ಲೋಕದರ್ಶನ ವರದಿ
ಕುರುಗೋಡು 02: ತಾಲೂಕು ಕೇಂದ್ರ ಬಸ್ ನಿಲ್ದಾಣದಲ್ಲಿ ವ್ಯವಸ್ಥಿತವಾಗಿ ಬಸ್ಗಳ ನಿಯಂತ್ರಣ ಮಾಡಬೇಕು ಮತ್ತು ಡಿಪೋ ಅಭಿವೃದ್ಧಿ ಪಡಿಸುವಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ನೂತನ ಕುರುಗೋಡು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕರಿಗಳು ಡಿಪೋ ವ್ಯವಸ್ಥಾಪಕರಿಗೆ ಮಂಗಳವಾರ ಮನವಿ ನೀಡಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಂಚಾಲಕ ಕೆಎಂ.ಉಮಾಪತಿಗೌಡ ಮಾತನಾಡಿ, ಕುರುಗೋಡು ನೂತನ ತಾಲೂಕು ಕೇಂದ್ರವಾಗಿದ್ದು ಮತ್ತು ಐತಿಹಾಸಿಕ ದೊಡ್ಡಬಸವೇಶ್ವರ ದೇವಸ್ಥಾನವು ಪ್ರಸಿದ್ದ ಸುಕ್ಷೇತ್ರವಾಗಿದ್ದು. ಹೊರರಾಜ್ಯ, ಜಿಲ್ಲೆ ಹಾಗೂ ಸುತ್ತಮುತ್ತಲಿನ 33 ಗ್ರಾಮಗಳ ಜನರು ಇಲ್ಲಿಗೆ ಹಲವಾರು ಕೆಲಸಗಳಿಗೆ ಬಂದು ಹೋಗುವುದು ನಿತ್ಯಕರ್ಮವಾಗಿದೆ. ಅನೇಕ ಸಾರಿ ಬೆಳಿಗ್ಗೆ ಮತ್ತು ಸಂಜೆ ಪ್ರಯಾಣಿಕರಿಗೆ ಸರಿಯಾದ ಬಸ್ ಸೌಲಭ್ಯ ಇಲ್ಲದೆ ಸಂಕಷ್ಟಕ್ಕಿಡಾಗಿದ್ದಾರೆ. ಬಳ್ಳಾರಿಯ ವಿಭಾಗ ಅಧಿಕಾರಿಗಳ ಅನುಸೂಚಿಗಳಿದ್ದರೂ ಇಲ್ಲಿನ ಅಧಿಕಾರಿ ಸಹಕರಿಸುತ್ತಿಲ್ಲ ಎಂಬುದು ಪ್ರಯಾಣಿಕರ ದೂರುಗಳಿವೆ. ಡಿಪೋ ಉದ್ಘಾಟನೆಗೊಂಡು ಎರಡು ವರ್ಷಗಳು ಕಳೆದರು ಇನ್ನೂ ಕೆಲ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸದಿರುವುದು ವಿಷಾಧನೀಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೂ ಬಸ್ಗಳ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕಡ್ಡಾಯವಾಗಿ ನಿಯಂತ್ರಕರನ್ನು ಹಾಜರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಾರೆ ಕುರುಗೋಡು ಬಂದ್ ಮಾಡಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಿತಿಯ ಸಹ ಸಂಚಾಲಕ ಹೆಚ್.ಎಂ.ವಿಶ್ವನಾಥಸ್ವಾಮಿ ಮಾತನಾಡಿ, ಡಿಪೋ ಪ್ರಾರಂಭದಲ್ಲಿ 10 ಬಸ್ಗಳನ್ನು ನೀಡಿದ್ದರು ಆದರೆ ಈಗ ಎರಡು ಬಸ್ಗಳು ಮಾತ್ರ ಇದ್ದು, ಇನ್ನೂಳಿದ ಸ್ಕ್ರಾಫ್ಗಾಡಿಗಳಿವೆ. ಇವುಗಳಿಂದ ಪ್ರಯಾಣಿಕರಿಗೆ ತುಂಬ ತೊಂದರೆಯಾಗುವ ಸಾಧ್ಯತೆಗಳಿವೆ.
ಮನವಿ ಸ್ವೀಕರಿಸಿದ ಡಿಪೋ ವ್ಯವಸ್ಥಾಪಕ ತಿರುಮಲೇಶ್ ಈ ಮನವಿಯನ್ನು ಮೇಲಾಧಿಕಾರಿಗೆ ಕಳುಹಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರವಿಗೌಡ, ಮುಷ್ಟಗಟ್ಟೆ ಎಸ್.ಭೀಮನಗೌಡ, ತಂಗಿ ಸುರೇಶಪ್ಪ, ವೀರಪ್ಪ, ಎಸ್ಕೆ.ಬಸವರಾಜ್, ನಾಗಲಿಂಗ, ಎಂ.ಮಹೇಶ್ಗೌಡ, ಯೋಗೀಶ್ ಹೂಗಾರ್, ನಾಗಯ್ಯಸ್ವಾಮಿ ಹಾಗೂ ಇನ್ನಿತರರು ಇದ್ದರು.