ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಮನವಿ
ಯರಗಟ್ಟಿ 23: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ತಹಸೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಮುಸ್ಲಿಂ ಸಮುದಾಯದ ಆಸ್ತಿಗಳಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ವಕ್ಸ್ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇದು ಸಂವಿಧಾನ ವಿರೋಧಿಯಾಗಿದೆ. ವಕ್ಸ್ ಮಂಡಳಿಗಳಲ್ಲಿ ಮುಸ್ಲಿಮರ ಹೊರತು ಅನ್ಯ ಧರ್ಮೀಯರಿಗೆ ಅವಕಾಶ ನೀಡಿರುವುದು ಸಂಪೂರ್ಣ ಸಂವಿಧಾನ ವಿರೋಧಿ ಕ್ರಮ.
ಈ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಂ ಸಮುದಾಯ ತೀವ್ರ ಖಂಡಿಸುತ್ತದೆ ಹಾಗೂ ಕಾಯ್ದೆ ಹಿಂಪಡೆಯುವಂತೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ಉದ್ದೇಶಿಸಿ ಕಾಶಿಮಸಾಬ ಹೊರಟ್ಟಿ ಮಾತನಾಡಿ ಅವರು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿಕೊಂಡಿರುವ ವಿಶ್ವದ ಅತಿ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ಭಾರತ. ಸಂವಿಧಾನವನ್ನು ಅನುಸರಣೆ ಮಾಡಿಕೊಂಡು ಜಾತ್ಯಾತೀತ ಮನೋಭಾವನೆಯಲ್ಲಿ ಘಟ್ಟಿಯಾದ ಸಾಮಾಜಿಕ ತಳಹದಿಯನ್ನು ಹೊಂದಿರುವ ಏಕೈಕ ರಾಷ್ಟ್ರ ಭಾರತವಾಗಿದೆ. 2014 ರಿಂದ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷ ಸರ್ಕಾರ ಒಂದು ನಿರ್ದಿಷ್ಟವಾದ ಸಮುದಾಯದ ಆಚರಣೆ, ಧಾರ್ಮಿಕ ವ್ಯವಸ್ತೆಯ ಮೇಲೆ ಸಂವಿಧಾನದ ಆಶಯಕ್ಕೆ ವಿರೋಧವಾಗಿ ಧರ್ಮದ ಜನರನ್ನು ಹತ್ತಿಕ್ಕಲು ಹಾಗೂ ಅವರ ಹಕ್ಕುಗಳನ್ನು ಕಶಿದುಕೊಳ್ಳಲು ನಿರಂತರವಾಗಿ ಪ್ರಯತ್ನ ಮಾಡುತ್ತಲೆ ಇದೆ. ಕಾರ್ಯಸೂಚಿಯ ಮುಂದುವರೆದ ಭಾಗವೇ ವಕ್ಸ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿರುವುದು.
ನಂತರ ಸಲಿಂಬೇಗ ಜಮಾದಾರ ಮಾತನಾಡಿದ ಕಳೆದ ಹತ್ತು ವರ್ಷಗಳಲ್ಲಿ ದೇಶದ ಮುಸ್ಲಿಂರ ಸಾಮಾಜಿಕ ಅಭಿವೃದ್ಧಿಗೆ ಚಿಂತಿಸದ ಕೇಂದ್ರ ಬಿ.ಜೆ.ಪಿ ಸರ್ಕಾರ ಪೌರತ್ವ ಕಾಯ್ದೆ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ, ಹಿಜಾಬ, ಹಲಾಲ ಹೆಸರಿನಲ್ಲಿ ಮುಸ್ಲಿಮರನ್ನು ಸಮಾಜವಾಹಿನಿಯಿಂದ ದೂರ ತಳ್ಳುವ ಪ್ರಯತ್ನ ಮಾಡುತ್ತಿದೆ. ಈಗ ಸಂಸತ್ತಿನಲ್ಲಿ ಅಂಗಿಕಾರವಾಗಿರುವ ತಿದ್ದುಪಡಿ ಮಸೂದೆ ಸಂವಿಧಾನದ 15,25,26 ನೇ ವಿಧಿ ಮತ್ತು ಧಾರ್ಮಿಕ ದತ್ತಿ ಕಾಯ್ದೆಗೆ ವಿರುದ್ಧವಾಗಿದೆ. ತಿದ್ದುಪಡಿ ಕಾಯ್ದೆಯು ಸುಪ್ರೀಂ ಕೋರ್ಟಿನ ವಕ್ಸ್ ಕಾಯ್ದೆಯೇ ತೀರ್ೂಗಳಿಗೆ ಅನುಗುನವಾಗಿ ಇರುವುದಿಲ್ಲ. ವಕ್ಸ್ ಕಾಯ್ದೆ ತಿದ್ದುಪಡಿಯ ಮೂಲಕ ಜಾರಿಗೊಳಿಸಲಾಗಿರುವ ಕೆಲವು ಕಲಂಗಳನ್ನು ಕೈ ಬಿಡುವುದರ ಮೂಲಕ ವಕ್ಸ್ ಮಸೂದೆಯನ್ನು ದುರ್ಬಲಗೊಳಿಸಲಾಗಿದೆ. ಮಸೂದೆಯಿಂದ ಭಾಗಿತರಾಗುವ ಮುಸ್ಲಿಂರನ್ನು, ಮುಸ್ಲಿಂ ಸಂಘಟಣೆಗಳನ್ನು ಮತ್ತು ಮುಸ್ಲಿಂ ಸಮುಧಾಯವನ್ನು ಪರಿಗಣಿಸಿ ಅವರ ಅಭಿಪ್ರಾಯಗಳಿಗೆ ಮಾನ್ಯತೆ ನೀಡಿಲ್ಲ.
