ಉದ್ದ ಜಿಗಿತ ಮುಖ್ಯ ಗುರು ಪಾಂಡ್ಯನಾಯ್ಕ್ ರಾಜ್ಯ ಮಟ್ಟಕ್ಕೆ ಆಯ್ಕೆ
ಹೂವಿನ ಹಡಗಲಿ 10: ಪ್ರಸಕ್ತ ಸಾಲಿನ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಹಿರೇ ಹಡಗಲಿ ವಿ ಕೆ ಕೆ ಪ್ರೌಢಶಾಲಾ ಮುಖ್ಯ ಗುರುಗಳಾದ ಪಾಂಡ್ಯನಾಯ್ಕ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿದ್ದಾರೆ.ಅಭಿನಂದನೆ: ರಾಜ್ಯ ಮಟ್ಟದ ಸ್ಪರ್ಧೆಯಲ್ಲಿಯೂ ಯಶಸ್ಸು ನಿಮ್ಮದಾಗಲಿ ಎಂದು ತಾಲೂಕು ದೈಹಿಕ ಅಧೀಕ್ಷಕರಾದ ರಫಿ ಅಹಮದ್ ಖವಾಸ್, ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.