್ಯಾರ್ಥಿಗಳು ಆವರಣದಲ್ಲಿರುವ ಗಿಡ ಮರಗಳನ್ನು ಮಕ್ಕಳಂತೆ ಸಂರಕ್ಷಿಸಬೇಕು. ನಮ್ಮ ಅರಣ್ಯ ಸಂಪತ್ತು ಶೇ33 ರಷ್ಟು ಬರುವಂತೆ ಎಲ್ಲರೂ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಶಾಲೆಯ ಪ್ರಧಾನ ಗುರುಗಳಾದ ಪಿ.ಡಿ.ಹಿರೇಮಠ ಹೇಳಿದರು. ಸ್ಥಳಿಯ ಶಾಸಕರ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಅನ್ನದಾನೀಶ್ವರ ಇಕೋ ಕ್ಲಬ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಸಂದರ್ಬದಲ್ಲಿ ಮಕ್ಕಳು ಹೆಚ್ಚು-ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು. ಪರಿಸರವನ್ನು ಕಾಪಾಡಿದರೆ ನಮ್ಮ ಮುಂದಿನ ಪೀಳಿಗೆ ಸ್ವಚ್ಚಂದ ಪರಿಸರದಲ್ಲಿ ಬದುಕಲು ಸಹಕಾರಿಯಾಗುತ್ತದೆ ಎಂದು ಮಕ್ಕಳಿಗೆ ಪ್ರತಿಜ್ಞಾವಿಧಿಯನನು ಭೋಧಿಸಿದರು. ಮುಖ್ಯ ಅತಿಥಿ ಮೌಲಾನ ಅಜಾದ್ ಮಾದರಿ ಸಾಲೆಯ ಪ್ರಾಚಾರ್ಯ ವಿಜಯಲಕ್ಷ್ಮೀ ಕೊಂಡಿಕೊಪ್ಪ ಮಾತನಾಡಿದರು. ಈ ವೇಳೆ ಪರಿಸರದ ಬಗ್ಗೆ ಒಲವು ಮೂಡಿಸಲು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ನಿಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರಾರಂಭದಲ್ಲಿ ಶಿಕ್ಷಕ ಬಸವರಾಜ ಮೇಗಳಮನಿ ಸ್ವಾಗತಿಸಿದರು. ಅನ್ನದಾನೀಶ್ವರ ಇಕೋ ಕ್ಲಬ್ ಸಂಚಾಲಕ ಶಿಕ್ಷಕ ಬಸವರಾಜ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ವಿಜಯಕುಮಾರ ಗೊಲ್ಲರಟ್ಟಿ ವಂದಿಸಿದರು. ಎಂ.ಎಂ.ಪೋಲೀಸಪಾಟೀಲ ಉಪಸ್ಥಿತರಿದ್ದರು.