ಜುಗೂಳದಲ್ಲಿ ಹನುಮಾನ ಮಂದಿರದ ಮೇಲ್ಛಾವಣಿ ಉದ್ಘಾಟನೆ ಮಂದಿರದ ಅಭಿವೃದ್ಧಿಗೆ ಸದಾ ಬದ್ಧ: ಶ್ರೀಮಂತ ಪಾಟೀಲ
ಕಾಗವಾಡ 12: ಜುಗೂಳ ಗ್ರಾಮದ ಹನುಮಾನ ಮಂದಿರದ ಮೇಲ್ಛಾವಣಿ ನಿರ್ಮಿಸುವಂತೆ ಮಂದಿರ ಕಮಿಟಿಯ ಸದಸ್ಯರು ನನ್ನನ್ನು ಸಂಪರ್ಕಿಸಿದಾಗ ಕೂಡಲೇ ನಮ್ಮ ಫೌಂಡೇಶನ್ ವತಿಯಿಂದ 5 ಲಕ್ಷ ನೀಡಲಾಗಿದ್ದು, ಈಗ ಆ ಮೇಲ್ಚಾವಣಿಯನ್ನು ಉದ್ಘಾಟಿಸಲಾಗಿದೆ. ಮುಂದೆಯೂ ಮಂದಿರದ ಅಭಿವೃದ್ಧಿಗಾಗಿ ತಾವು ಸಹಕಾರ ನೀಡುವುದಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ ಭರವಸೆ ನೀಡಿದ್ದಾರೆ. ಅವರು ಶನಿವಾರ ದಿ. 12 ರಂದು ತಾಲೂಕಿನ ಜುಗೂಳ ಗ್ರಾಮದ ಹನುಮಾನ ಮಂದಿರದಲ್ಲಿ ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ 5 ಲಕ್ಷ ವೆಚ್ಚದ ಮೇಲ್ಚಾವಣಿಯನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಮಂದಿರದ ಅಭಿವೃದ್ಧಿಗಾಗಿ ತಾವು ಮುಂದೆಯೂ ಸಹಾಯ ಸಹಕಾರ ನೀಡುವದಾಗಿ ಭರವಸೆ ನೀಡಿದರು. ಮುಖಂಡರಾದ ಅರುಣ ಗಣೇಶವಾಡ, ಮಾತನಾಡಿ, ಶ್ರೀಮಂತ ಪಾಟೀಲ ಅವರು ಸಚಿವರಾಗಿದ್ದಾಗ ಮತ್ತು ಶಾಸಕರಾಗಿದ್ದಾಗ ನಮ್ಮ ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹನುಮಾನ ಮಂದಿರದ ಕಮಿಟಿಯವರು ಮೇಲ್ಛಾವಣಿ ನಿರ್ಮಿಸಲು ಸಹಾಯ ಕೇಳಿದಾಗ ಕೂಡಲೇ ತಮ್ಮ ಫೌಂಡೇಶನ್ ವತಿಯಿಂದ 5 ಲಕ್ಷ ನೀಡಿದ್ದಾರೆ ಅದಕ್ಕಾಗಿ ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇನೆ ಎಂದರು. ಮುಖಂಡ ದಾದಾ ಪಾಟೀಲ ಸೇರಿದಂತೆ ಗ್ರಾಮದ ಅನೇಕ ಮುಖಂಡರು, ಮಂದಿರ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧೀಕಾರಿಗಳು, ಗ್ರಾ.ಪಂ. ಸದಸ್ಯರು, ಶ್ರೀಮಂತ ಪಾಟೀಲ ಅಭಿಮಾನಿ ಬಳಗದವರು, ಬಜರಂಗದಳದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.