ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮ

Netaji Subhash Chandra Bose District Level Cultural Competition Prize Distribution Program

ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮ  

 ಬಳ್ಳಾರಿ 02: ಇಂದು ಎಐಡಿಎಸ್‌ಓ ವತಿಯಿಂದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಎಐಡಿಎಸ್‌ಓ ಆಫೀಸ್ ನಲ್ಲಿ ನಡೆಯಿತು.ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ ಅವರು ಮಾತನಾಡಿ.... ಜನವರಿ 23 ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮಾಡಿದ ಹೋರಾಟ ಇಂದಿಗೂ ಅವಿಸ್ಮರಣೀಯ. 

 ನೇತಾಜಿ ಅವರು ವಿಚಾರಗಳು ವಿದ್ಯಾರ್ಥಿಗಳಿಗೆ ಆದರ್ಶವಾದರೆ, ತಮ್ಮ ವೈಯುಕ್ತಿಕ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನೂ ಮೆಟ್ಟಿ ನಿಲ್ಲುತ್ತಾರೆ. ಈ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ನಿಜವಾಗಿಯೂ ನೇತಾಜಿ ಅವರಿಗೆ ಸರಿಯಾದ ಗೌರವ ಸಲ್ಲಿಸುವಂತೆ ಆಗಿದೆ ಎಂದರು.ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಅವರು ಮಾತನಾಡಿ... ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿಗಳು ಶಿಕ್ಷಣ - ಸಂಸ್ಕೃತಿ - ಮಾನವತೆ ಉಳಿಸಲು ನೇತಾಜಿ ಅವರ ಸ್ಪರ್ಧೆಗಳನ್ನು ನಡೆಸಲಾಯಿತು. ಯಾಕೆಂದರೆ ವಿದ್ಯಾರ್ಥಿಗಳು ಕಲುಷಿತ ವಾತಾವರಣದಲ್ಲಿ ವಿದ್ಯಾರ್ಥಿಗಳ ಮನಸ್ಥಿತಿ ಹಾಳಾಗುತ್ತದೆ ಮತ್ತು ಮಾನವೀಯ ಮೌಲ್ಯಗಳು ಕುಸಿತ ಕಂಡಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಭಗತ್ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಗುರಿ ಎಐಡಿಎಸ್‌ಓ ಜವಾಬ್ದಾರಿ ತೆಗೆದುಕೊಂಡಿದೆ ಎಂದು ಹೇಳಿದರು.   

