ಸಮುದಾಯ ಭವನ ಶೈಕ್ಷಣಿಕ, ಸಭೆ-ಸಮಾರಂಭಗಳಿಗೆ ಸದ್ಬಳಿಕೆಯಾಗಲಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

May the community hall be a good place for education, meetings and events: MP Priyanka Jarkihol

ಸಮುದಾಯ ಭವನ ಶೈಕ್ಷಣಿಕ, ಸಭೆ-ಸಮಾರಂಭಗಳಿಗೆ ಸದ್ಬಳಿಕೆಯಾಗಲಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ 

 ಬೆಳಗಾವಿ, 08; ಗ್ರಾಮೀಣ ಜನತೆ ಬಹುದಿನಗಳ ಕನಸು ಇಂದು ಈಡೇರಿದೆ. ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರ ಪ್ರಯತ್ನದಿಂದ ಸುಸುಜ್ಜಿತವಾದ ಸಮುದಾಯ ಭವನ ನಿರ್ಮಾಣವಾಗಲಿದೆ. ಈ ಸಮುದಾಯ ಭವನ ಶೈಕ್ಷಣಿಕ ಕಾರ್ಯಕ್ಕೆ, ಸಭೆ ಹಾಗೂ ಸಮಾರಂಭಗಳಿಗೆ ಅನುಕೂಲವಾಗಲಿ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಮುಚ್ಚಂಡಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ಧಾರ್ಮಿಕ ದತ್ತಿ ಇಲಾಖೆ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಯತ್ನದಿಂದ ಮಂಜೂರಾದ 1.75 ಲಕ್ಷ ರೂ. ನೂತನ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ, ಅವರು ಮಾತನಾಡಿದರು.ಈ ಭಾಗದ ಸಹೋದಿಯರು ಜೀವನದಲ್ಲಿ ತಮ್ಮ ಗುರಿ ತಲುಪಬೇಕೆಂದರೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಮಹಿಳೆಯರು ಒಳ್ಳೆಯ ಹುದ್ದೆ ಅಲಂಕರಿಸಲು ಸಾಧ್ಯವಿದೆ. ಹಾಗೂ ರಾಜಕೀಯಕ್ಕೂ ಬರಲು ಶಿಕ್ಷಣ ಅವಶ್ಯಕತೆ ಇದೆ. ಬಡ ಹೆಣ್ಣುಮಕ್ಕಳು ಬೆಳೆದಾಗ ಮಾತ್ರ ದೇಶದ ಬದಲಾವಣೆ ಸಾಧ್ಯವಿದೆ ಎಂದು ಹೇಳಿದರು.ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿನ ಮಂದಿರಗಳ ಅಭಿವೃದ್ಧಿ ಜೊತೆಗೆ ಕಾರ್ಯಾಲಯಗಳ ನಿರ್ಮಾಣಕ್ಕೆ ಅಪಾರ ಅನುದಾನ ನೀಡಿದ್ದಾರೆ. ಈಗಾಗಲೇ ಕ್ಷೇತ್ರಾದ್ಯಂತ  ಸುಸುಜ್ಜಿತ ರಸ್ತೆ ನಿರ್ಮಾಣ,  ಮರು ರಸ್ತೆ ಅಗಲೀಕರಣ, ಶುದ್ಧ ಕುಡಿಯುವ ನೀರಿನ ಯೋಜನೆ,  ಶಿಥಿಲಗೊಂಡ ಶಾಲಾ  ಕಟ್ಟಡ ಅಭಿವೃದ್ಧಿ ಕಾರ್ಯ, ಗ್ರಾಮಗಳಲ್ಲಿನ ಚರಂಡಿ ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿವೆ. ಈ ಎಲ್ಲಾ ಕಾರ್ಯಗಳು ಸಹಕಾರಗೊಳ್ಳಲು ಕ್ಷೇತ್ರದ ಜನತೆ ಸಹಾಯ-ಸಹಕಾರ ಅಗತ್ಯವಾಗಿದೆ ಎಂದರು. 

