ಸುರಕ್ಷತಾ ಜಾಕೆಟ್ ವಿತರಿಸಿದ ಜೆ.ಎಸ್.ಡಬ್ಲ್ಯೂ. ಫೌಂಡೇಶನ್

ಲೋಕದರ್ಶನ ವರದಿ

ಹಂಪಿ 10: ಜೆ.ಎಸ್.ಡಬ್ಲ್ಯೂ.ನಲ್ಲಿ ಸುರಕ್ಷತೆ ಅತಿ ಪ್ರಮುಖವಾಗಿದೆ. ನಮ್ಮ ಉದ್ಯೋಗಿಗಳು ಮಾತ್ರವಲ್ಲ, ನಮ್ಮ ಪ್ರಾಥಮಿಕ ಪಾಲುದಾರರು ಅಂದರೆ ವಿಜಯನಗರದ ಸುತ್ತಮುತ್ತಲಿನಲ್ಲಿ ವಾಸಿಸುವ ಜನರು ಸುರಕ್ಷಿತವಾಗಿರಬೇಕು.

ಹಂಪಿ ಅಭಿವೃದ್ಧಿ ಪ್ರಾಧಿಕಾರದ, ಮಹಿಳಾ ಬ್ಯಾಟರಿ ಚಾಲಿತ ವಾಹನ ಚಾಲಕರಿಗೆ ಮತ್ತು ಘನ ನಿರ್ವಹಣ ಕಾರ್ಯಕರ್ತರಿಗೆ ಜೆ.ಎಸ್.ಡಬ್ಲ್ಯೂ. ಫೌಂಡೇಶನ್ ಎರೆಡು ಸುರಕ್ಷತಾ/ಭದ್ರತಾ ಜಾಕೆಟ್ಗಳನ್ನು ವಿತರಿಸಿತು. 

ಪ್ರವಾಸಿ ತಾಣವಾದ ಹಂಪಿಯು ಅನೇಕ ಪ್ರವಾಸಿಗರಿಗೆ ಆಕಶರ್ಿಸುತ್ತದೆ, ಪ್ರತಿದಿನ ಸಾವಿರಾರು ವಾಹನಗಳು ಹಂಪಿಗೆ ಆಗಮಿಸುತ್ತವೆ.  ಮಹಿಳಾ ಉದ್ಯೋಗಿಗಳು ಮುಂಜಾನೆ ಮತ್ತು ಸಂಜೆಯ ಅವಧಿಯಲ್ಲಿ ಕೆಲಸ ಮಾಡುವುದರಿಂದ ಕಡಿಮೆ ಗೋಚರತೆಯ ಕಾರಣದಿಂದ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಈ ಅಪಾಯದಿಂದ ಪಾರಾಗಲು ನೌಕರರಿಗೆ ರಾತ್ರಿಯಲ್ಲಿ ಗೊಚರಿಸುವ ಸುರಕ್ಷತಾ ಜಾಕೆಟ್ಗಳನ್ನು ಒದಗಿಸಿದೆ. 

ಮೋತಿಲಾಲ್ ಲಮಾನಿ, ಆಯುಕ್ತರು ಹಂಪಿ ಅಭಿವೃದ್ಧಿ ಪ್ರಾಧಿಕಾರ, 100 ಸುರಕ್ಷತಾ ಜಾಕೆಟ್ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಬಾಲು ಹೆಚ್.ಯು (ಮ್ಯಾನೇಜರ್ ಜೆ.ಎಸ್.ಡಬ್ಲ್ಯೂ. ಫೌಂಡೇಶನ್), ಅನ್ನದಾನಿ (ಡೆಪ್ಯೂಟಿ ಮ್ಯಾನೇಜರ್ ಜೆ.ಎಸ್.ಡಬ್ಲ್ಯೂ. ಫೌಂಡೇಶನ್) ಮತ್ತು ಶ್ರೇಯಸ್ (ಜೂನಿಯರ್ ಮ್ಯಾನೇಜರ ಜೆ.ಎಸ್.ಡಬ್ಲ್ಯೂ. ಫೌಂಡೇಶನ್) ಉಪಸ್ತಿತರಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಮೋತಿಲಾಲ ಲಮಾನಿ ಆಯುಕ್ತರು ಹಂಪಿ ಅಭಿವೃದ್ಧಿ ಪ್ರಾಧಿಕಾರ, ಜೆ.ಎಸ್.ಡಬ್ಲ್ಯೂ. ಹಂಪಿಯ ಅಭಿವೃದ್ಧಿಗೆ ಶ್ರಮಿಸುತ್ತಿದೆ, ಇದು ಸಂತೋಷದ ವಿಷಯ ಎಂದರು. ಈ ಉಪಕ್ರಮವು ನೌಕರರ ಸುರಕ್ಷತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.  

ಈ ಸಂದರ್ಭದಲ್ಲಿ ಬಾಲು ಹೆಚ್.ಯು. ಮಾತನಾಡುತ್ತಾ ಜೆ.ಎಸ್.ಡಬ್ಲ್ಯೂ. ಹಂಪಿ ಅಭಿವೃದ್ಧಿಯ ಕಡೆಗೆ ಬದ್ಧವಾಗಿದೆ ಮತ್ತು ವಿಶ್ವದ ಅತ್ಯುತ್ತಮ ವಿಶ್ವ ಪರಂಪರೆಯ ತಾಣವಾಗಿಸಲು ಶ್ರಮಿಸುತ್ತಿದೆ ಎಂದರು. ಜೆ.ಎಸ್.ಡಬ್ಲ್ಯೂ. ಹಂಪಿಯ ಪರಂಪರೆ ಮರುಸ್ಥಾಪಿಸಲು ಪ್ರಯತ್ನಿಸುತ್ತದೆ. ಹಂಪಿಯ ಯುನೆಸ್ಕೊ ವಿಶ್ವ ಪರಂಪರೆ ತಾಣದ ಹಲವಾರು ದೇವಾಲಯಗಳನ್ನು ಪುನಃಸ್ಥಾಪಿಸಿದೆ. ಕಳೆದ ವರ್ಷ, ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವನ್ನು ವಾಣಿಜ್ಯ ಕಾಯರ್ಾಚರಣೆಗೆ  ಮುಕ್ತವಾಗಿಸಿದೆ. ಇದರಿಂದ ಪ್ರವಾಸಿಗರ ಸಂಖ್ಯೆಯು ಹೆಚ್ಚಿದೆ.