ಐನಾಪುರ 29:
ಸಂತಸದ ಬದುಕಿಗೆ ಸಮೃದ್ಧಿ ಅವಶ್ಯ. ಅಂತರಂಗ- ಬಹಿರಂಗ ಸಮೃದ್ಧಗೊಂಡಾಗ ಬದುಕು ಸುಂದರಗೊಳ್ಳುತ್ತದೆ.
ಭೌತಿಕ ಸಂಪತ್ತಿಗಿಂತ, ಅಧ್ಯಾತ್ಮದ ಸಂಪತ್ತು, ಸುಖ ಸಂತೋಷಕ್ಕೆ ಮುಖ್ಯ ಹೃದಯವಂತರೇ ನಿಜವಾದ ಸಿರಿವಂತರು
ಎಂದು ನಿವೃತ್ತ ಅಥಣಿ ಗಚ್ಚಿನ ಮಠದ ಶಿವಬಸವ ಮಹಾಸ್ವಾಮಿಗಳು ಹೇಳಿದರು.
ದೀಪಾವಳಿ ಹಬ್ಬದ ನಿಮಿತ್ಯ ಶುಕ್ರವಾರ ದಿ.27ರಂದು ಅಥಣಿ
ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಮಹಾವೀರ ಪಡನಾಡ ಅವರು ತಮ್ಮ ತಂದೆ ಬಾಬುರಾವ ಪಡನಾಡ ಅವರ ಸ್ಮರಣಾರ್ಥ
ದೀಪಾವಳಿ ಉಡುಗೊರೆ ಹಾಗೂ ರಾಜ್ಯ ಮಟ್ಟದ ಸಾಂಸ್ಕೃತಿಕ ಮಾಣಿಕ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ
ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಸ್ವಾರ್ಥಕ್ಕಾಗಿ ಬಂಗಾರ,
ಬೆಳ್ಳಿ, ಹಣ ಹಾಗೂ ಬಟ್ಟೆಗಳನ್ನು ಹಂಚುವುದನ್ನು ಕೇಳಿದ್ದೇವೆ, ಕಂಡಿದ್ದೇವೆ. ಆದರೆ ಮಹಾದಾನಿ ಮಹಾವೀರ
ಪಡನಾಡ ಅವರು ಯಾವುದೇ ಫಲಾಪೇಕ್ಷೆ ಬಯಸದೆ ಗ್ರಾಮದ ಜನರಿಗೆಲ್ಲ ಬೆಳ್ಳಿ, ಬಂಗಾರದ ವಡವೆಗಳು ಹಾಗೂ ವಸ್ತ್ರದಾನವನ್ನು
ದಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಥಣಿ ಶಾಸಕ ಮಹೇಶ ಕುಮಠಳ್ಳಿ ದೇಶದಲ್ಲಿಂದು ಸಾವಿರಾರು ಜನರು
ಶ್ರೀಮಂತರಿದ್ದಾರೆ. ಅವರಿಗೆಲ್ಲ ದಾನ ಮಾಡುವ ಗುಣವಿರುವದಿಲ್ಲ. ಆದರೆ ಮಹಾವೀರ ಪಡನಾಡ ಅವರು ಕೃಷಿಕರಾದರೂ
ಕೂಡ ಕಳೆದ ಹಲವಾರು ವರ್ಷಗಳಿಂದ ಬಡವರಿಗೆ ದಾನ ಮಾಡುತ್ತ ಬಂದಿರುವುದು ಶ್ಲಾಘನೀಯ, ಅವರ ಸಮಾಜಮುಖಿ
ಕಾರ್ಯ ಹೀಗೆಯೇ ಮುಂದುವರಿಯಲಿ ಎಂದು ರಾವಸಾಬ ಹಗೆದ ವಕೀಲರು ಹೇಳಿದರು.
