ಲೋಕದರ್ಶನ
ವರದಿ
ಕಾರವಾರ 11:
ಬಡ್ತಿ ಮೀಸಲಾತಿ ಕಾಯ್ದೆ-2018ನ್ನು ಜಾರಿಗೊಳಿಸದಂತೆ ಆಗ್ರಹಿಸಿ
ರಾಜ್ಯದ ಮುಖ್ಯಮಂತ್ರಿಗೆ ಉತ್ತರ ಕನ್ನಡ ಜಿಲ್ಲೆಯ ಅಲ್ಪ ಸಂಖ್ಯಾತ, ಹಿಂದುಳಿದ
ಹಾಗೂ ಸಾಮಾನ್ಯ ವರ್ಗದ (ಅಹಿಂಸಾ)ಹಾಲಿ ನೌಕರರ ಹಿತರಕ್ಷಣಾ
ಒಕ್ಕೂಟವು ಕಾರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿತು.
ಬ್ಯಾಕ್ ಲಾಗ್ನಲ್ಲಿ ಶೇ.18 ಪಾಲಿಸದೇ ಶೇ.100 ರಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿ ವರ್ಗಗಳ ನೌಕರರಿಗೆ
ಬಡ್ತಿ ಮೀಸಲಾತಿಯನ್ನು ನೀಡಿದಾಗ ನೌಕರರಾದ ನಾಗರಾಜ್ ಹಾಗೂ ಪವಿತ್ರ ಅವರು
ಸುಪ್ರಿಂಕೋರ್ಟ ಮೆಟ್ಟಿಲು ಹತ್ತಿದರು. ಬಡ್ತಿ ವಿಷಯ ಲೋಯಕ್ ಕ್ಲಾಸ್-1ವರೆಗೆ ಮಾತ್ರ ನೀಡಬೇಕೆಂದಿದೆ. ಇದನ್ನು ಮೀರಿ ಪರಿಶಿಷ್ಟ
ಜಾತಿ ವರ್ಗಗಳ ಹಿತ ಮಾತ್ರ ಕಾಯಲು
ಹೋದ ಸಕರ್ಾರ ಅನೇಕ ತಪ್ಪುಗಳನ್ನು ಮಾಡಿತು.
ಕೊನೆಗೆ ಅಹಿಂಸಾ ದಾಖಲೆ ಸಂಗ್ರಹಿಸಿ 1992 ರಿಂದ ಕಾನೂನು ಹೋರಾಟ
ಮಾಡಲಾಗಿದೆ.
ಅಹಿಂಸಾದ ನೌಕರರು ಶೇ.82 ರಷ್ಟಿದ್ದು ಅವರ ಹಿತವನ್ನು ಸಕರ್ಾರ
ಕಾಯಬೇಕಿದೆ. ಸುಪ್ರಿಂಕೋರ್ಟ ತೀಪರ್ಿನ ಬಳಿಕ ಸಕರ್ಾರ ಅನೇಕ
ಇಲಾಖೆಗಳಲ್ಲಿ ಬಡ್ತಿಯಲ್ಲಿ ಆಗಿದ್ದ ಅನ್ಯಾಯ ಸರಿಪಡಿಸಿದೆ. ಅದನ್ನು ಕಾಯ್ದುಕೊಳ್ಳಬೇಕು. ಶಿಕ್ಷಣ ಇಲಾಖೆಯಲ್ಲಿ ಮಾತ್ರ ಬಡ್ತಿ ಮೀಸಲಾತಿಯನ್ನು ಸರಿಪಡಿಸಲಾಗಿಲ್ಲ. ಅಲ್ಲದೇ ಬಡ್ತಿ ಮೀಸಲಾತಿ ಕಾಯ್ದೆ -2018 ಜಾರಿಗೊಳಿಸದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡುತ್ತಿದ್ದೇವೆ. ಪರಿಶಿಷ್ಟ
ಜಾತಿ ವರ್ಗದ ನೌಕರರಿಗೆ ಶೇ.18 ರಷ್ಟು ಬಡ್ತಿ ನೀಡಲು ಅಹಿಂಸಾದ ಅಭ್ಯಂತರವೇನಿಲ್ಲ. ಆದರೆ ಬ್ಯಾಕ್ ಲಾಗ್
ನೆಪದಲ್ಲಿ ಮತ್ತೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಅಹಿಂಸಾ ಧರಣಿ
ನಿರತರನ್ನು ಉದ್ದೇಶಿಸಿ ಮಾತನಾಡಿದ ಎಂಜಿನಿಯರ್ ಎಂ.ವಿ. ಹೆಗಡೆ
ಅಭಿಪ್ರಾಯಪಟ್ಟರು.
