ನಿಡಸೋಶಿ ಮಠದ ಪೀಠಕ್ಕಾಗಿ ಶ್ರೀಗಳ ನಡುವೆ ಕಿತ್ತಾಟ : ಕಿರಿಯ ಶ್ರೀಗಳಿಂದ ಉಪವಾರ ಸತ್ಯಾಗ್ರಹ

Rivalry among monks for the seat of Nidasoshi Matha : Upavar Satyagraha by younger monks

ಪಾರೇಶ ಭೋಸಲೆ

ಬೆಳಗಾವಿ : ಉತ್ತರ ಕರ್ನಾಟಕದ ಪುಣ್ಯಕ್ಷೇತ್ರಗಳಲ್ಲಿ ಪುರಾತನ ಇತಿಹಾಸವನ್ನು ಹೊಂದಿರುವ ಹಾಗೂ ದಾಸೋಹ ಪರಂಪರೆಯ ಜೊತೆಗೆ ಶಿಕ್ಷಣಕ್ಕೆ ಒತ್ತು ಕೊಟ್ಟು ಗಡಿಭಾಗದ ಭಕ್ತಿಯ ಶ್ರದ್ದಾಕೇಂದ್ರವಾಗಿರುವ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯ ಶ್ರೀ ದುರದುಂಡಿಶ್ವರ ಮಠದಲ್ಲಿ ಇಬ್ಬರು ಶ್ರೀಗಳಲ್ಲಿ ಪೀಠದ ಪಟ್ಟಕ್ಕಾಗಿ ಹಿರಿಯ ಹಾಗೂ ಕಿರಿಯ ಶ್ರೀಗಳಲ್ಲಿ ಗುದ್ದಾಟ ನಡೆಯುತ್ತಿದ್ದು, ಮಠದಲ್ಲಿ ತಮಗೆ ಎಲ್ಲ ಬಗೆಯ ಅಧಿಕಾರ ನೀಡುವಂತೆ ಕಿರಿಯ ಶ್ರೀಗಳು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. 

  ಆದರೆ ಈ ಇಬ್ಬರು ಶ್ರೀಗಳ ಪೀಠಕ್ಕಾಗಿ ಕಿತ್ತಾಟ ನಡೆಸಿರುವದು ಭಕ್ತರ ಪಾಲಿಗೆ ಇರುಸುಮುರುಸು ಮಾಡಿದೆ. ಇದರಿಂದ ಶ್ರೀ ಮಠದ ಭಕ್ತರು ಮಠದಿಂದ ದೂರ ಉಳಿದುಕೊಳ್ಳುವಂತೆ ಪರಿಸ್ಥಿತಿ ಎದುರಾಗಿದೆ.

    ಈ ಕುರಿತು ಉತ್ತರಾಧಿಕಾರಿ ಯಾಗಿರುವ ಉತ್ತರಾಧಿಕಾರಿ ನಿಜಲಿಂಗೇಶ್ವರ  ಶ್ರೀಗಳು ಮಾತನಾಡಿ, ಕಳೆದ 2023ರಲ್ಲಿ ನನ್ನನ್ನು ಉತ್ತರಾಧಿಕಾರಿಯಾಗಿ ಕರೆದುಕೊಂಡು ಬಂದಿದ್ದಾರೆ. ನನಗೆ ಅಧಿಕಾರ ಹಸ್ತಾಂತರ ಮಾಡದೆ. ಕನಿಷ್ಠ ವಾದ ಸೌಜನ್ಯ ನಡುವಳಿಕೆ ಅಥವಾ ಗೌರವ ನೀಡುತ್ತಿಲ್ಲ. ನನ್ನ ನೌಕರನಂತೆ ನೋಡಿಕೊಳ್ಳತ್ತಿದ್ದಾರೆ. 

    ಈ ಹಿಂದೆ ಎಲ್ಲ ಬಗೆಯ ಅಧಿಕಾರ ನೀಡುವಂತೆ ನಾನು ಮೂರು ಭಾರಿ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದೇನೆ. ಇವಾಗ ನಾಲ್ಕನೆಯ ಬಾರಿ ಉಪವಾಸ ಸತ್ಯಾಗ್ರಹವನ್ನು ಮಾಡತಾ ಇದ್ದೇನೆ. ಹಿರಿಯ ಶ್ರೀಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳತಾ ಇಲ್ಲ. ಈ ಹಿನ್ನೆಲೆಯಲ್ಲಿ ತಾವು ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿರುವದಾಗಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ  ಶ್ರೀಗಳು ಹೇಳಿದ್ದಾರೆ. 

  ನಾನು ಮಠಕ್ಕೆ ಬರುವಾಗ ಮಠದಲ್ಲಿನ ಚೆಕ್ ಮೇಲೆ ಸಹಿ ಸಮೇತವಾಗಿ ಎಲ್ಲ ಅಧಿಕಾರ ನೀಡುವದಾಗಿ ಹೇಳಿದ್ದರು. ಪ್ರತಿ ತಿಂಗಳು ಒಂದು ಲಕ್ಷ ಹಣವನ್ನು ನನಗೆ ನೀಡುವದಾಗಿ ಹೇಳಿದ್ದರು. ಆ ರೀತಿ ಕಾಗದ ಪತ್ರಗಳಲ್ಲಿ ನಮೋದಿಸಲಾಗಿದೆ. ಆದರೆ  ಆ ರೀತಿ ನಡೆದುಕೊಳ್ಳತಾ ಇಲ್ಲ. ಬಸವ ಜಯಂತಿ ಬಳಿಕ ಪಟ್ಟಾಧಿಕಾರ ಮಾಡೊನ ಎಂದಿದ್ದರು. ಆದರೆ ಎ.ಬಿ. ಪಾಟೀಲ ಸೇರಿದಂತೆ ಕೆಲ ಭಕ್ತರ ಮೇಲೆ ಈ ವೇಳೆ ವಿಷಯವಾಗಿ ಮೈ ಕೈ ಮುಟ್ಟುವರೆಗೆ ವರ್ತನೆ ಮಾಡಿದ್ದಾರೆ. ಹಿರಿಯ ಶ್ರೀಗಳು ಅವರು ಹೇಳಿದಂತೆ ನಡೆದುಕೊಳ್ಳಲಿ ಅಷ್ಟೇ ಸಾಕು ಎಂದು ಉತ್ತರಾಧಿಕಾರಿ ಯಾಗಿರುವ ನಿಜಲಿಂಗೇಶ್ವರ ಶ್ರೀಗಳು ಹೇಳಿದ್ದಾರೆ.

