ಆರೋಗ್ಯ ಮತ್ತು ಕ್ಷೇಮ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
ಹಾನಗಲ್ 15: ತಾಲೂಕಿನ ಕಿರವಾಡಿ ಗ್ರಾಮದಲ್ಲಿ ಶನಿವಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ 15 ನೇ ಹಣಕಾಸು ಯೋಜನೆಯಡಿ 65 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. ತಾಲೂಕಿನ ಕಿರವಾಡಿ, ಹರವಿ ಮತ್ತು ಮಾರನಬೀಡ ಗ್ರಾಮಗಳಲ್ಲಿ ನೂತನವಾಗಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಜನರಿಗೆ ಪ್ರಾಥಮಿಕ ಹಂತದ ಆರೋಗ್ಯ ಸೇವೆ ದೊರಕಿಸುವಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಗ್ರಾಮೀಣ ಜನರು ದೂರದ ನಗರ ಪ್ರದೇಶಗಳಿಗೆ ತೆರಳಿ ಆರೋಗ್ಯ ಸೇವೆ ಪಡೆಯುವುದನ್ನು ತಪ್ಪಿಸಿ ತಮ್ಮ ಮನೆಯ ಸಮೀಪದಲ್ಲೇ ಆರೋಗ್ಯ ಸೇವೆ ಪಡೆಯಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ. ಇದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕಾಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗಲಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಪುಷ್ಪಾ ಕುಮಾರಸ್ವಾಮಿ ಹಿರೇಮಠ,ಉಪಾಧ್ಯಕ್ಷ ಮಾರುತಿ ಭಜರಂಗಿ, ಸದಸ್ಯರಾದ ಯಲ್ಲಪ್ಪ ಕಲ್ಲೇರ, ನಿರಂಜನಗೌಡ ಪಾಟೀಲ, ಶಿವಲಿಂಗಪ್ಪ ಕುಬಟೂರ, ಮುಖಂಡರಾದ ಪರಶುರಾಮ ಮುದಿಯಣ್ಣನವರ, ಪ್ರಕಾಶ ಕಿರವಾಡಿ, ಹನುಮಂತ ತಳವಾರ, ಸುನೀಲಗೌಡ ಪಾಟೀಲ, ಜಗದೀಶಗೌಡ ಪಾಟೀಲ, ಮಂಜು ಗೊರಣ್ಣನವರ, ರಾಮಚಂದ್ರ ಕಲ್ಲೇರ, ಫಯಾಜ್ ಲೋಹಾರ, ಸಿದ್ದರಾಮೇಶ ಸಿ.ಕೆ., ಮಹೇಶ ಹಾದಿಮನಿ, ಶಂಕ್ರ್ಪ ಹಾದಿಮನಿ, ಮಾಲತೇಶ ಕಿರವಾಡಿ, ಹೊನ್ನಪ್ಪ ತಳವಾರ, ಪ್ರಕಾಶ ವಡ್ಡರ, ವಸಂತ ವೆಂಕಟಾಪೂರ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.