ಬಡ್ತಿ ಮೀಸಲಾತಿ ಕಾಯ್ದೆ -2018 ಜಾರಿಗೊಳಿಸದಂತೆ ಸುಪ್ರಿಂಕೋರ್ಟನಲ್ಲಿ ಪ್ರಶ್ನಿಸಲಾಗಿದೆ. ಸುಪ್ರಿಂಕೋರ್ಟ ಯಥಾಸ್ಥಿತಿ ಕಾಯ್ದುಕೊಳ್ಳಲು ತಿಳಿಸಿದೆ. ಈ ವಿಚಾರದಲ್ಲಿ ಸದ್ಯದಲ್ಲೇ
ನಡೆಯಲಿರುವ ಸಚಿವ ಸಂಪುಟದ ತಿಮರ್ಾನವನ್ನು
ನಾವು ಎದುರು ನೋಡುತ್ತಿದ್ದೇವೆ. ಶೇ.82 ನೌಕರರು ಇರುವ ಅಹಿಂಸಾದ ಬೇಡಿಕೆಯನ್ನು
ರಾಜ್ಯ ಸಕರ್ಾರ ಕಾಯಬೇಕು. ಇಲ್ಲದೇ ಹೋದಲ್ಲಿ ಅಸಹಕಾರ ಚಳುವಳಿ ಆರಂಭಿಸಬೇಕಾಗಬಹುದು ಎಂಬ ಸಂದೇಶವನ್ನು ರಾಜ್ಯ
ಸಕರ್ಾರಿ ನೌಕರರು ಸಕರ್ಾರಕ್ಕೆ ರವಾನಿಸಿದರು. 1996ರಲ್ಲಿ ಕೋರ್ಟ ಆದೇಶ ನಿಂದನೆ ಮಾಡಿದ
ಸಕರ್ಾರದ ಕಾರ್ಯದಶರ್ಿ ಜೆ.ವಾಸುದೇವನ್ ಒಂದು
ತಿಂಗಳು ಜೈಲು ವಾಸ ಅನುಭವಿಸಿದ
ಘಟನೆಯನ್ನು ಅಹಿಂಸಾ ಧರಣಿ ನಿರತ ನೌಕರರು
ನೆನಪಿಸಿದರು. ಅಲ್ಲದೇ 26 ವರ್ಷದ ಸುಧೀರ್ಘ ಹೋರಾಟಕ್ಕೆ ಸುಪ್ರಿಂಕೋರ್ಟ ನಿದರ್ೇಶನ ನೀಡಿದೆ. ಅದನ್ನು ರಾಜ್ಯ ಸಕರ್ಾರ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಬೇಕು ಎಂದು
ಧರಣಿ ನಿರತರು ಒತ್ತಾಯಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೇಡಿಕೆಯ ಲಿಖಿತ ಮನವಿಯನ್ನು ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಹಿಟ್ನಾಳ ಅವರ ಮೂಲಕ ಸಲ್ಲಿಸಿದರು.
ಅಹಿಂಸಾ ಜಿಲ್ಲಾಧ್ಯಕ್ಷ ಮಹೇಶ್ ನಾಯ್ಕ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಂಜೀವ್
ನಾಯ್ಕ, ಪಿಎಂಜಿಎಸ್ವೈ ಎಂಜಿನಿಯರ್ ರವೀಂದ್ರ ಹೂಗಾರ,ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್ ಗಂಗಾಧರ ಕೊಡ್ಲಿ, ಪಿಡಬ್ಲುಡಿ ಇಲಾಖೆಯ ಎಂಜಿನಿಯರ್ ಇಸಾಕ್, ನಗರಸಭೆಯ ನೌಕರ ಜೋಶಿ ಸೇರಿದಂತೆ
ವಿವಿಧ ಇಲಾಖೆಗಳ ನೌಕರರು ಧರಣಿಯಲ್ಲಿ ಭಾಗವಹಿಸಿದ್ದರು.