ಅಂಗನವಾಡಿಗಳಲ್ಲಿ ಎಲ್.ಕೆಜಿ, ಯುಕೆಜಿ ಆರಂಭಕ್ಕೆ ಒತ್ತಾಯ

ಅಂಗನವಾಡಿಗಳಲ್ಲಿ ಎಲ್.ಕೆಜಿ, ಯುಕೆಜಿ ಆರಂಭಕ್ಕೆ ಒತ್ತಾಯ

ಬಳ್ಳಾರಿ: ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕೆಂದು ಒತ್ತಾಯಿಸಿ, ಕನರ್ಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿ.ಐ.ಟಿ.ಯು) ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು. 

ಕೇಂದ್ರ ಸಕರ್ಾರದ ವಿರುದ್ಧ ಘೋಷಣೆ ಕೂಗಿದ ನೂರಾರು ಅಂಗನವಾಡಿ ಕಾರ್ಯಕತರ್ೆಯರು ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಗಡಿಗಿ ಚೆನ್ನಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಿದರು. 

ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಟ್ಟಿಗೆ ಎಲ್.ಕೆ.ಜಿ, ಯು.ಕೆ.ಜಿ ಶಿಕ್ಷಣ ನೀಡಬೇಕು. ಕೇಂದ್ರಗಳಲ್ಲಿ 3 ಗಂಟೆ ಶಾಲಾ ಪೂರ್ವ ಶಿಕ್ಷಣಕ್ಕೆ ಆದ್ಯತೆ ಕೊಟ್ಟು, ಮಾತೃಪೂರ್ಣ ಯೋಜನೆ ಯಶಸ್ಸಿಗೆ ಹೆಚ್ಚುವರಿ ಸಹಾಯಕಿ ಕೊಡಬೇಕು. ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿತುವ 3 ರಿಂದ 9  ವರ್ಣದ ವಗರ್ಿಕರಣವನ್ನು ವಿರೋಧಿಸಬೇಕು ಎಂದು ಗೌರವವಾಧ್ಯಕ್ಷೆ ಕೆ.ನಾಗರತ್ನ ಆಗ್ರಹಿಸಿದರು. 

ಈಗಿರುವ ನಿವೃತ್ತಿ ವೇತನವನ್ನು ಬದಲಾಯಿಸಿ ಎಲ್.ಐ.ಸಿ ಆಧಾರಿತ ಪೆನ್ಷನ್ ನೀಡಬೇಕು. ಎನ್.ಪಿ.ಎಸ್ ಮಾನದಂಡದಂತೆ ವೇತನ ವಂತಿಕೆ ಆಧಾರಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ನಿವೃತ್ತರಿಗೆ ?6 ಸಾವಿರ ಪಿಂಚಣಿ ಕೊಡಬೇಕು. ಸೇವಾ ಜೇಷ್ಠತೆ ಆಧಾರದ ಮೇಲೆ ಕನಿಷ್ಟ ವೇತನ ಜಾರಿ ಮಾಡಬೇಕು. ಮೇಲ್ವಿಚಾರಕಿಯಾಗಿ ಮುಂಬಡ್ತಿ ಹೊಂದುವ ಹುದ್ದೆಗಳನ್ನು ಸಂಪುರ್ಣವಾಗಿ ಅಂಗನವಾಡಿ ನೌಕರರಿಗೆ ಕೊಟ್ಟು, ಮುಂಬಡ್ತಿ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಮುಖಂಡ ಜೆ.ಸತ್ಯಬಾಬು, ಖಜಾಂಚಿ ಜಿ.ಶಕುಂತಲ, ಪ್ರಧಾನ ಕಾರ್ಯದಶರ್ಿ ಕೆ.ನೀಲಾ, ಎ.ಮಲ್ಲಮ್ಮ, ಅಧ್ಯಕ್ಷೆ ಬಿ.ಉಮಾ ಇದ್ದರು.