ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗ,ಜಿಕಾ ವೈರಸ್ ಅರಿವು ಮೂಡಿಸುವ ಕಾರ್ಯಕ್ರಮ

Malaria, Encephalitis, Elephantiasis, Zika Virus Awareness Program

 ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗ,ಜಿಕಾ ವೈರಸ್ ಅರಿವು ಮೂಡಿಸುವ ಕಾರ್ಯಕ್ರಮ 

ಗದಗ   03: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ ವಿಭಾಗ ಗದಗದಲ್ಲಿ ಡೆಂಗೀ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗದಗ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಡಾ.ಹೆಚ್‌.ಎಲ್ ಗಿರಡ್ಡಿ,  ಪ್ರಾಸ್ತಾವಿಕವಾಗಿ ಮಾತನಾಡಿ ಸಾಂಕ್ರಾಮಿಕ ರೋಗಗಳಾದ ಡೆಂಗೀ, ಚಿಕುನ್‌ಗುನ್ಯಾ, ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗ, ಮತ್ತು ಜಿಕಾ ವೈರಸ್ ಸೊಳ್ಳೆಗಳಿಂದ ಹರಡುವಂತಹ ರೋಗಳಾಗಿವೆ. ಮುಂಗಾರಿನ ಮಳೆಗಾಲದಲ್ಲಿ ಮಳೆ ಪ್ರಾರಂಭವಾದ ಕುರಿತು ರೋಗಗಳು ಹರಡುವ ಬಗ್ಗೆ ಕಾಯಿಲೆಗಳಿಂದ ಮನುಷ್ಯರಲ್ಲಿ ಕಾಣುವ ಲಕ್ಷಣಗಳು ಮುಖ್ಯವಾಗಿ ಡೆಂಗೀ ಕಾಯಿಲೆಯಲ್ಲಿ ಹಣೆಯ ಮುಂಭಾಗದಲ್ಲಿ ನೋವು, ಕಣ್ಣುಗಳ ಚಲನೆಯ ತೊಂದರೆ, ಮಾಂಸ ಖಂಡಗಳ ನೋವು, ವಿಪರೀತ ಜ್ವರ, ಹೋಟ್ಟೆ ನೋವು, ಸುಸ್ತು, ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ ಎಂದು ವಿವರಿಸುತ್ತಾ ಇವುಗಳ ಚಿಕಿತ್ಸಾ ವಿಧಾನದ ಬಗ್ಗೆ ಯಾವುದೇ ಜ್ವರ ಇರಲಿ ರಕ್ತ ಪರೀಕ್ಷೆಯ ಮಾಡಬೇಕೆಂದು ಮತ್ತು ಮಲೇರಿಯಾ ಕುರಿತು ಮಾತನಾಡುತ್ತಾ ಮಲೇರಿಯಾ ರೋಗವು ಅನಾಫಿಲಿಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ರೋಗ ಬರುತ್ತದೆ, ಹೆಚ್ಚಾನ ಹೆಚ್ಚು ಗೋವಾ, ದಕ್ಷಿಣ ಕನ್ನಡ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಲೇರಿಯಾ ರೋಗವು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದು, ನಮ್ಮ ಭಾಗದ ಜನರು ಅಲ್ಲಿ ದುಡಿಯಲಿಕ್ಕೆ ಹೋದತಂಹ ಸಂದರ್ಭದಲ್ಲಿ ಮಲೇರಿಯಾ ರೋಗ ಕಾಣಿಸಿಕೊಳ್ಳುತ್ತದೆ, ಅವರಲ್ಲಿ ಮಾಂಸ ಖಂಡಗಳ ನೋವು, ವಿಪರೀತ ಜ್ವರ, ಬೇವರುವುದು, ಜ್ವರ ಬಿಟ್ಟು ಜ್ವರ ಬರುವುದು, ಹೋಟ್ಟೆ ನೋವು, ಸುಸ್ತು ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ, ಮರಳಿ ಈ ಭಾಗಕ್ಕೆ ಬಂದಾಗ ಆಶಾ ಕಾರ್ಯಕರ್ತೆಯರು ್ಘ ಆರೋಗ್ಯ ಇಲಾಖಾ ಸಿಬ್ಬಂದಿ ವರ್ಗದವರು ಬೇಟಿ ನೀಡಿ ರಕ್ತ ಪರೀಕ್ಷೆ ಮಾಡಿ ಮಲೇರಿಯಾ ಖಚಿತಪಟ್ಟ ರೋಗಿಗೆ ಚಿಕಿತ್ಸೆ ನೀಡುತ್ತಾರೆ, ಎಂದು ತಿಳಿಸಿದರು.  