ಹೂ ಹಂಚುವ ಕೈಗಳಿಗೆ ಪರಿಮಳ ಸಹಜ ಹತ್ತುವಂತೆ ಮಹಾವೀರ ಪಡನಾಡ
ಅವರು ಮಾಡುವ ಸೇವಾ ಕಾರ್ಯದಿಂದ ಬಡ ಜನರಿಗೆ ಒಳಿತಾಗಲಿದೆ ಎಂದರು.
ಸಮಾಜ ಸೇವಕ ಮಹಾವೀರ ಪಡನಾಡ ಮಾತನಾಡಿ ಹಿಂದಿನ ಕಾಲದಲ್ಲಿ
ಅವರ ತಂದೆ ಬಾಬುರಾವ ಪಡನಾಡ ಅವರು ಸಂಕೋನಟ್ಟಿ ಗ್ರಾಮದ ಜನರಿಗೆ ಆಹಾರ ಧಾನ್ಯ ಬಟ್ಟೆ ವಿತರಿಸುತ್ತಿದ್ದರು.
ಅದರಂತೆ ತಾವು ಸಹ ಪ್ರತಿ ವರ್ಷ ಬಡವರ ಅಳಿಲು ಸೇವೆ ಮಾಡುತ್ತಿದ್ದೇನೆಂದರು. ಹಣ ಗಳಿಕೆಯೊಂದೇ ಜೀವನದ
ಗುರಿಯಲ್ಲ. ಗುಣ ಸಂಪಾದನೆ-ಸಂಸ್ಕಾರ ಆದರ್ಶ ಮೌಲ್ಯಗಳನ್ನು ಹೊಂದಿ ದೂರದೃಷ್ಟಿ ಮತ್ತು ಸಾಮಾಜಿಕ ಶ್ರೇಯೋಭಿವೃದ್ದಿಗೆ
ಶ್ರಮಿಸಿ ತಮ್ಮ ಶಕ್ತಿ ಇರುವವರೆಗೆ ಧರ್ಮ ಹಾಗೂ ಸಮಾಜ ಮುಖಿಯಾಗಿ ಕಾರ್ಯ ಮಾಡಬೇಕೆಂಬ ಸಂಕಲ್ಪ ತಮ್ಮದಾಗಿದೆ
ಎಂದು ಅಭಿಪ್ರಾಯಪಟ್ಟರು.
ಮಹಾವೀರ ಪಡನಾಡ ಅವರ ಧರ್ಮಪತ್ನಿ ಕಲ್ಪನಾತಾಯಿ ಪಡನಾಡ,
ತಾಯಿ ಗೋದಾಬಾಯಿ ಪಡನಾಡ, ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ,ಅಭಿಯಂತರ ಅರುಣಕುಮಾರ ಯಲಗುದ್ರಿ,
ರೇಖಾ ಪಾಟೀಲ ಚಂದ್ರಕಾಂತ ಪಡನಾಡ, ಅಶೋಕ ಪಡನಾಡ, ಸುನೀಲ ಪಡನಾಡ, ಸುರೇಶ ಪಡನಾಡ, ಮಲ್ಲಯ್ಯ ಹಿರೇಮಠ,
ಶೇಖರ ಬಹುರೂಪಿ, ಸುವರ್ಣ ಹೊಸಮಠ, ಚರಂತಯ್ಯ ಮಳಿಮಠ, ಜಿ.ಕೆ.ನಾಗರಾಜ, ಬಸವರಾಜ ಸುಣಗಾರ, ಗುರುಪಾದಯ್ಯ
ಸಾಲಿಮಠ, ಸದಾಶಿವ ಐಹೋಳೆ, ಗಣೇಶ ಮೋಫಗಾರ, ಮಂಜುಳಾ ಹಿರೇಮಠ ಸೇರಿದಂತೆ ಗ್ರಾಮದ ಸಾವಿರಾರು ನಾಗರಿಕರು
ಉಪಸ್ಥಿತರಿದ್ದರು.