ಶಿವಾನುಭವಗಳಿಂದ ಮಾನಸಿಕ ನೆಮ್ಮದಿ

Mental peace from Shiva experiences

ಶಿವಾನುಭವಗಳಿಂದ  ಮಾನಸಿಕ ನೆಮ್ಮದಿ  

ಬೆಟಗೇರಿ  14 : ಮಠ ಮಾನ್ಯಗಳಲ್ಲಿ ನಡೆಯುವ ಶಿವಾನುಭವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯಲು ಸಾದ್ಯ ಎಂದು ಶ್ರೀಮಠದ ಪೂಜ್ಯ ಡಾ ಮಹಾದೇವ ಸ್ವಾಮೀಜಿ ಹೇಳಿದರು. ಅವರು ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ 3ನೇ ಮಾಸಿಕ ಶಿವಾನುಭವ ಸಾನಿಧ್ಯ ವಹಿಸಿ ಮಾತನಾಡುತ್ತಾ ಮನುಷ್ಯನಿಗೆ ಹಣಕ್ಕಿಂತ ನೆಮ್ಮದಿ ಮುಖ್ಯ, ನೆಮ್ಮದಿಯ ಜೀವನ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ, ಮಠ ಮಂದಿರಗಳಿಗೆ ಪ್ರತಿನಿತ್ಯ ಬೇಟಿ ನೀಡುವುದರಿಂದ ನಮ್ಮಲ್ಲಿ ಬದಲಾವಣೆ ಸಾದ್ಯ, ನಾವುಗಳು ಸಂಸ್ಕಾರದಿಂದ ಶ್ರೀಮಂತರಾಗಬೇಕು ಎಂದರು.   

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯರಾದ ಗುರುಬಸಯ್ಯ ಬೃಹನ್ಮಠ ಮೊಬೈಲ್, ಕಂಪೂಟರ್‌ಗಳಂತಹ ಆಧುನಿಕ ತಂತ್ರಜ್ಞಾನಗಳ ಹಾವಳಿಯಿಂದಾಗಿ ಸಂಸ್ಕಾರ ಹಾಗೂ ಸಂಸ್ಕ್ಕೃತಿ ಮರೆಯಾಗುತ್ತಿದೆ. ಹೀಗಾಗಿ ಇಂದಿನ ಮಕ್ಕಳಿಗೆ ಸಂಸ್ಕಾರದ ಬಗ್ಗೆ ಪಾಠವಾಗಬೇಕಿದೆ, ಭಾರತೀಯ ಸಂಸ್ಕತಿ ಹಾಗೂ ಸಂಸ್ಕಾರವನ್ನು ಸ್ವಾಮಿ ವಿವೇಕಾನಂದರು ಜಗತ್ತಿನಾದ್ಯಂತ ಎತ್ತಿ ಹಿಡಿದಿದ್ದಾರೆ. ಅದೇ ರೀತಿ ನಮ್ಮ ಯವ ಜನತೆ ಕೂಡ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಇನ್ನಷ್ಟು ಬೆಳೆಸಬೇಕಾದ ಅಗತ್ಯವಿದೆ ಎಂದರು.  ನಂತರ ಮಾತನಾಡಿದ ಶಂಕ್ರ​‍್ಪ ಬಡಿಗೇರ ಧರ್ಮ ಅಥವಾ ಸಿದ್ದಾಂತ ಕೆಲವೊಮ್ಮೆ ಬೇರೆ ಬೇರೆ ರೀತಿಗಳಲ್ಲಿ ಜೀವನದ ಮೌಲ್ಯಗಳನ್ನು ವಿವರಿಸಬಹುದು ಆದರೆ ಅವೆಲ್ಲ ತಮ್ಮ ಸಮಾಜವು ಉತ್ತಮವಾಗಬೇಕೆಂಬ ಉದ್ದೇಶವನ್ನು ಇಟ್ಟುಕೊಂಡಿರುತ್ತವೆ, ಒಟ್ಟಿನಲ್ಲಿ ಜೀವನ ಮೌಲ್ಯವನ್ನು ಪೂರ್ಣವಾಗಿ ತ್ಯಜಿಸಿದಲ್ಲಿ ಆ ಸಮಾಜವು ಉಳಿಯಲಾರದು ಎಂಬುದು ಸತ್ಯ ಎಂದರು.     

   ಈ ಸಂದರ್ಭದಲ್ಲಿ ದಾಸೋಹ ಸೇವೆಯನ  ಅನ್ನಪೂರ್ಣಮ್ಮ  ಅರಕೇರಿ, ಸಂಗೀತ ಸೇವೆಯನ್ನ ಮುತ್ತಯ್ಯ ಹಿರೇಮಠ, ಪ್ರಭು ಶಿವಶಿಂಪರ ಮಾಡಿದರು.   ಶಂಕ್ರರ​‍್ಪ ಮತ್ತೂರು, ಬಸವನಗೌಡ ರೆಡ್ಡಿ, ಮುದಿಯಪ್ಪ, ವೀರೇಶ ಎಲ್ , ರಾಜೇಂದ್ರ​‍್ಪ ಕಡಹಳ್ಳಿ, ಶಿವಪ್ಪಜ್ಜ ಬಳಿಗೇರಿ, ಶರಣಪ್ಪ  ಯಮನೂರ​‍್ಪ ಬೈರಾಪೂರ ಮತ್ತು ಇತರರು ಇದ್ದರು.