ಜಿಲ್ಲೆಯ ಕೀಟಜನ್ಯ ಶಾಸ್ತ್ರಜ್ಞರಾದ ಶ್ರೀಮತಿ ಅನ್ನಪೂರ್ಣ ಶೆಟ್ಟರ, ರವರು ಮಾತನಾಡುತ್ತಾ ಈಡೀಸ್ ಸೊಳ್ಳೆಗಳು ಉತ್ಪತ್ತಿ ಹಾಗೂ ನಿಯಂತ್ರಣ ಕುರಿತು ವಿವರಿಸುತ್ತಾ ಈಡೀಸ್ ಜಾತಿಯ ಸೊಳ್ಳೆಗಳು ವಿಶಿಷ್ಠ ಲಕ್ಷಣಗಳಾದ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುವವು, ಶುದ್ದವಾದ ನೀರಿನಲ್ಲಿ ಮತ್ತು ನೀರು ಶೇಖರಣಾ ಪರಿಕರಗಳು ಘನ ತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ ವಂಶಾಭಿವೃದ್ಧಿಯಾಗುವ ಕುರಿತು ವಿವರಿಸಿದರು, ಈಡೀಸ್ ಸೊಳ್ಳೆಗಳು, ಮೊಟ್ಟೆಗಳು, ಸುಕ್ತಾವ್ಯಸ್ಥೆಯಲ್ಲಿ ತಿಂಗಳಗಟ್ಟಲೆ ಇರುವ ಕುರಿತು ತಿಳಿಸಿ, ಟೈರ್‌ಗಳು, ಟೂಬ್, ಪ್ಲಾಸ್ಟಿಕ್ ತ್ಯಾಜ್ಯಗಳು, ಮೋಟಾರ ವಾಹನಗಳ ಬೀಡಿ ಭಾಗಗಳಲ್ಲಿ, ಪೈಯರ್ ಬಕೆಟುಗಳಲ್ಲಿ, ಸಂಗ್ರಹಬಿರುವ ನೀರಿನಲ್ಲಿ ಈಡೀಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವ ಕುರಿತು ವಿವರಿಸಿ ಇವುಗಳ ನಿಯಂತ್ರಣಕ್ಕಾಗಿ ಟೈರ್‌ಗಳನ್ನು ಮಳೆ ನೀರು ಸಂಗ್ರಹವಾಗದಂತಾಹ ಪ್ರದೇಶಗಲ್ಲಿ ವಿಲೇವಾರಿ ಮಾಡುವುದು, ಲಾರ್ವಾ ನಾಶಕ ಬಳಸುವುದು, ಪ್ಲಾಸ್ಟಿಕ್ ಹೋದಿಕೆಯಿಂದ ನೀರು ಶೇಖರಣೆಯಾಗದಂತೆ ನೋಡಿಕೊಳ್ಳುವುದು, ಕಾರ್ಮಿಕರಿಗೆ ಸೊಳ್ಳೆ ನಿರೋಧಕಗಳನ್ನು ಬಳಸುವುದು, ಕುರಿತು ತಿಳಿಸಿದರು. ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ರಿಯಾಜ್ ಖಾ. ಘೂಡುನಾಯ್ಕರ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ವಂದನೆ ಸಲ್ಲಿಸಿದರು. ಡಿ. ಎಮ್ ದೇವರಾಜ, ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಗದಗ ಇವರು ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಲಯದ ಸಿಬ್ಬಂದಿಗಳಾದ ಅಜಯಕುಮಾರ ಆರ್ ಕಲಾಲ, ಮಹಮ್ಮದರಫಿ ಕದಾಂಪೂರ, ಈರಣ್ಣ ಎಸ್ ಚಲ್ಮಿ, ಅನೀತಾ ಬಾಗಲಕೋಟ ಹಾಗೂ ಗದಗ ವಿಭಾಗೀಯ ನಿಯಂತ್ರಣ ಅಧಿಕಾರಿಗಳ ಕಾರ್ಯಲಯದ ಸಿಬ್ಬಂದಿ ವರ್ಗದವರು ಭಾಗವಹಿಸದರು.