ಸರ್ವಧರ್ಮ ಸಾಮರಸ್ಯ ನಮ್ಮ ದೇಶದ ಆಸ್ತಿ: ಕಾರಜೋಳ

ಲೋಕದರ್ಶನ ವರದಿ

ಮಹಾಲಿಂಗಪುರ 14: ಧರ್ಮ ಸಂಸ್ಕೃತಿ ಜಾನಪದ ವಿಭಿನ್ನ ಭಾಷೆ ವೇಷ ಇವುಗಳ ನಡವೆ ಸರ್ವಧರ್ಮ ಸಾಮರಸ್ಯ ಇವು ನಮ್ಮ ದೇಶದ ಆಸ್ತಿಗಳು ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ಹೇಳಿದರು.

ಇತ್ತೀಚಿಗೆ ಸಮೀಪದ ರನ್ನ ಬೆಳಗಲಿ ಪಟ್ಟಣದಲ್ಲಿ  ಸಿದ್ದಾರೂಢ ಮಠ ಶಿವಯೋಗಾಶ್ರಮ ಟ್ರಸ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ ಹಾಗೂ  ಸಿದ್ಧಾರೂಢ ಮಹಾಕವಿ ರನ್ನ ಸಾಂಸ್ಕೃತಿಕ ಕಲಾ ಸಂಸ್ಥೆ ಇವರ ಸಹಯೋಗದಲ್ಲಿ  ಮಹಾಲಿಂಗೇಶ್ವರ ಅನುಭವ ಮಂಟಪದಲ್ಲಿ ಜರುಗಿದ ಧರ್ಮ ಸಂಸ್ಕೃತಿ ಉತ್ಸವ ಜಾನಪದ ಕಲಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಕಲಾವಿದರ ಜೀವಾಳವಾದ ಕಲೆಗೆ ನಾವು ಬೆಲೆ ಕಟ್ಟಲಾಗದು. ಕಲೆ ಹಾಗೂ ಕಲಾವಿದರನ್ನು ನಾವು ಸದಾ ಗೌರವಿಸುತ್ತಾ ಕಲೆಯನ್ನು ಆಹ್ಲಾದಿಸಬೇಕು ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ  ಈಶ್ವರ ಮಂಟೂರ ಈ ವಿಶ್ವವೇ ಒಂದು ದೇವರ ಮನೆ ಭಾರತ ಅದರ ಗುರು ಎಂದರು.

ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಸಿದ್ದಾರೂಢ ಮಠ, ಶಿವಯೋಗಾಶ್ರಮದ ಸಿದ್ಧರಾಮ ಶಿವಯೋಗಿಗಳು ಕಾರ್ಯಕ್ರಮ ಸಂಯೋಜಿಸಿದ್ದರು. 

ಎಪಿಎಮ್ಸಿ ಮಾಜಿ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಬೆಳಗಲಿ ಪ.ಪಂ.ಅಧ್ಯಕ್ಷ ಲಕ್ಷ್ಮಣ ಕಲ್ಲೋಳೆಪ್ಪಗೋಳ, ಮಾಜಿ ಅಧ್ಯಕ್ಷ ಚಿಕ್ಕಪ್ಪ ನಾಯಕ, ಎಪಿಎಮ್ಸಿ ಸದಸ್ಯ ಈರಪ್ಪ ಕಿತ್ತೂರ, ಪ.ಪಂ.ಸ್ಥಾಯಿ ಸಮಿತಿ ಚೇರಮನ್ನ ಸಿದ್ದನಗೌಡ ಪಾಟೀಲ, ಪಟ್ಟಣದ ಹಿರಿಯರಾದ ಕಾಡಯ್ಯಾ ಗಣಾಚಾರಿ, ಪ್ರದೀಪ ಹಿರೇಮಠ,ಶೇಖರ ಪರಪ್ಪನವರ, ಮಹಾಲಿಂಗಪ್ಪ ಕೊಣ್ಣೂರ ಮುಂತಾದವರು ಉಪಸ್ಥಿತರಿದ್ದರು. ಉಮೇಶ ಸಿದರಡ್ಡಿ ನಿರೂಪಿಸಿದರು. ಬಸವರಾಜ ಮುಗಳಖೊಡ ಇವರು ಸಂಗೀತ ಸೇವೆ ನೀಡಿದರು.