ಫೆ.07 ರಂದು ವಿವಿಧ ಮಹನೀಯರ ಜಯಂತಿಯ ಪೂರ್ವಭಾವಿ ಸಭೆ

Pre-jubilee meeting of various dignitaries on Feb. 07

ಫೆ.07 ರಂದು ವಿವಿಧ ಮಹನೀಯರ ಜಯಂತಿಯ ಪೂರ್ವಭಾವಿ ಸಭೆ

ಬಳ್ಳಾರಿ 05: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಫೆ.15 ರಂದು ಸಂತ ಸೇವಾಲಾಲ್ ಜಯಂತಿ, ಫೆ.19 ರಂದು ಛತ್ರಪತಿ ಶಿವಾಜಿ ಜಯಂತಿ ಹಾಗೂ ಫೆ.20 ರಂದು ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಕುರಿತು ಫೆ.07 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಏರಿ​‍್ಡಸಲಾಗಿದೆ. 

ಫೆ.07 ರಂದು ಸಂಜೆ 04 ಗಂಟೆಗೆ ಸಂತ ಸೇವಾಲಾಲ್ ಜಯಂತಿ, 04.30 ಗಂಟೆಗೆ ಛತ್ರಪತಿ ಶಿವಾಜಿ ಜಯಂತಿ, 05 ಗಂಟೆಗೆ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ನಡೆಯಲಿದೆ.ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಅಧ್ಯಕ್ಷತೆ ವಹಿಸುವರು.ಸಭೆಗೆ ಸಮುದಾಯದ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ.