ನಾರಾಯಣ ಪಿ.ಯು. ಕಾಲೇಜ್ ಮಾನ್ಯತೆ ರದ್ದತಿಗೆ ಎಬಿವಿಪಿ ಒತ್ತಾಯ

ಬಳ್ಳಾರಿ 02: ಸರ್ವರಿಗೂ ಸಮಪಾಲು ಸಿಗುವಂತಹ ಶಿಕ್ಷಣ ವ್ಯವಸ್ಥೆ, ಇಂದು ಸಮಾಜಕ್ಕೆ ವಿರುದ್ಧವಾಗಿ ಇಂತಹ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ಹಾಳು ಮಾಡುತ್ತಿವೆ. ತರಗತಿ ಪ್ರಾರಂಭವಾಗಿ 3 ತಿಂಗಳಾದರೂ ಐಚ್ಛಿಕ ವಿಷಯಗಳಾದ ಕನ್ನಡ, ಇಂಗ್ಲೀಷ್, ಸಂಸ್ಕೃತ ವಿಷಯಗಳನ್ನು ಕಡೆಗಣಿಸಿದ್ದಾರೆ. ಪ್ರಶ್ನೆ ಮಾಡಿದರೆ, ದೈಹಿಕ ಹಲ್ಲೆಗೆ ಮುಂದಾಗುತ್ತಾರೆ. ಅಲ್ಲಿರುವ ಸಿಬ್ಬಂದಿಗಳು ಓಇಇಖಿ/ಅಇಖಿ/ ಎಇಇ ಹೆಸರಿನಲ್ಲಿ ಅಕ್ರಮವಾಗಿ ಲಕ್ಷಗಟ್ಟಲೆ ಹಣ ಪಡೆಯುತ್ತಿರುವುದು ಇದಕ್ಕೆ ಯಾವುದೇ ದಾಖಲೆಗಳೇ ಇಲ್ಲ. ಪುಸ್ತಕಗಳ ಹೆಸರಿನಲ್ಲಿ ಸಾವಿರಾರು ರೂಪಾಯಿ ಈ ರೀತಿ ಪಟ್ಟಿ ಮಾಡಿದರೆ ಸಾಕಾಗದು ಆ ರೀತಿ ವಿದ್ಯಾರ್ಥಿಗಳಿಗೆ ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಬಳ್ಳಾರಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಎಬಿವಿಪಿ ಸರ್ಕಾರಿ ರಜೆದಿನಗಳು ಹಾಗೂ ಭಾನುವಾರವು ಸಹ ಬೆಳಿಗ್ಗೆ 8.30 ರಿಂದ ರಾತ್ರಿ 8.30 ರವರೆಗೆ ತರಗತಿಗಳನ್ನು ನಡೆಸಲು ಯಾವ ಸರ್ಕಾರದ ನಿಯಮಗಳು ಇಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳವಾಗುತ್ತಿದೆ. ಹಾಗೆಯೇ ನಮಗೆ ಮಾಹಿತಿ ಬಂದ ಪ್ರಕಾರ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಬೆದರಿಕೆ, ಹೊಡೆಯುವುದು ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಕಾಲೇಜಿನ ಮಾನ್ಯತೆಯನ್ನು ರದ್ದು ಪಡಿಸಬೇಕೆಂಬುದು ನಮ್ಮ ಹೋರಾಟದ ಉದ್ದೇಶ ಎಂದಿದ್ದಾರೆ.

 ಪಿ.ಯು. ಬೋರ್ಢ್ ಆದೇಶದ ಪ್ರಕಾರ ಅದೇ ಕಾಲೇಜಿನಲ್ಲಿ ಓಇಇಖಿ/ಅಇಖಿ/ ಎಇಇ ತರಗತಿಗಳನ್ನು ನಡೆಸುವಂತಿಲ್ಲ. ಆದರೂ ಇವರು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿ ನಡೆಸುತ್ತಿದ್ದಾರೆ. ಮುಂದಿನ ದಿನದಲ್ಲಿ ಇದಕ್ಕೆ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಉಪನಿದರ್ೆಶಕರು, ಈ ಕಾಲೇಜಿನ ಮಾನ್ಯತೆ ರದ್ದತಿಗೆ ಮುಂದಾಗದಿದ್ದರೆ, ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ. ಹಾಗೆಯೇ ಈ ತರಹದ ಯಾವುದೇ ಕಾಲೇಜುಗಳಿದ್ದರೂ ಆ ಕಾಲೇಜಿನ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.