ಭಗವಾನ್ ಮಹಾವಿರ ಜಯಂತಿ ಕಾರ್ಯಕ್ರಮ
ಬ್ಯಾಡಗಿ 10: ಅಹಿಂಸಾ ತತ್ವಕ್ಕೆ ವಿಶ್ವದ ಇಡೀ ಮಾನವ ಕುಲವನ್ನು ಒಂದುಗೂಡಿಸುವ ಶಕ್ತಿಯಿದೆ. ಅಂಥ ತತ್ವ ಬೋಧಿಸಿದ ಭಗವಾನ ಮಹಾವಿ?ರರ ಸಂದೇಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ಹಾಗೂ ಬ್ಯಾಡಗಿ ಜೈನ ಸಮುದಾಯದ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕಳಗೂಂಡ ಹಾಗೂ ಹೀರೆಹಳ್ಳಿ ಗ್ರಾಮದಲ್ಲಿ ಭಗವಾನ್ 1008,ಮಹಾವಿರ ತೀರ್ಥಂಕರರ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಬಾಹ್ಯ ಅಭಿವೃದ್ಧಿ ಜೊತೆಗೆ ಒಗ್ಗಟ್ಟನ್ನು ಕಾಪಾಡುವ ಆಂತರಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮಹಾವಿ?ರರ ಉಪದೇಶಗಳು ಹಿಂದೆಂದಿಗಿಂತಲೂ ಇಂದು ಪ್ರಸ್ತುತವಾಗಿವೆ. ಭಾರತವು ಸಮೃದ್ಧ, ಸಮರ್ಥ ದೇಶವಾಗಲು ಮಹಾವಿ?ರರಂತಹ ಮಹನೀಯರ ತತ್ವಗಳನ್ನು ಪಾಲಿಸಬೇಕು ಮಹಾವೀರ ತೀರ್ಥಂಕರರು ಸತ್ಯ ಸಾಕ್ಷಾತ್ಕಾರ, ತ್ಯಾಗ-ಸಂಯಮ, ಅವಿರತ ಸಾಧನೆಯಿಂದ ಜೀವನದ ಪರಮೋನ್ನತ ಸ್ಥಿತಿ ಹೊಂದಲು ಸಾಧ್ಯ. ಮಹಾತ್ಮರ ತತ್ವಾದರ್ಶಗಳ ಪಾಲನೆ ಮೂಲಕ ಲೌಕಿಕ ಜೀವನವನ್ನು ಉತ್ತಮವಾಗಿಸಿಕೊಳ್ಳಲು ಸಾಧ್ಯ ಮಹಾವಿ?ರರ ಬೋಧನೆಗಳಾದ ಅಹಿಂಸೆ, ಸತ್ಯಮಾರ್ಗ, ಆಸ್ಥೆಯ, ಬ್ರಹ್ಮಚರ್ಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ಉತ್ತಮ ಜೀವನದ ಜೊತೆ ಮುಕ್ತಿ ಗುರಿಯನ್ನು ಕೂಡ ತಲುಪಬಹುದಾಗಿದೆ ಎಂದು ಹೇಳಿದರು.ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ಹಾಗೂ ತಹಶೀಲ್ದಾರ್ ಫಿರೋಜ್ ಷಾ ಸೊಮನಕಟ್ಟಿ ಮಾತನಾಡಿ ಕಾಲಾನುಕಾಲಕ್ಕೆ ಋುಷಿ ಮುನಿಗಳು, ಮಹಾತ್ಮರು ಅವತರಿಸಿ, ನಮಗೆ ಪರಮಾತ್ಮನ ದರ್ಶನ ಜೊತೆಗೆ ಜೀವನಾರ್ದಶಗಳ ದಾರಿ ತೋರುತ್ತಿದ್ದಾರೆ. ಅವರಲ್ಲಿ ಭಗವಾನ ಮಹಾವಿ?ರರು ತೇಜಸ್ವಿ ನಕ್ಷ ತ್ರವಾಗಿದ್ದಾರೆ ಎಂದು ಹೇಳಿದರು. ಜಿಲ್ಲಾ ಉಪಾಧ್ಯಕ್ಷ ಶಿವರಾಯಪ್ಪ ಅಪ್ಪಣ್ಣನವರ ಮಾತನಾಡಿ, ಜೈನ ಧರ್ಮವು ಕ್ರಿ.ಶ. ಪೂರ್ವ 600 ರಲ್ಲೆ? ಪ್ರಚಲಿತದಲ್ಲಿತ್ತು. ಭಗವಾನ ಮಹಾವಿ?ರರ ವೈಜ್ಞಾನಿಕ ಬೋಧನೆಗಳಿಂದ ಇಂದಿನ ಅಧುನಿಕ ಯುಗದಲ್ಲೂ ಕೂಡ ಜೈನ ಧರ್ಮದ ತತ್ವ-ಸಂದೇಶಗಳು ಬಹು ಪ್ರಸ್ತುತವಾಗಿವೆ .ಒಂದು ಕ್ಷ ಣದ ಕೆಟ್ಟ ಘಟನೆ ಅಥವಾ ಸಂಗತಿ ಮರುಕ್ಷ ಣವೇ ಉತ್ತಮವಾಗಿರುವ ಸಾಧ್ಯತೆಯನ್ನು ಜೈನ ಧರ್ಮ ತೆರೆದಿಡುತ್ತದೆ. ಈ ತತ್ವವನ್ನು ಸರಿಯಾಗಿ ಅರಿತು ಆಚರಣೆಗೆ ತಂದಲ್ಲಿ ಬಹಳಷ್ಟು ಯುದ್ಧ, ಪರಸ್ಪರ ದ್ವೆ?ಷ ಸಾಧನೆ, ಅಸೂಯೆಗಳನ್ನು ನಿಲ್ಲಿಸಬಹುದಾಗಿದೆ ಎಂದು ಶಿವರಾಯಪ್ಪ ಹೇಳಿದರು. ಉಪನ್ಯಾಸವನ್ನು ಚಳಗೇರಿ ಸರ್ ಮಾತನಾಡಿ ಮಹಾವಿ?ರರ ಜೀವನ-ಸಾಧನೆ ಕುರಿತು ಮಾತನಾಡುತ್ತ, ಜೈನ ಧರ್ಮದ 24 ನೇ ತೀರ್ಥಂಕರ ಮಹಾವಿ?ರರು ಅಪ್ರತಿಮ ಸಾಹಸಿಗಳಾಗಿದ್ದರು. ನಿರಂತರ ಸಾಧನೆಯಿಂದ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡು, ಅಹಿಂಸೆಯೇ ಧರ್ಮವೆಂದು ಬೋಧಿಸಿದರು ಎಂದರು.ಮೆರವಣಿಗೆಸಭಾ ಕಾರ್ಯಕ್ರಮದ ನಂತರ ಕಳಗೊಂಡ ಗ್ರಾಮದಲ್ಲಿ ಮಹಾವೀರರ ದೇವಸ್ಥಾನದಿಂದ ತಿರ್ಥಂಕರರ ಭಾವ ಚಿತ್ರ ಮೂಲಕ ಗ್ರಾಮಗಳಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿದರು ಮೆರವಣಿಗೆ ಗ್ರಾಮದಲ್ಲೆಲ್ಲಾ ಸಾಗಿ ದೇವಸ್ಥಾನ ತಲುಪಿತು.ಈ ಸಂದರ್ಭದಲ್ಲಿ ತಹಶೀಲ್ದಾರ್ ಫಿರೋಜ್ ಷಾ ಸೊಮನಕಟ್ಟಿ.ಮುಖಂಡರಾದ ನಾಗರಾಜ ಆನ್ವೇರಿ.ಶಿವನಗೌಡ ಪಾಟೀಲ.ವಕೀಲರಾದ ಗೌರಾಪುರ.ನಾಗರಾಜ ಅಪ್ಪಣ್ಣನವರ.ಜಯಪ್ಪ ಕಡೂರ.ಬಾಹುಬಲಿ ಜೈನ. ರಾಮಣ್ಣ ಮಾಸಣಗಿ.ಶಿವರಾಯಪ್ಪ ಅಪ್ಪಣನವರ.ಸಂಜೀವ ದುಂಡಸಿ.ಗುಣಪಾಲ .ಮಲ್ಲನಗೌಡ್ರ ಗಂಟಿಗೌಘಡ್ರ.ಬಸವರಾಜ ಬನ್ನಿಹಳ್ಳಿ.ಮಲ್ಲೇಶಪ್ಪ ದಿಡಗೂರ.ಕೋಟ್ರೇಯೈಸ್ವಾಮಿ ಮಠದ.ಅಕ್ಬರಸಾಬ ಹುಬ್ಬಳ್ಳಿ.ಗುಡ್ಡಪ್ಪ ಬನ್ನಿಹಳ್ಳಿ.ಗಣೇಶ ಬಣಕಾರೀ್ವರುಪಾಕ್ಷಣ್ಣ ಅಂಗಡಿ.ಗಣೇಶಣ್ಣ ಚಿಕ್ಕಳ್ಳಿ.ಶಿವರುದ್ರ್ಪ ಮೂಡೆರ್.ಎಂ ಎಂ ಪಾಟೀಲ.ಉಲ್ಲಾಳ ಗುರುಗಳು.ಹಾಗೂ ಸಮುದಾಯದ ಮುಖಂಡರು ನಾಗರಿಕರು ಉಪಸ್ಥಿತರಿದ್ದರು.