ಮಹಾಂತೇಶ ಬೇವೂರ ರಾಷ್ಟ್ರಮಟ್ಟದ ಪ್ಯಾರ ಓಲಂಪಿಕ್‌ಗೆ ಆಯ್ಕೆ,

Mahantesh Bevoor selected for national level Para Olympics

ಮಹಾಂತೇಶ ಬೇವೂರ ರಾಷ್ಟ್ರಮಟ್ಟದ ಪ್ಯಾರ ಓಲಂಪಿಕ್‌ಗೆ ಆಯ್ಕೆ  

ಗದಗ  8 :  ಇತ್ತೀಚಿಗೆ  ಮೈಸೂರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜರುಗಿದ 33 ನೇ  ರಾಜ್ಯಮಟ್ಟದ ಪ್ಯಾರಾ ಅಥ್ಲೇಟಿಕ್ಸ್‌ ಕ್ರೀಡಾಕೂಟದಲ್ಲಿ  ಮಹಾಂತೇಶ  ಬೇವೂರ ಅವರು ಎಫ್ 56 ವಿಭಾಗದಲ್ಲಿ ಜಾವಲಿನ್(ಬರ್ಚಿ) ಎಸೆತ ದಲ್ಲಿ ಗೋಲ್ಡ್‌ ಮೆಡಲ್‌ದೊಂದಿಗೆ  ಪ್ರಥಮ ಸ್ಥಾನ ಹಾಗೂ ಡಿಸ್ಕಸ್ (ಚಕ್ರ) ಎಸೆತದಲ್ಲಿ ಕಂಚಿನ ಪದಕ ತೃತೀಯ ಸ್ಥಾನ ಪಡೆದು ಗದಗ  ಜಿಲ್ಲೆಯ  ಕೀರ್ತಿಯನ್ನು ಹೆಚ್ಚಿಸಿದ್ದಾರೆ ಹಾಗೂ ಇದೆ ಫೆಬ್ರುವರಿ 17 ರಿಂದ 20ವರೆಗೂ ಚನೈನಲ್ಲಿ ನಡೆಯಲಿರುವ 23ನೇ ರಾಷ್ಟಮಟ್ಟದ  ಅಂಗವಿಲರ ಓಲಂಪಿಕ ಕ್ರೀಡಾಕೂಟಕ್ಕೆ  ಆಯ್ಕೆಯಾಗಿದ್ದಾರೆ.   

   ಸಾಧನೆ ಮಾಡಿದ  ಕ್ರೀಡಾಪಟುವಿಗೆ ತರಬೇತಿ  ನೀಡಿದ ಫೀನಿಕ್ಸ್‌ ಸ್ಪೋರ್ಟ್ಸ ಕ್ಲಬ್‌ನ ಮುಖ್ಯ ತರಬೇತುದಾರರಾದ ರಿಚರ್ಡ್‌ ಧರ್ಮದಾಸ  ಅವರಿಗೆ  ಹಾಗೂ ಸದಸ್ಯರಾದ ಆನಂದ ಬೇಂದ್ರೆ, ನಾಸೀರುದ್ದೀನಶಾ ಮಕಾಂದರ, ಚಂದ್ರ​‍್ಪ ಭರಮಣ್ಣವರ, ಸುನೀಲ ಯಂಕಣ್ಣವರ, ಮಂಜುನಾಥ ಪಂತಾರ, ಚೇತನಕುಮಾರ ಆಮ್ರದ ಅವರು ಅಭಿನಂಧನೆ ಸಲ್ಲಿಸಿದ್ದಾರೆ.