   ಈ ವಿಷಯದ ಕುರಿತು ಹಿರಿಯ ಸ್ವಾಮಿಗಳಾದ ಶಿವಲಿಂಗೇಶ್ವರ ಶ್ರೀಗಳು ಮಾತನಾಡಿ, ನಿಡಸೋಸಿ ಸಿದ್ದಸಂಸ್ಥಾನ ಮಠ ಎಂದರೆ ಸರ್ವ ಧರ್ಮಿಯರ ಮಠವಾಗಿದೆ. 250 ವರ್ಷಗಳಿಂದ ದಾಸೋಹ ಜೊತೆಗೆ ಭಕ್ತಿ ಪರಪಂರೆಯನ್ನು ಶ್ರೀಮಠವು ನೀಡುತ್ತಾ ಬಂದಿದೆ. ಈ ಮಠದ ಪೀಠದಲ್ಲಿ ಇರುವ ಸ್ವಾಮಿಗಳು ಲಿಂಗೈಕ್ಯ ಆದ ಬಳಿಕ ಕಿರಿಯರೊಬ್ಬರನ್ನು ಪಟ್ಟಕ್ಕಟ್ಟುವ ಪರಂಪರೆಯನ್ನು ಶ್ರೀಮಠವು ಹೊಂದಿದೆ. ಆದರೆ ನಾವು ಮುಂದೆ ಒಂದು ಹೆಜ್ಜೆ ಇಟ್ಟು ಸಮಾಜದ ದೊಡ್ಡದು ಎನ್ನು ದೃಷ್ಟಿಯಿಂದ ಕಿರಿಯರಾದ ನಿಜಲಿಂಗೇಶ್ವರ ಶ್ರೀಗಳನ್ನು ನೇಮಕ ಮಾಡಿದ್ದೇವೆ. ಅದರು ನಮ್ಮಿಂದ ತಪ್ಪು ಆಗಿರಬಹುದು. ಆದರೆ ಅವರು ಯಾಕೊ ಇವಾಗ ಸ್ವಲ್ಪ ನಮ್ಮ ವಿರೋಧ ವಾಗಿ ನಡೆದುಕೊಳ್ಳತಾ ಇದ್ದಾರೆ.

    ಅವರು ಸ್ವಲ್ಪ ಜನರೊಳಗೆ ಬಂದು ಕೆಲಸ ಮಾಡಿದರೆ ಸರಿ ಹೋಗುತ್ತದೆ. ಅವರು ಜನರೊಳಗೆ ಬರತಾ ಇಲ್ಲ. ಅವರಿಗೆ ಈಗಾಗಲೇ ಕಾರು ಹವಾನಿಯಂತ್ರಿತ ಕೊಠಡಿ ನೀಡಲಾಗಿದೆ. ಆದರು ಕಿರಿಯರು ನಮ್ಮ ಮೇಲೆ ವಿರೋಧ ವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ನಾವು ಸ್ವಲ್ಪ ತಟಸ್ಥ ವಾಗಿ ಉಳಿದುಕೊಂಡಿದ್ದೇವೆ ಎಂದಿದ್ದಾರೆ. ಕಾನೂನಾತ್ಮಕ ಹೋರಾಟ ಮಾಡುವ ಬಗ್ಗೆ ಮಾಧ್ಯಮದ ವರು ಕೇಳಿದಾಗ ಕಾನೂನಾತ್ಮಕ ಹೋರಾಟ ದಿಂದ ಸಮಸ್ಯೆಗಳು ಬಹಳ ಎದುರಾಗುತ್ತವೆ ಎಂದಿದ್ದಾರೆ. ಸ್ವಾಮಿಯಾದವರು ಜನರಲ್ಲಿ ಮೊದಲು ಬೆರೆಯಬೇಕು ಎಂದಿದ್ದಾರೆ. ಜನರಲ್ಲಿ ಬಂದರೆ ಒಂದು ತಿಂಗಳಲ್ಲಿ ಎನು 15 ದಿನಗಳಲ್ಲಿ ಕೂಡಾ ಅಧಿಕಾರ ನೀಡಬಹುದು ಎಂದಿದ್ದಾರೆ. ಮಠದ ಪರಂಪರೆಯ ಜತೆ ಜನರ ಜೊತೆ ಬೆರೆತರೆ ಎಲ್ಲವು ಸರಳವಾಗುತ್ತದೆ ಎಂದು‌ ನಿಡಸೋಸಿ ಮಠದ ಹಿರಿಯ ಶ್ರೀಗಳಾದ ಶಿವಲಿಂಗೇಶ್ವರ ಸ್ವಾಮಿಗಳು ಹೇಳಿದ್ದಾರೆ.