ನಂತರ ನೇತಾಜಿ ಅವರ ಕುರಿತು ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ, ಭಾಷಣ ಮತ್ತು ಗಾಯನ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ  ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.* ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷರು ಎಂ.ಶಾಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷರು ಉಮಾ ಮತ್ತು ಸದಸ್ಯರು ಸಮೀರ್, ಶ್ರೀಧರ್, ಶಿವನ ಗೌಡ ಹಾಗೂ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಧನ್ಯವಾದಗಳುಸುದ್ದಿ ಇವರಿಂದಕಂಬಳಿ ಮಂಜುನಾಥಜಿಲ್ಲಾ ಕಾರ್ಯದರ್ಶಿಎಐಡಿಎಸ್‌ಓ ಬಳ್ಳಾರಿ.    ಬಜೆಟ್ - 2025/26; ಕೇವಲ ಘೋಷಣೆಗಳು - ಯಾವುದೇ ನಿರ್ದಿಷ್ಟ ಕ್ರಮಗಳಿಲ್ಲ!-ಕಂಬಳಿ ಮಂಜುನಾಥ, ಂಋಖಓ ಜಿಲ್ಲಾ ಕಾರ್ಯದರ್ಶಿ."ಇಂದು ಘೋಷಿಸಲಾದ 2025/26ರ ಕೇಂದ್ರ ಬಜೆಟ್ ನಲ್ಲಿ ಶಿಕ್ಷಣ ವಲಯಕ್ಕೆ ನೀಡಿರುವ ಬಜೆಟ್, ಈ ಹಿಂದೆ ಕೇಂದ್ರ ಸರ್ಕಾರಗಳು ಘೋಷಿಸಿದ ಬಜೆಟ್‌ಗಳಿಗೆಯೇ ಅನುಗುಣವಾಗಿದೆ. ಇದು ಶಿಕ್ಷಣ ಕ್ಷೇತ್ರವನ್ನು ಸುಧಾರಿಸುವ ನಿರ್ದಿಷ್ಟ ಕ್ರಮಗಳಿಗಿಂತ ಹೆಚ್ಚಾಗಿ ಘೋಷಣೆಗಳಿಂದ ತುಂಬಿವೆ. ಬಜೆಟ್ ನಲ್ಲಿ ಶಿಕ್ಷಣ ವಲಯಕ್ಕೆ  ಹಂಚಿಕೆಯಾಗಿರುವ 1,28,600 ಕೋಟಿ ರೂಪಾಯಿಗಳು, ಒಟ್ಟು ಬಜೆಟ್‌ನ 2.6ಅ ಕ್ಕಿಂತ ಕಡಿಮೆ ಇದೆ. ಹಲವಾರು ತಜ್ಞರು ಶಿಕ್ಷಣಕ್ಕೆ ಕನಿಷ್ಠ 10ಅ ಕೇಂದ್ರ ಬಜೆಟ್ ಅನ್ನು ಮೀಸಲಿಡಬೇಕೆಂದು ಶಿಫಾರಸ್ಸು ಮಾಡಿದ್ದಾರೆ. ಆದರೆ ಇದು ಅದಕ್ಕಿಂತಲೂ ಕಡಿಮೆ ಇದೆ. ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಓಇಕ-2020 ಸಹ ಶಿಕ್ಷಣಕ್ಕೆ ಕೇಂದ್ರ ಬಜೆಟ್‌ನ 6ಅ ಅನ್ನು ಮೀಸಲಿಡಲು ಶಿಫಾರಸು ಮಾಡುತ್ತದೆ. ಈ ವರ್ಷಮೀಸಲಿಟ್ಟಿರುವ 2.6ಅ ರಷ್ಟು ಮೊತ್ತವು ಹಿಂದಿನ ವರ್ಷಗಳಲ್ಲಿ ಮೀಸಲಿಟ್ಟ ಬಜೆಟ್‌ಗಿಂತ ಬಹಳ ಕಡಿಮೆ. ಪ್ರಸ್ತುತ ಬಜೆಟ್‌ನಲ್ಲಿ ಮಾಡಲಾದ ಪ್ರಮುಖ ಘೋಷಣೆಗಳು - ಂಋ ತರಗತಿಗಳು, ಮಾಧ್ಯಮಿಕ ಶಾಲೆಗಳ ಡಿಜಿಟಲೀಕರಣ, ಕೌಶಲ್ಯ ತರಬೇತಿ, ಋಖಿಗಳ ಪ್ರವೇಶವನ್ನು ಹೆಚ್ಚಿಸುವುದು ಇತ್ಯಾದಿ ಅಂಶಗಳು , ದೇಶದ ಪ್ರಸ್ತುತ ಶಿಕ್ಷಣ ವಲಯವು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಯಾವುದೇ ನಿರ್ದಿಷ್ಟ ಪರಿಹಾರವನ್ನು ಒದಗಿಸುವುದಿಲ್ಲ. ಸರ್ಕಾರಿ ಶಾಲೆಗಳ ಸ್ಥಿತಿಯು ಎಷ್ಟು ಗಂಭೀರವಾಗಿದೆ ಎಂದರೆ, 20ಅ ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯವಿಲ್ಲ. ಅವಶ್ಯಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅನುದಾನವನ್ನು ಒದಗಿಸುವ ಬದಲು, ಆಯ್ದ ಶಾಲೆಗಳಲ್ಲಿ ಡಿಜಿಟಲೀಕರಣದತ್ತ ಸಾಗುವುದು ಮತ್ತು ಅದಕ್ಕಾಗಿ ಹಣವನ್ನು ಮೀಸಲಿಡುತ್ತಿರುವುದು ಪ್ರಸ್ತುತ ಸರ್ಕಾರದ ಆದ್ಯತೆಗಳ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಉದ್ಯೋಗ ಸೃಷ್ಟಿಗೆ ನಿರ್ದಿಷ್ಟ ಕ್ರಮಗಳನ್ನು ಉಲ್ಲೇಖಿಸದೆ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯಗಳನ್ನು ಒದಗಿಸುವ ಸಲುವಾಗಿ ಹಂಚಿಕೆಯಾಗಿರುವ ನಿಧಿಯು ಅನವಶ್ಯಕ ವೆಚ್ಚವಾಗುತ್ತದೆ. ಋಖಿಗಳ ಪ್ರವೇಶವನ್ನು ಹೆಚ್ಚಿಸಲಾಗುವುದು ಎಂದು ಮಾನ್ಯ ಹಣಕಾಸು ಸಚಿವರು ಹೇಳಿದ್ದಾರೆ. ಋಖಿಗಳಲ್ಲಿ ಬಿ.ಟೆಕ್ ಕೋರ್ಸಿನ ಶುಲ್ಕವು ವರ್ಷಕ್ಕೆ ಸುಮಾರು ?3 ಲಕ್ಷ ರೂ.ಗಳು! ಈ ದೇಶದಲ್ಲಿ ಎಷ್ಟು ವಿದ್ಯಾರ್ಥಿಗಳು ಅದನ್ನು ಭರಿಸಬಲ್ಲರು? ಋಖಿಗಳ ಮೂಲಕ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಸರ್ಕಾರದ ಗುರಿಯಾಗಿದ್ದರೆ, ಧನಸಹಾಯವನ್ನು ಹೆಚ್ಚಿಸಬೇಕಾಗಿತ್ತು. ಇದರಿಂದ ವಿದ್ಯಾರ್ಥಿಗಳ ಮೇಲಿನ ಶುಲ್ಕದ ಹೊರೆಯು ಕಡಿಮೆಯಾಗುತ್ತದೆ.ಮಾನ್ಯ ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ತೆಲುಗು ಕವಿತೆಯ ಒಂದು ಸಾಲನ್ನು ಉಲ್ಲೇಖಿಸಿ "ದೇಶವೆಂದರೆ ಬರೀ ಮಣ್ಣಲ್ಲವೋ , ಆ ದೇಶದ ಜನರು.." ಎಂದು ಹೇಳಿದರು. ಈ ದೇಶದ ಬಹುಪಾಲು ಜನರು ಸಾರ್ವಜನಿಕ ಶಿಕ್ಷಣವನ್ನು ಸುಧಾರಿಸಬೇಕು ಮತ್ತು ಬಲಪಡಿಸಬೇಕೆಂದು ಬಯಸುತ್ತಾರೆ. ದೇಶದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಒಂದೇ ಒಂದು ಯೋಜನೆಯನ್ನು ಘೋಷಿಸದಿರುವುದು ಮತ್ತು ಶಿಕ್ಷಣಕ್ಷೇತ್ರಕ್ಕೆ ಬಜೆಟ್ನಲ್ಲಿ ಮೊತ್ತ ಕಡಿಮೆಗೊಳಿಸಿರುವುದು ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ದಾಳಿ ಎಂದು ಂಋಖಓ ನಂಬುತ್ತದೆ.ಪ್ರಕಟಣೆ ಇವರಿಂದ ಕಂಬಳಿ ಮಂಜುನಾಥ ಜಿಲ್ಲಾ ಕಾರ್ಯದರ್ಶಿ