ಇಮಾಮಸಾಬ ಹುಸೇನನಾಯಕ, ರಫೀಕ್ ಡಿ.ಕೆ, ಫಾರೂಕ್ ಅತ್ತಾರ, ಹುಸೇನ ದಿಲಾವರನಾಯ್ಕ, ತಲ್ಲೂರ ಹಾಫೀಸಾಬ, ಸೈದುಸಾಬ್ ಸನದಿ, ಶಾವಲಿ ಮುಗತಕಾನ, ಇಸಮೈಲ್ ಗೊತ್ಮರ, ಮುಲ್ಲಾಸಾಬ ಚಚಡಿ, ಶಾಹಿನಶಾ ಭಗವಾನ,ಸೈಫುಲ್ಲಾ ಭಗವಾನ,ಮುನ್ನಾ ಶಬಾಸಖಾನ್, ಬಿಲಾಲ ಮುಲ್ಲಾ, ಆಸೀಫ್ ಗೋಕಾಕ, ಅಬಿದಬೇಗ ಜಮಾದಾರ, ನಜೀರ ನದಾಫ, ಹಫೀಜ್ ಲಿಯಾಖತ್ ಭಾಗವಾನ, ಹಫೀಜ್ ಇನ್ಯಾತ ಬಡೆಗರ, ಹಫೀಜ್ ಸುಭಾನ ಜಮಾದಾರ, ಮೌಲ್ವಿಮೈಯುದ್ದಿನ್ ಮುಲ್ಲಾ, ತಲ್ಲೂರ ಹಾಫೀಜ್ ಮೌಲ್ವಿ ಫಾರೂಕ್ ಅಬ್ದುಲ್ಲಾ, ಸತಿಗೇರಿ ಹಾಫೀಜ, ಹಾಫೀಜ ಅಬ್ದುಲ್ ರಜಾಕ್(ಕಡಬಿ), ಹಾಫೀಜ ಸುಬಾನಿ ದೊಡ್ಡಮನಿ, (ಮದ್ಲೂರ) ಸೇರಿದಂತೆ ತಾಲೂಕಿನ ಅನೇಕ ಮುಖಂಡರು ಇತರರಿದ್ದರು.
ಹೇಳಿಕೆ:
ನಮ್ಮ ದೇಶದ ವಕ್ಸ್ ಕಾಯ್ದೆಗೆ ಶತಮಾನದ ಇತಿಹಾಸವಿದೆ, ಮುಸ್ಲಿಂ ಸಮುದಾಯದ ಬಡವರ ಮತ್ತು ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ "ಅಲ್ಲಾಹನ" (ದೇವರ) ಹೆಸರಿನಲ್ಲಿ ದಾನ ಮಾಡುವ ಆಸ್ತಿಗಳೆ ವಕ್ಫ್ ಆಸ್ತಿಗಳಾಗಿವೆ. ಮುಸ್ಲಿಂರನ್ನು ಗುರಿಯಾಗಿಸಿಕೊಂಡು ವಕ್ಫ್ ಕಾಯ್ದೆಯ ತಿದ್ದುಪಡಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಇಡೀ ವಕ್ಫ್ ಆಸ್ತಿಯನ್ನು ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ವ್ಯವಸ್ಥಿತವಾದ ಪಿತೂರಿ ನಡೆಸಿದೆ.