ಕುಮಟಾ : ಬಸವ ಜಯಂತಿ ಕಾರ್ಯಕ್ರಮ

ಕುಮಟಾ,8 : ವ್ಯಕ್ತಿಯಲ್ಲಿಯ ಅತ್ಯಂತ ವಿಶಿಷ್ಟವಾದ ಗುಣಗಳನ್ನು ಆಚರಣೆಗೆ ತಂದಾಗ ಅವನೊಬ್ಬ ಮಹಾನ್ ಆದರ್ಶ ವ್ಯಕ್ತಿಯಾಗುತ್ತಾನೆ. ಹಾಗೇ ಬಸವಣ್ಣ ಎಲ್ಲರಿಗೂ ಆದರ್ಶ. ಅವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿಯ ಅನಿಷ್ಠಗಳನ್ನು ಹೋಗಲಾಡಿಸೋಣ ಎಂದು ಗುರುಪ್ರಸಾದ ಪ್ರೌಢಶಾಲೆಯ ಶಿಕ್ಷಕ ರಾಮಚಂದ್ರ ಮಡಿವಾಳ ಹೇಳಿದರು.

ಅವರು ಮಂಗಳವಾರ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಬಸವಣ್ಣ ಬಹುರೂಪಿ ಆದರ್ಶಗಳುಳ್ಳ ಮಹಾನ್ ಮಾನವತಾವಾದಿ. ನಿದರ್ಿಷ್ಟ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದ ಹಲವರನ್ನಾ ಕಾಣುತ್ತೇವೆ. ಆದರೆ ಬಸವಣ್ಣ ಸಾಮಾಜಿಕ, ಧಾಮರ್ಿಕ ಶಿಕ್ಷಣ ಕ್ರಾಂತಿಯ ಹರಿಕಾರ. ಅವರ ಆದರ್ಶಗಳು ಲೋಕಕ್ಕೆ ಸದಾ ಪ್ರಸ್ತುತ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬಡವರ ಕಷ್ಟ ನಿವಾರಣೆಗೆ ವಚನಗಳ ಅಸ್ತ್ರವನ್ನು ಬಳಸಿ ಸುಸ್ತಿರ ಸಮಾಜ ನಿಮರ್ಾಣಕ್ಕೆ ಮುಂದಾಗಿದ್ದರು. ಜನರು ಆಡುವ ಹಾಗೂ ಸುಲಭವಾಗಿ ತಿಳಿಯಬಲ್ಲ ಸರಳ ಭಾಷೆಗಳ ಮೂಲಕ ತನ್ನ ವಚನಗಳನ್ನು ರಚಿಸಿದ್ದರು ಎಂದು ತಿಳಿಸಿದರು.

ತಾಪಂ ಕಾರ್ಯ ನಿವರ್ಾಹಣಾಧಿಕಾರಿ ಸಿ ಟಿ ನಾಯ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನ ಕೃತ್ಯದಲ್ಲಿ ನಿಶ್ಚಿತವಾಗಿ ಒಂದಲ್ಲೊಂದು ಹಿನ್ನೆಲೆ ಇದ್ದೇ ಇರುತ್ತದೆ. ಆದರೆ ಘನ ಉದ್ದೇಶಗಳು ಸದಾ ಸಮಾಜವನ್ನು ಕಾಪಾಡುತ್ತವೆ. ಬಸವಣ್ಣನವರ ವಚನಗಳು ಸಮಾಜದಲ್ಲಿಯ ಕೊಳಕನ್ನು ನಿವಾರಿಸಲು ಉತ್ತಮ ಸಾಧನ. ಬಸವಣ್ಣನವರ ತತ್ವ, ಆದರ್ಶ, ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. 

ತಹಶೀಲ್ದಾರ ಪರಿಮಳ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ, ಎಇಇ ಆರ್ ಜಿ ಗುನಗಿ, ತಾರಾ ನಾಯ್ಕ, ಯಶೋಧಾ ಹೊಸ್ಕಟ್ಟಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು 

ಉಪಸ್ಥಿತರಿದ್ದರು