ಮೈಕ್ರೋ ಫೈನಾನ್ಸ್ ಹಾಗೂ ಬಡ್ಡಿ ದಂಧೆಕೊರರ ಹಾವಳಿಗೆ ಕಡಿವಾಣಹಾಕಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ
ಗದಗ 24 : ರಾಜ್ಯದ ನಗರ ಹಾಗೂ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮವರ್ಗದ ಜನರಿಗೆ ಸುಲಭ ಹಾಗೂ ಅಧಿಕ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿರುವ ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿಗೆ ಜನರಿಗೆ ತೊಂದರೆ ನೀಡಿ ಸಾಕಷ್ಟು ಕಿರುಕುಳ ನೀಡುತ್ತಿರುವುದರಿಂದ ರಾಜ್ಯದಲ್ಲಿ ಸಾಲ ಪಡೆದಿರುವ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ, ಮೈಕ್ರೋ ಫೈನಾನ್ಸ್‌ಗಳ ವ್ಯಾಪಕ ಕಿರುಕುಳಕ್ಕೆ ಹೆದರಿ ಗ್ರಾಮಗಳನ್ನೇ ತೊರೆಯುತ್ತಿದ್ದಾರೆ, ಮೈಕ್ರೋ ಪೈನಾನ್ಸ್‌ಗಳ ಕಿರುಕುಳಕ್ಕೆ ಹೆದರಿ ಕೆಲವುಂದು ಜಿಲ್ಲೆಗಳಲ್ಲಿ ಆತ್ಮಹತ್ಯ ಮಾಡಿಕೊಂಡಿರುವ ಘಟನೆಗಳು ನಡೆಯುತ್ತಿದ್ದು ತಕ್ಷಣ ಬಡ ಜನರ ರಕ್ತ ಹೇರುತ್ತಿರುವ ಮೈಕ್ರೋ ಫೈನಾನ್ಸ್ ಹಾಗೂ ಬಡ್ಡಿ ದಂಧೆಕೊರರ ಹಾವಳಿಗೆ ಕಡಿವಾಣ ಹಾಕಲು ಮತ್ತು ಇಂತಹವರ ವಿರುಧ್ದ ಕಠಿಣ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಸ್ಲಂ ಜನಾದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ನಮ್ಮ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ, ದಿನದಿಂದ ದಿನಕ್ಕೆ ಪ್ರಾಣ ಕಳೆದುಕೊಳ್ಳವವರ ಸಂಖ್ಯೆಯು ಹೆಚ್ಚಾಗುತ್ತಿದೆ, ರಾಜ್ಯದ ರಾಮನಗರ ಜಿಲ್ಲೆ, ಬೆಳಗಾವಿ ಜಿಲ್ಲೆ ಮತ್ತು ರಾಯಚೂರ ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯ ಮಾಡಿಕೊಂಡಿರುವ ಘಟನೆಗಳು ನಡೆದಿದೆ, ರೈತರಿಗೆ, ಕೊಲಿಕಾರ್ಮಿಕರಿಗೆ ಮತ್ತು ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತ ತಮ್ಮ ಬದುಕನ್ನು ನಡೆಸುತ್ತಿರುವ ಕುಟುಂಬಗಳಿಗೆ ಆಸೆ-ಆಮೀಸಗಳನ್ನು ತೊರಿಸಿ ಸಾಲ ನೀಡುತ್ತಿರುವ ಮೈಕ್ರೋ ಫೈನಾನ್ಸಗಳು ಸಾಲ ವಸೂಲಾತಿ ಸಂರ್ಭದಲ್ಲಿ ಬಡ್ಡಿ ಮೇಲೆ ಬಡ್ಡಿ ಹಾಕಿ ಸಾಲಗಾರರಿಂದ ಹಣ ವಸೂಲಿ ಮಾಡುತ್ತಿರುವುದ್ದರಿಂದ ಸಾಲ ಪಡೆದುಕೊಂಡಿರುವ ಬಡ ಕುಟುಂಬಗಳು ತಮ್ಮ ಮನೆಗಳಿಗೆ ಬೀಗ ಹಾಕಿ ಊರಗಳನ್ನು ಬಿಟ್ಟು ಹೋಗುತ್ತಿದ್ದಾರೆ, ಒಂದು ಮೈಕ್ರೋ ಫೈನಾನ್ಸ್‌ನಿಂದ ಪಡೆದ ಸಾಲವನ್ನು ತೀರಿಸಲು ಮತ್ತೋಂದು