ಇಂದು ಕವಿಗೋಷ್ಟಿ: ಸಾಧಕರಿಗೆ ಸನ್ಮಾನ

Kavigosti today: Tribute to achievers

ಇಂದು ಕವಿಗೋಷ್ಟಿ: ಸಾಧಕರಿಗೆ ಸನ್ಮಾನ 

ಯಮಕನಮರಡಿ 18: ಕನ್ನಡ ಸಾಹಿತ್ಯ ಪರಿಷತ್ತು ಹುಕ್ಕೇರಿ ಕರ್ನಾಟಕ ರಕ್ಷಣಾ ವೇದಿಕೆ ಯಮಕನಮರಡಿ ಸುಕ್ಷೇತ್ರ ಹುಣಸಿಕೋಳ್ಳಮಠ ಇವುಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ 50 ರ ಸವಿನೆನಪಿಗಾಗಿ ವಿವಿಧ ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಇಂದು ಮದ್ಯಾಹ್ನ 4 ಗಂಟೆಗೆ ಸುಕ್ಷೇತ್ರ ಹುಣಸಿಕೋಳ್ಳಮಠದ ಸಭಾಭವನದಲ್ಲಿ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಆಯೋಜಿಸಲಾಗಿದ್ದು. 

 ದಿವ್ಯ ಸಾನಿದ್ಯವನ್ನು ಮಠದ ಸಿದ್ದಬಸವ ದೇವರು ಹುಣಸಿಕೊಳ್ಳಮಠ ಇವರು ವಹಿಸಲಿದ್ದು ಹಾಗೂ ಸಾನಿದ್ಯವನ್ನು ಹತ್ತರಗಿ ಯಮಕನಮರಡಿ ಹರಿಮಂದಿರ ಡಾ. ಆನಂದ ಮಹಾರಾಜ ಗೋಸಾವಿಯವರು ವಹಿಸಲಿದ್ದು ಅಧ್ಯಕ್ಷತೆಯನ್ನು ಶ್ರೀಮಠದ ಆಡಳಿತ ಮಂಡಳಿಯ ಅಧ್ಯಕ್ಷ ವೀರಣ್ಣ ಬಿಸಿರೋಟ್ಟಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕಿರಣಸಿಂಗ ರಜಪೂತ ಯುವಧುರಿಣರು ಯ-ಮರಡಿ ರವೀಂದ್ರ ಜಿಂಡ್ರಾಳಿ ಯುವ ಧುರಿಣರು ಯಮಕನಮರಡಿ ಆರ್ ಸಿ. ಹಾಗೂ ಎಸ್ ಎಮ್ಮ ಶಿರೂರ ಹಿರಿಯ ಸಾಹಿತಿಗಳು ಹಿಡಕಲ್ ಡ್ಯಾಂ , ಗೀರೀಶ ಮಿಶ್ರೀಕೋಟಿ, ಮತ್ತು ಸಿದ್ದಪ್ಪಾ ಶಿಳ್ಳಿ ಹು. ಮಠ ಆಡಳಿತ ಮಂಡಳಿ ಸದಸ್ಯರು ವಹಿಸಲಿದ್ದಾರೆ.  

 ಸಾಧಕರಿಗೆ ಸನ್ಮಾನ: ಸಂಕೇಶ್ವರದ ಹಿರಿಯ ಸಾಹಿತಿ ಎಲ್ ವ್ಹಿ ಪಾಟೀಲ, ಸಂಕೇಶ್ವರ ಸಂಶೋಧಕರು ಜಿ ಎಸ್ ಮರಿಗುದ್ದಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಹಮೀದಾ ಬೇಗಂ, ಕರವೆ ಉಪಾಧ್ಯಕ್ಷ ರಾಜು ನಾಶಿಪುಡಿ, ಹಿಡಕಲ್ ಡ್ಯಾಂ ಮಕ್ಕಳ ಸಾಹಿತ್ಯ ವೇದಿಕೆ ಪ್ರಕಾಶ ಹೊಸಮನಿ, ಯಮಕನಮರಡಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ ಚಪಣಿ, ಸಮಾಜ ಸೇವಕಿ ಅನುರಾಧಾ ಕಾಪಶಿ, ಯಮಕನಮರಡಿ ಸಿ ಇ ಎಸ್ ಹೈಸ್ಕೂಲ ನಿವೃತ್ತ ಪ್ರಾಧ್ಯಾಪಕ ಎಮ್ ಎಸ್ ಮಳ್ಳೋಳ್ಳಿ ಇವರನ್ನು ಸನ್ಮಾನಿಸಲಾಗುವುದು ಎಂದು  ಹುಕ್ಕೇರಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ತಿಳಿಸಿದ್ದಾರೆ.