ರೇವಣಸಿದ್ದೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವದ ಭಿತ್ತಿಪತ್ರ ಬಿಡುಗಡೆ

Poster released for the festival of Revanasiddheshwara Viraktamath

ರೇವಣಸಿದ್ದೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವದ ಭಿತ್ತಿಪತ್ರ ಬಿಡುಗಡೆ

ರಾಯಬಾಗ, 07 : ತಾಲೂಕಿನ ಭೆಂಡವಾಡ (ಗುಡ್ಡದ) ಗ್ರಾಮದ ರೇವಣಸಿದ್ದೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ ಎ. 11ರಿಂದ 13ರವರೆಗೆ ಜರುಗಲಿದೆ. ಎ. 11ರಂದು ರೇವಣಸಿದ್ದೇಶ್ವರ ಉತ್ಸವ ಮೂರ್ತಿಯು ಗುಡ್ಡದ ಶ್ರೀಮಠಕ್ಕೆ ಆಗಮಿಸುವುದು. ಎ. 12ರಂದು ಮುಂ.6 ಗಂಟೆಗೆ ಕತೃ ಗದ್ದುಗೆಗೆ ರುದ್ರಾಭಿಷೇಕ ನಂತರ ಘಟಪ್ರಭಾದ ಹೊಸಮಠದ ವಿರೂಪಾಕ್ಷ ಸ್ವಾಮೀಜಿಯವರಿಂದ ಲಿಂಗದೀಕ್ಷೆ ಮತ್ತು ಅಯ್ಯಾಚಾರ.ಮಧ್ಯಾಹ್ನ 12 ಗಂಟೆಗೆ ಭಕ್ತರಿಂದ ನೈವೇದ್ಯ. ಸಾಯಂಕಾಲ 5 ಗಂಟೆಗೆ ಧಾರ್ಮಿಕ ಶಿವಾನುಭವ ಕಾರ್ಯಕ್ರಮ ಜರುಗಲಿದ್ದು ಸಾನ್ನಿಧ್ಯವನ್ನು ಬೆಲ್ಲದ ಬಾಗೇವಾಡಿಯ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ವಹಿಸಲಿದ್ದಾರೆ, ಅಧ್ಯಕ್ಷತೆಯನ್ನು ಭೆಂಡವಾಡ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿ ವಹಿಸುವರು. ಉದ್ಘಾಟಕರಾಗಿ ಪಿ.ಎಲ್‌.ಡಿ ಬ್ಯಾಂಕ ಅಧ್ಯಕ್ಷ ಪ್ರತಾಪರಾವ ಪಾಟೀಲ ಆಗಮಿಸಲಿದ್ದಾರೆ.ವಿರೂಪಾಕ್ಷ ಸ್ವಾಮೀಜಿ, ಪ್ರಭು ಮಹಾರಾಜರು, ಅಭಿನವ ದರಿದೇವರು ಸ್ವಾಮೀಜಿ ಭಾಗವಹಿಸಲಿದ್ದಾರೆ. ಬೆಳವಿ ಸಿದ್ದಾರೂಢ ಮಠದ ಮೃತ್ಯುಂಜಯ ಸ್ವಾಮೀಜಿ, ಇಟ್ನಾಳದ ಸಿದ್ದೇಶ್ವರ ಸ್ವಾಮೀಜಿ, ಕಂಕಣವಾಡಿಯ ಮಾರುತಿ ಶರಣರು ಪ್ರವಚನ ನೀಡಲಿದ್ದಾರೆ. ಅತಿಥಿಗಳಾಗಿ ಸಂಸದೆ ಪ್ರಿಯಾಂಕ ಜಾರಕಿಹೊಳಿ, ಶಾಸಕರಾದ ಡಿ.ಎಮ್‌.ಐಹೊಳೆ, ಮಹೇಂದ್ರ ತಮ್ಮಣವರ, ಹಿರಿಯ ಧುರೀಣರಾದ ಅನೀಲ ದಳವಾಯಿ, ಅಶೋಕ ದಳವಾಯಿ, ಅರುಣ ದಳವಾಯಿ, ವಕೀಲರಾದ ವಿ.ಎಸ್‌.ಪೂಜಾರಿ ಆಗಮಿಸಲಿದ್ದಾರೆ.ರಾತ್ರಿ 9 ಗಂಟೆಗೆ ಕರಡಿ ಮಜಲು ನಡೆಯಲಿದೆ. ಎ. 13ರಂದು ಮುಂಜಾನೆ ಪಲ್ಲಕ್ಕಿಗಳು ರೇವಣಸಿದ್ದೇಶ್ವರ ಗಿರಿ (ಗುಡ್ಡ) ಏರುವುದು, ನಂತರ ಸಕ್ಕರೆ ನೈವೇದ್ಯ. ಮಧ್ಯಾಹ್ನ ಮಹಾಪ್ರಸಾದ. ಸಂಜೆ ಜಂಗಿ ನಿಕಾಲಿ ಕುಸ್ತಿಗಳು ಜರುಗಲಿವೆ ಎಂದು ಭೆಂಡವಾಡ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿಯವರು ಸೋಮವಾರ ಜಾತ್ರಾ ಮಹೋತ್ಸವದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ತಿಳಿಸಿದರು.