ಸಚಿವರ ಆಪ್ತ ಸಹಾಯಕ ಅರವಿಂದ ಕಾರ್ಚಿ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿಯವರು ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ ಬಹಳಷ್ಟು ಅನುದಾನ ನೀಡಿದ್ದಾರೆ. ಅದರಂತೆಯೇ ಈ ಗ್ರಾಮದ ಜನತೆಯ ಕನಸನ್ನು ಈಡೇರಿಸಿದ್ದಾರೆ. ಇದರಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ  ಅವರ ಪ್ರಯತ್ನವೂ ಇದೆ. ಈಗಾಗಲೇ ಮುಚ್ಚಂಡಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ನೂತನ ಕಲ್ಯಾಣ ಮಂಟಪ ನಿರ್ಮಾಣ 1.75 ಲಕ್ಷ ರೂ.  ಬಿಡುಗಡೆಯಾಗಿದೆ.  ಇನ್ನೂ ಒಂದು ಕೋಟಿ ರೂ. ಅನುದಾನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ ಎಂದರು.ಅಣ್ಣಾಸಾಬ್ ಜೊಲ್ಲೆಯವರು ಮತ ಹಾಕಿಸಿಕೊಂಡ ಹೋದವರು ಇನ್ನು ಪತ್ತೆಯಿಲ್ಲ, ಸಹೋದರಿ  ಪ್ರಿಯಾಂಕಾ ಜಾರಕಿಹೊಳಿ ಅವರು ಸಂಸದೆಯಾಗಿ ನಾಲ್ಕೈದು ತಿಂಗಳಿನಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದ್ದಾರೆ. ಕಲಕಾಂಬ ಸೇರಿದಂತೆ  ಪ್ರತಿ ಗ್ರಾಮಕ್ಕೂ  3-4 ಕೋಟಿ ರೂ.  ಅನುದಾನ ನೀಡಿದ್ದಾರೆ.ಮುಚ್ಚಂಡಿ ಗ್ರಾಪಂ ಅಧ್ಯಕ್ಷ ಸಂದೀಪ ಜಖಾನೆ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಸಚಿವ ಸತೀಶ ಜಾರಕಿಹೊಳಿ ಅವರು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಭಾಗದ ಗ್ರಾಮಗಳ ಪ್ರಗತಿಗೆ ಶ್ರಮಿಸಿದ್ದಾರೆ. 3 ಕೋಟಿ ರೂ. ವೆಚ್ಚದಲ್ಲಿ ಸಿದ್ಧೇಶ್ವರ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾತ್ತಿದೆ.  ಇದಕ್ಕೆ,  ಸಚಿವರ ಆಪ್ತ ಸಹಾಯಕರಾದ ಅರವಿಂದ ಕಾರ್ಚಿ ಅವರ ಕೊಡುಗೆ ಬಹಳಷ್ಟಿದೆ ಎಂದರು. 

ಈ ಸಂದರ್ಭದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷರಾದ ಮಲ್ಲಪ್ಪಾ ಪಾಟೀಲ, ಉಪಾಧ್ಯಕ್ಷ ಸುನೀತಾ ಗುಡದೇಗೋಳ,  ಮಾಜಿ ಜಿಪಂ ಸದಸ್ಯೆ ಮಲ್ಲವ್ವಾ ಬುಡರಿ, ಮಾಜಿ ಜಿಪಂ ಸದಸ್ಯ ಸಿದ್ದಪ್ಪಾ ಮುದಗೇಕರ್, ಪರಶುರಾಮ ಭಾತಕಂಡೆ,  ಮಹಾನಿಂಗ ವಾಲಿಶೇಟ್ಟಿ,  ಸುದರ್ಶನ ಕನಗಾವಕರ್ , ಯಲ್ಲಪ್ಪ ಚೌಗಲೆ, ಗಜಾನನ ವರ​‍್ೆ ಹಾಗೂ ಇತರರು ಇದ್ದರು.