ಪರಿಶಿಷ್ಟ ಜಾತಿ ವರ್ಗಗಳ ಆಥರ್ಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ ರೂಪಿಸಿ: ಜಿಲ್ಲಾಧಿಕಾರಿ ಡಾ.ವೆಂಕಟೇಶ್

ಹಾವೇರಿ13: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಸಕರ್ಾರ ರೂಪಿಸಿರುವ ಉಪ ಯೋಜನೆಗಳಡಿ ಒದಗಿಸುವ ಸೌಲಭ್ಯಗಳು ಫಲಾನುಭವಿಗಳಿಗೆ ಶಾಶ್ವತವಾಗಿ ಆಥರ್ಿಕ ಚೇತರಿಕಗೆ ಅನುಕೂಲವಾಗುವ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸಿ ಎಂದು ಅನುಷ್ಠಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್  ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕನರ್ಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿ ಕೈಗೊಂಡಿರುವ ಅಕ್ಟೋಬರ್ ಮಾಹೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು.

ವೇಳಾಪಟ್ಟಿಯಂತೆ ಅನುದಾನವನ್ನು ಖಚರ್ುಮಾಡಿ, ಫಲಾನುಭವಿಗಳ ಆಯ್ಕೆಯಲ್ಲಿ ನೈಜತೆ ಇರಲಿ, ಕಾಮಗಾರಿಗಳಲ್ಲಿ ಗುಣಮಟ್ಟಕಾಪಾಡಿ, ಕಾರ್ಯಕ್ರಮ ಅನುಷ್ಠಾನದಲ್ಲಿ ವಿಳಂಬ ಧೋರಣೆಯನ್ನು ಕರ್ತವ್ಯ ಲೋಪವೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿದರು.

ವಿವಿಧ ಯೋಜನೆಯಡಿ ಸೌಲಭ್ಯ ಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಫಲಾನುಭವಿಗಳ ವಿವರನವನ್ನು ಗ್ರಾಮ ಪಂಚಾಯತಿ ಒಳಗೊಂಡಂತೆ ಎಲ್ಲೆಡೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಿ.  ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಭಾವಿ ಕೊರೆಸಿದ ಫಲಾನುಭವಿಗಳ ಜಮೀನಿನಲ್ಲಿ ಸಂಪನ್ಮೂಲ ಸೃಷ್ಟಿಮಾಡಲು ರೇಷ್ಮೆ, ತೋಟಗಾರಿಕೆ, ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ನೆರವು ನೀಡಿ. ಉದ್ಯೋಗ ಖಾತ್ರಿಯಲ್ಲಿ ಜಮೀನಿನ ಅಭಿವೃದ್ಧಿ, ಕೊಟ್ಟಿಗೆ ನಿಮರ್ಾಣ, ಕಣ ಅಭಿವೃದ್ಧಿ ಸೇರಿದಂತೆ ವಿವಿಧ ನೆರವುಗಳನ್ನು ಕಲ್ಪಿಸಿ ಎಂದು ಸಲಹೆ ನೀಡಿದರು.

ಸಾಂತ್ವನ, ಸ್ವಾಧಾರ ಯೋಜನೆಯಡಿ ಈ ವರ್ಗದ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಲ್ಪಿಸಿಕೊಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೈಗಾರಿಕಾ ಇಲಾಖೆ, ಜವಳಿ ಇಲಾಖೆ ಸಹಯೋಗದಲ್ಲಿ ಹೊಲಿಗೆ ಯಂತ್ರ ಕೊಡಿಸುವುದರ ಜೊತೆಗೆ ಅಲ್ಪಾವಾಧಿ ತರಬೇತಿ ಕೊಡಿಸಿ ಸ್ವಂತ ಬದುಕು ಕಟ್ಟಿಕೊಳ್ಳಲು ಯೋಜನೆಯನ್ನು ರೂಪಿಸಿ ಎಂದು ಹೇಳಿದರು.

ವಿವಿಧ ನಿಗಮಗಳು ಟೈಂಪಾಸ್ ನಿಗಮಗಳಾಗಿವೆ. ಕಾಲಹರಣ ಮಾಡದೆ ತ್ವರಿತವಾಗಿ ಫಲಾನುಭವಿಗಳನ್ನು ಆಯ್ಕೆಮಾಡಿ ಮೆರಿಟ್ ಆಧಾರದ ಮೇಲೆ ತಮ್ಮ ಕಮೀಟಿಯ ಮೂಲಕ ಆಯ್ಕೆಮಾಡಿ ಸೌಲಭ್ಯಗಳನ್ನು ನೀಡಲು ಕ್ರಮವಹಿಸಬೇಕು ಎಂದು ಸೂಚಿಸಿದರು.

       ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಇಲಾಖೆಗಳು ಹಾವೇರಿ ಜಿಲ್ಲೆಯಂತಹ ಕೃಷಿ ಪ್ರಧಾನ ಜಿಲ್ಲೆಯಲ್ಲಿ ಆಥರ್ಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಮನ್ವಯತೆಯಿಂದ ಕೆಲಸಮಾಡಬೇಕು. ಸಂಪನ್ಮೂಲಗಳ ಸೃಜನೆಗೆ ಜನರ ಆಥರ್ಿಕ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದರು.

ಜಾತಿ ಹಾಗೂ ಆದಾಯ ಪ್ರಮಾಣಪತ್ರ ಕಾರಣಕ್ಕಾಗಿ ಯಾವ ವಿದ್ಯಾಥರ್ಿಯೂ ವಿದ್ಯಾಥರ್ಿ ವೇತನ ಪಡೆಯಲು ವಂಚಿತವಾಗಬಾರದು. ನಾಡ ಕಚೇರಿಯಿಂದಲೇ ಅಧಿಕಾರಿಗಳು ರೇಷನ್ ಕಾಡರ್್ ಎಂಟ್ರಿಮಾಡಿ ಆನ್ಲೈನ್ನಲ್ಲಿ ಪ್ರಮಾಣಪತ್ರ ಪಡೆಯುವ ಕುರಿತಂತೆ ಕ್ರಮವಹಿಸಬೇಕು ಅಥವಾ ಸ್ಪಂದನ ಕೇಂದ್ರದಿಂದ ವಿದ್ಯಾಥರ್ಿಗಳ ಜಾತಿ ಪ್ರಮಾಣಪತ್ರಗಳನ್ನು ಆನ್ಲೈನ್ನಲ್ಲಿ ಪಡೆಯುವ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯಿಂದ ನೋಡಲ್ ಅಧಿಕಾರಿಯೋರ್ವರನ್ನು ನೇಮಕ ಮಾಡುವಂತೆ ಸೂಚನೆ ನೀಡಿದರು.