ಫೈನಾನ್ಸ್‌ನವರು ಸಾಲವನ್ನು ನೀಡಿ ಅಧಿಕ ಬಡ್ಡಿಯನ್ನು ಹಾಕಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ, ಮೈಕ್ರೋ ಫೈನಾನ್ಸಗಳು ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ಧಂದೆಯನ್ನು ನಡೆಸುತ್ತಿದ್ದು, ಮಹಿಳೆಯರ ಗುಂಪುಗಳನ್ನು ಮಾಡಿ ಸಾಲ ನೀಡುತ್ತಾರೆ, ಒಬ್ಬರು ಸಾಲ ಕಟ್ಟದಿದ್ದರೆ ಉಳಿದವರು ಸೇರಿ ಸಾಲವನ್ನು ಕಟ್ಟಬೇಕೆಂದು ದಬ್ಬಾಳಿಕ್ಕೆ ಮಾಡಿ ಪೈನಾನ್ಸ್ ಸಿಬ್ಬಂದಿಗಳು ಬಡ ಮಹಿಳೆಯರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ, ಮೈಕ್ರೋ ಫೈನಾನ್ಸ್‌ಗಳು ಸಾಲವನ್ನು ವಸೂಲಾತಿಗೆ ಕಾನೂನು ಬಾಹೀರವಾಗಿ ಜನರ ಮೇಲೆ ದಬ್ಬಾಳಿಕ್ಕೆ, ಹಲ್ಲೆ ಮತ್ತು ಅವ್ಯಾಚ್ ಸಬ್ಬದಗಳಿಂದ ಬೈಯುವುದು ಮತ್ತು ಮಹಿಳೆಯರಿಗೆ ಸಾರ್ವಜನಿಕವಾಗಿ ಮಾನಸಿಕ ಕಿರುಕುಳ ನೀಡುತ್ತಿರುವುರಿಂದ ಇವತ್ತು ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ನೆಮ್ಮದಿ ಹಾಳಾಗಿದೆ, ಫೈನಾನ್ಸ್‌ಗಳು ನೀಡುತ್ತಿರುವ ಕಿರುಕುಳದಿಂದ ಬಡ ಕುಟುಂಬಗಳು ಮರ್ಯಾದೆಗೆ ಅಂಜಿ ಊರಗಳನ್ನು ತೊರೆಯುತ್ತಿದ್ದಾರೆ, ಇನ್ನು ಕೆಲವುಂದು ಕಡೆಗಳಲ್ಲಿ ಸಾಲ ಪಡೆದುಕೊಂಡ ಹಣಕ್ಕೆ ಬಡ್ಡಿ ಮೇಲೆ ಬಡ್ಡಿ ಹಾಕಿ ಸಾಲವನ್ನು ಪಡೆಯಲು ಗೊಂಡಾ ವರ್ತೆನೆಕ್ಕೆ ಬೇಸತ್ತು ಆತ್ಮಹತ್ಯಗಳನ್ನು ಮಾಡಿಕೊಂಡಿರುವ ಘಟನೆಗಳನ್ನು ನಡೆಯುತ್ತಿವೆ, ಕೊಡಲೇ ರಾಜ್ಯದ ಮುಖ್ಯಮಂತ್ರಿಗಳು ಎಚ್ಚತ್ತುಗೊಂಡು ಮೈಕ್ರೋ ಫೈನಾನ್ಸ್‌ಗಳು ರಾಜ್ಯದ ಬಡವರ, ರೈತರ, ಕೊಲಿಕಾರ್ಮಿಕರ ಸಾಲ ವಸೂಲಾತಿ ನೆಪ್ಪದಲ್ಲಿ ರಕ್ತ ಹೇರುತ್ತಿರುವ ವಿರುಧ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ವಸೂಲಿ ನೆಪ್ಪದಲ್ಲಿ ಬಡವರನ್ನು ಕಿರುಕುಳ ನೀಡುತ್ತಿರುವ ಫೈನಾನ್ಸ್ ಸಿಬ್ಬಂದಿಗಳ ಮೇಲೆ ಗೊಂಡಾ ಕಾಯ್ದೆಡಿಯಲ್ಲಿ ಬಂಧಿಸಲು ರಾಜ್ಯದ ಎಲ್ಲಾ ಪೊಲೀಸ ಇಲಾಖೆಗಳಿಗೆ ಆದೇಶಿಸಬೇಕು, ರಾಜ್ಯದಲ್ಲಿ ಮೈಕ್ರೋ ಫೈನನ್ಸ್‌ಗಳ ಗೊಂಡಾ ವರ್ತೆನೆಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು, ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಮಂಜುನಾಥ ಶ್ರೀಗಿರಿ, ಮಕ್ತುಮಸಾಬ ಮುಲ್ಲಾನವರ, ಖಾಜಾಸಾಬ ಬಳ್ಳಾರಿ, ಶಂಕ್ರ್ಪ ರೋಣದ ಹಾಗೂ ಮುಂತಾದವರು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.