ಧಾರವಾಡ, 30 : ವಿಶ್ವಕ್ಕೆ ಶೂನ್ಯದ ಪರಿಕಲ್ಪನೆಯನ್ನು ಪರಿಚಯಿಸುವುದರೊಂದಿಗೆ ರೋಬೋಟೆಕ್ಸ, ಬಯೋಟೆಕ್ನಾಲಜಿ ಮುಂತಾದ ವಿಜ್ಞಾನದ ಆವಿಷ್ಕಾರಗಳಿಗೆ ಪೂರಕವಾಗಿ ಗಣಿತ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಪ್ರತಿಪಾದಿಸಿದರು.
ಅವರು ಗುರುವಾರ ಇಲ್ಲಿಯ ಡಯಟ್ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಎಚ್.ಎಫ್.ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನವು ಪ್ರಕಟಿಸುತ್ತಿರುವ 'ಶಿಕ್ಷಣ ಸಂಪದ' ತ್ರೈಮಾಸಿಕ ಪತ್ರಿಕೆಯ 10ನೆಯ ತರಗತಿ ಗಣಿತ ವಿಷಯದ ಬೋಧನಾ ಸಂಗಾತಿ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ನಮ್ಮ ಸೊನ್ನೆಯ ಕೊಡುಗೆಯ ಮೂಲಕ ಜಗತ್ತಿನಲ್ಲಿ ಅನೇಕ ಮಹತ್ವದ ಸಂಶೋಧನೆಗಳಾಗಿವೆ. ಭಾರತದ ಆರ್ಯಭಟ, ವರಾಹಮಿಹಿರ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯ, ಶ್ರೀನಿವಾಸ್ ರಾಮಾನುಜನ್ ಮುಂತಾದ ಹಿಂದಿನ ಅನೇಕ ಗಣಿತ ತಜ್ಞರ ಶ್ರಮದ ಫಲವಾಗಿ ಭಾರತಕ್ಕೆ ಬಹುದೊಡ್ಡ ಶ್ರೇಯಸ್ಸು ಪ್ರಾಪ್ತವಾಗಿದೆ ಎಂದರು.
ಪ್ರಾಥಮಿಕ-ಪ್ರೌಢ ಶಾಲಾ ತರಗತಿಗಳಲ್ಲಿ ಗಣಿತ ಮತ್ತು ವಿಜ್ಞಾನದ ಕಲಿಕೆ ಅತ್ಯಂತ ನಿಖರ ನೆಲೆಯಲ್ಲಿ ಪ್ರಾಯೋಗಿಕವಾಗಿ ಸಂಶೋಧನಾ ನೆಲೆಯಲ್ಲಿ ನಡೆಯಬೇಕಾದ ಅಗತ್ಯವಿದೆ. ಶಿಕ್ಷಕರ ಬೋಧನೆಯೊಂದಿಗೆ ವಿದ್ಯಾಥರ್ಿಗಳಿಗೆ ಈ ಕಲಿಕೆಯ ಮೂಲಕ ಲಭಿಸುವ ಅನ್ವೇಷಣ ಮನೋಭಾವವು ವಿದ್ಯಾಥರ್ಿಗಳನ್ನು ವೈಚಾರಿಕವಾಗಿ ಪ್ರಬುದ್ಧಗೊಳಿಸುತ್ತದೆ ಎಂದರು.
ಶಾಲಾ ಸಂದರ್ಶನ : ತಾವು ಈ ತನಕ ಕೈಕೊಂಡ ಶಾಲಾ ಸಂದರ್ಶನದ ಸಂದರ್ಭದಲ್ಲಿ ತರಗತಿಗಳಲ್ಲಿ ಗಣಿತದ ಕನಿಷ್ಠ ಕಲಿಕೆಯೂ ಸಹ ಆಗದಿರುವುದು ವಿಷಾದದ ಸಂಗತಿ. ವಿವಿಧ ಜಿಲ್ಲೆಗಳ ಅನೇಕ ಶಾಲೆಗಳಲ್ಲಿ ವಿದ್ಯಾಥರ್ಿಗಳ ಗಣಿತದ ತಿಳಿವಳಿಕೆ ಸಮಾಧಾನಕರವಾಗಿಲ್ಲದಿರುವುದು ತಮಗೆ ನೋವನ್ನು ತಂದಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಶಿರಸಿ ಡಯಟ್ ಸಿದ್ಧಪಡಿಸಿರುವ 10ನೆಯ ತರಗತಿ ಗಣಿತ ವಿಷಯದ ಬೋಧನಾ ಸಂಗಾತಿ ಪ್ರೌಢ ಶಾಲಾ ಗಣಿತ ಶಿಕ್ಷಕರಿಗೆ ಸಹಾಯವಾಗಲಿದೆ ಎಂಬ ವಿಶ್ವಾಸವಿದೆ ಎಂದೂ ಮೇಜರ್ ಹಿರೇಮಠ ಹೇಳಿದರು.
ಡಯಟ್ ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ ಅಧ್ಯಕ್ಷತೆವಹಿಸಿದ್ದರು. ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಸಾಹಿತಿ ಡಾ. ಶ್ರೀನಿವಾಸ್ ವಾಡಪ್ಪಿ, ಡಿಡಿಪಿಐ ಆರ್.ಎಸ್. ಮುಳ್ಳೂರ, ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಗೌರವ ನಿದರ್ೆಶಕ ಎಸ್.ಬಿ. ಕೊಡ್ಲಿ, ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ಉಪನಿದರ್ೆಶಕ ಮೃತ್ಯುಂಜಯ ಕುಂದಗೋಳ, ಹಿರಿಯ ಸಹಾಯಕ ನಿದರ್ೆಶಕ ಅಜರ್ುನ ಕಂಬೋಗಿ, ಸಾರ್ವಜನಿಕ ಸಂಪಕರ್ಾಧಿಕಾರಿ ಉಮೇಶ ಬೊಮ್ಮಕ್ಕನವರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಡಯಟ್ ಉಪನ್ಯಾಸಕರುಗಳಾದ ಡಾ. ರೇಣುಕಾ ಅಮಲಝರಿ, ಎಚ್.ಪಿ.ಕಡ್ಲಿಮಟ್ಟಿ, ವಿಜಯಲಕ್ಷ್ಮಿ ಅರ್ಕಸಾಲಿ, ಅಪ್ಪಯ್ಯ ತಿಗಡಿ, ಸುಗಂಧಾ ದೊಡಮನಿ, ಬಿ.ಸಿ. ಭಜಂತ್ರಿ, ಸಾವಿತ್ರಿ ಕೋಳಿ, ಕಟ್ಟಿಮನಿ ಪ್ರತಿಷ್ಠಾನದ ಸಹಾಯಕ ನಿದರ್ೆಶಕ ಶಂಕರ ಗಂಗಣ್ಣವರ, 'ಜೀವನ ಶಿಕ್ಷಣ' ಮಾಸಪತ್ರಿಕೆ ಜಂಟಿ ಸಂಪಾದಕ ಗುರುಮೂತರ್ಿ ಯರಗಂಬಳಿಮಠ ಹಾಗೂ ಗುರು ಬಿದರಿ ಇದ್ದರು.