ಉಮ್ರಾ ಧಾರ್ಮಿಕ ಪ್ರವಾಸ ಕೈಗೊಂಡು ಮತಕ್ಷೇತ್ರಕ್ಕೆ ವಾಪಸಾದ ಪಠಾಣಗೆ ಸನ್ಮಾನ

Pathana honoured for returning to constituency after completing Umrah pilgrimage

ಉಮ್ರಾ ಧಾರ್ಮಿಕ ಪ್ರವಾಸ ಕೈಗೊಂಡು ಮತಕ್ಷೇತ್ರಕ್ಕೆ ವಾಪಸಾದ ಪಠಾಣಗೆ ಸನ್ಮಾನ  

  ಶಿಗ್ಗಾವಿ   13: ಪವಿತ್ರ ಉಮ್ರಾ ಧಾರ್ಮಿಕ ಪ್ರವಾಸ ಕೈಗೊಂಡು ಮತಕ್ಷೇತ್ರಕ್ಕೆ ವಾಪಸಾದ ಯುವಕರ ಕಣ್ಮಣಿ ಜನಪ್ರಿಯ ಶಾಸಕ ಯಾಶಿರಮ್ಮದಖಾನ್ ಪಠಾಣ ಅವರನ್ನು ಸ್ವಗ್ರಹದಲ್ಲಿ ಭೇಟಿ ಮಾಡಿ ಗೌರವಿಸಿ ಪುರಸಭೆ ಸದಸ್ಯರು ಹಾಗೂ ಪಕ್ಷದ ಮುಖಂಡರು ಭಗವಂತ ಉತ್ತಮ ಆರೋಗ್ಯ ಒಳ್ಳೆಯ ಭವಿಷ್ಯ ಕರುಣಿಸಲಿ ಎಂದು ಶುಭ ಕೋರಿದರು.  ಈ ಸಂದರ್ಭದಲ್ಲಿ ಪುರಸಭೆ ಸದಸ್ಯರುಗಳಾದ ಸುಲೇಮಾನ ತರ್ಲಘಟ್ಟ, ಮುಸ್ತಾಕ ಅಹ್ಮದ ತಹಸೀಲ್ದಾರ, ಪರ್ವಿಜ್ ಮುಲ್ಲಾ ಮಂಜುನಾಥ ಮಣ್ಣಣ್ಣವರ, ಮುಕ್ತಿಯಾರ ತಿಮ್ಮಪುರ, ಚಂದ್ರು ಕೊಡ್ಲಿವಾಡ, ಬಸವರಾಜ ರಾಗಿ, ರಶೀದ್ ಗೊಟಗೋಡಿ, ಅಬ್ದುಲಖಾನ ನೀರಲಗಿ, ಸಾಧಿಕ್ ಮೊಗಲಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.