ಕಳಸಾಪೂರ: ಮಾ. 30ರಂದು ಸರ್ವಧರ್ಮ ಸಾಮೂಹಿಕ ವಿವಾಹ

Kalasapur: Ma. Interfaith mass wedding on 30th

ಕಳಸಾಪೂರ: ಮಾ. 30ರಂದು ಸರ್ವಧರ್ಮ ಸಾಮೂಹಿಕ  ವಿವಾಹ

ಗದಗ 08: ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಈಶ್ವರ ಬಸವಣ್ಣ ದೇವರ 15ನೇ ವರ್ಷದ ಜಾತ್ರಾ ಮಹೋತ್ಸವ, ಶಿವಶರಣೆ ಗುಡ್ಡಾಪುರದ ದಾನಮ್ಮದೇವಿ ಪುರಾಣ ಪ್ರಾರಂಭೋತ್ಸವ  ಮಾರ್ಚ್‌ 14ರಿಂದ 26ರವರೆಗೆ ಜರುಗುವುದು.   ಪ್ರತಿದಿನ ಸಂಜೆ 7ಗಂಟೆಗೆ ಪ್ರವಚನಕಾರ ಶಿವಲಿಂಗಯ್ಯಶಾಸ್ತ್ರಿಗಳು ಹಿರೇಮಠ ಸಿದ್ದಾಪುರ ಅವರು ಪ್ರವಚನ ನೀಡುವರು. ಮಾರ್ಚ್‌ 29ರಂದು ಸಂಜೆ 4ಗಂಟೆಗೆ ಕುಂಭಮೇಳ ಹಮ್ಮಿಕೊಳ್ಳಲಾಗಿದೆ.   ಮಾರ್ಚ್‌ 30ರಂದು  ರವಿವಾರ ಬೆಳಿಗ್ಗೆ 11.30 ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಜರುವುದು ಸಂಜೆ 5.30 ಗಂಟೆಗೆ ಮಹಾರಥೋತ್ಸವ ಜರುಗುವುದು.  ಮಾರ್ಚ್‌ 26ರಂದು ಬುಧವಾರ ಬೆಳಗ್ಗೆ 8.30 ಗಂಟೆಗೆ ಕಳಸಾರೋಹಣ, ಮಾರ್ಚ್‌ 27ರಿಂದ 29ರವರೆಗೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ಮಾರ್ಚ್‌ 31ರಂದು ಸಂಜೆ 5.30 ಗಂಟೆಗೆ ಲಘು ರಥೋತ್ಸವ ಜರುಗುವುದು. ಮಾರ್ಚ್‌ 30 ರಂದು ರಾತ್ರಿ 9.30 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗುವದು.   ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳುವವರು ಮಾರ್ಚ್‌ 22ರ ಒಳಗಾಗಿ ಹೆಸರನ್ನು  ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ 9739233949, 9902598388, ಅವರನ್ನು ಸಂಪರ್ಕಿಸಲು ಜಾತ್ರಾ ಮಹೋತ್ಸವ ಕಮೀಟಿಯು ಪ್ರಕಟಣೆಯಲ್ಲಿ ತಿಳಿಸಿದೆ.