ಬಾಗಲಕೋಟೆ 16: ಕಾರ್ಯಕರ್ತರ ನೊಂದಾವಣಿ ಮತ್ತು ಜನಸಂಪರ್ಕ ಅಭಿಯಾನ ಕಾರ್ಯಕ್ರಮ ಇಂದು ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನವನಗರದ ಅಂಬೇಡ್ಕರ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಎ.ಐ.ಸಿ.ಸಿ. ಕಾರ್ಯದಶರ್ಿ ಮಾನಿಕ್ ಠಾಕೂರ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತಿಯೊಂದು ತಮ್ಮ ಭೂತಮಟ್ಟದಲ್ಲಿ ಶಕ್ತಿ ಪ್ರೋಜೆಕ್ಟ್ನ್ನು ಮನೆ ಮನೆಗೆ ಮುಟ್ಟುವಂತೆ ಮಾಡಿ ರಾಹುಲ್ ಗಾಂಧಿಯವರಿಗೆ ಶಕ್ತಿ ತುಂಬುವಂತಹ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ ಬರುವಂತಹ ದಿನಮಾನಗಳಲ್ಲಿ ಕಾರ್ಯಕರ್ತರ ಶಕ್ತಿ ಬಲಿಷ್ಠಗೊಳ್ಳಬೇಕಾಗಿದ್ದರೆ ಪಕ್ಷದ ಎಲ್ಲ ವಿಭಾಗ ಮಟ್ಟದಿಂದ ಈ ಪ್ರೊಜೆಕ್ಟ್ನ್ನು ಚಾಚು ತಪ್ಪದೇ ಮನೆ ಮನೆಗೆ ಮುಟ್ಟಿಸುವಂತಹ ಕೆಲಸ ಆಗಿದ್ದೆ ಆದಲ್ಲಿ ಬರುವಂತಹ ಲೋಕಸಭಾ ಚುನಾವಣೆಯಲ್ಲಿ ನಮ್ಮ ಗೆಲುವು ಖಚಿತವಾಗಲು ಇದೊಂದು ಶಕ್ತಿಯಾಗಲಿದೆ ಎಂದರು.
ತಾಲೂಕ ಮಟ್ಟದ ಎಲ್ಲ ಬ್ಲಾಕ್ ಮುಖಂಡರು ಹಾಗೂ ನಗರ ಬೂತಮಟ್ಟದ ಮುಖಂಡರು ಹಲವಾರು ಮುಖಂಡರು ತಮ್ಮ ತಮ್ಮ ಕ್ಷೇತ್ರದಲ್ಲಿ ಈ ಶಕ್ತಿ ಪ್ರೊಜೆಕ್ಟ್ನ್ನು ಮಾಡಿರುವ ಕುರಿತು ಮಾನಿಕ ಠಾಕೂರ ಅವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಚ್.ವಾಯ್. ಮೇಟಿ, ಕೆಪಿಸಿಸಿ ಕಾರ್ಯದಶರ್ಿ ಸಂಗಮೇಶ ಬಬಲೇಶ್ವರ, ದಯಾನಂದ ಪಾಟೀಲ, ಯೋಗೇಶ, ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ ಪಾರ್ಸಮಲ್ಲ ಜೈನ್, ಜಿಲ್ಲಾಧ್ಯಕ್ಷರಾದ ಎಂ.ಬಿ. ಸೌದಾಗರ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷರಾದ ರಾಜು ಎಸ್. ಮನ್ನಿಕೇರಿ, ಮಹಿಳಾ ಘಟಕದ ಅಧ್ಯಕ್ಷರಾದ ರಕ್ಷೀತಾ ಈಟಿ, ಮಾಜಿ ಬಿಟಿಡಿಎ ಸದಸ್ಯರಾದ ಆನಂದ ಜಿಗಜಿನ್ನಿ, ಮಲ್ಲು ಮೇಟಿ, ಹಾಜಿಸಾಬ ದಂಡಿನ, ಹನಮಂತ ರಾಕುಂಪಿ, ಕಾಂಗ್ರೆಸ್ ಕಾರ್ಯಕರ್ತಕರು ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜು ಮನ್ನಿಕೇರಿ ನಿರೂಪಿಸಿದರು, ಆನಂದ ಜಿಗಜಿನ್ನಿ ವಂದಿಸಿದರು.