ವಿವಿಧ ಬೇಡಿಕೆ ಆಗ್ರಹಿಸಿ ಗ್ರಾಮ ಲೆಕ್ಕಾಧಿಕಾರಿಗಳ ಪ್ರತಿಭಟನೆ
ಶಿರಹಟ್ಟಿ : ವಿವಿಧ ಬೇಡಿಕೆ ಆಗ್ರಹಿಸಿ ಶಿರಹಟ್ಟಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಶಿರಹಟ್ಟಿ ತಾಲೂಕು ಆಡಳಿತ ಕಚೇರಿ ಎದುರು ಸೋಮವಾರ ಎರಡನೇ ಹಂತದ ಮುಷ್ಕರ ನಡೆಯಿತು. ಶಿರಹಟ್ಟಿ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಕಪ್ಪು ಪಟ್ಟಿ ಧರಿಸಿ ನಾಗರಾಜ್ ಚೋಳಂನವರು ಮಾತನಾಡಿ ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಐದಾರು ಗ್ರಾಮಗಳ ಜವಾಬ್ದಾರಿ ನೀಡುವುದರಿಂದ ಸಾರ್ವಜನಿಕರಿಗೆ ಸಮರ್ಕ ಸೇವೆ ನೀಡಲು ಸಾಧ್ಯವಾಗದೆ ಒತ್ತಡದ ಬದುಕು ನಡೆಸುವಂತಹಾಗಿದೆ. ಕಂದಾಯ ಇಲಾಖೆಯಿಂದ ನಿರಂತರವಾಗಿ ಸರ್ಕಾರ ದಿಂದ ಅಭಿವೃದ್ಧಿಪಡಿಸಿರುವ ಹಕ್ಕು ಪತ್ರ ,ಆಧಾರ್ ಸೀಡ್, ಬೆಳೆ ಕಟಾವು ಮೊಬೈಲ್ ಆಪ್ ಭೂಮಿ ದಿಶಾಂಕ ಸೇರಿ ದಂತೆ ಸುಮಾರು 21 ಎಲ್ಲಾ ವೆಬ್ ಮೊಬೈಲ್ ತಂತ್ರಾಂಶಗಳ ಮೂಲಕ ಹಾಗೂ ಸಿ ವೃಂದದ ನೌಕರರ 10 ಪಟ್ಟು ಕೆಲಸ ನಿರ್ವಹಿಸುತ್ತಿದ್ದು ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳ ವೇತನ ಶ್ರೇಣಿ ನೀಡಬೇಕು. ಮೂಲ ಸೌಲಭ್ಯ ಕಲ್ಪಿಸಬೇಕು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯ ಕಲ್ಪಿಸಬೇಕು ತಂತ್ರಾಂಶಗಳಿಗೆ ಸಂಬಂಧಿಸಿದ ಎಲ್ಲಾ ಅಮಾನತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯಬೇಕು. ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೊ ಹಾಕಬಾರದು ಹಲವಾರು ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟು ಪ್ರತಿಭಟನೆ ನಡೆಸಿದರು.
ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮತ್ತು ತಹಸೀಲ್ದಾರ್ ಅನಿಲ್ ಬಡಿಗೇರ್ ಮೂಲಕ ಮನವಿ ನೀಡಲಾಯಿತು. ಸಂಘದೋಪಾಧ್ಯಕ್ಷರು ಪರಶುರಾಮ್ ತಳವಾರ್, ಚನ್ನವೀರ ಸ್ವಾಮಿ ಸಿದ್ದಂತ ಮಠ, ಬಿಪಿ ನಂದಗಾವಿ, ನಾಗಪ್ಪ ರಾಥೋಡ್ ಚಂದ್ರಶೇಖರ್ ತಳವಾರ್ ,ಶಂಭುಲಿಂಗಯ್ಯ ಹೆಬ್ಬಾಳ ,ರಾಧಾ ದೇಸಾಯಿ ಪಟ್ಟಿ ,ಶೃತಿ ಮಡ್ಡಿ ,ಬಿಎಫ್ ಜೀನಗಿ ,ಶರಣಬಸಪ್ಪ ಮೈನಲ್, ಸದಸ್ಯರು ಹಾಗೂ ಇತರರಿದ್ದರು ಆಡಳಿತ ಸರ್ಕಾರ ಹತ್ತಾರು ಹೊಸ ತಂತ್ರಾಂಶಗಳ ಕೆಲಸವನ್ನು ಯಾವುದೇ ಸೌಲಭ್ಯ ನೀಡದೆ ನಿರ್ವಹಿಸುವ ಜೊತೆಗೆ ಸಿಬ್ಬಂದಿ ಕೊರತೆ ಕಂದಾಯ ನಿರ್ವಹಣೆ ಹತ್ತಾರು ಜವಾಬ್ದಾರಿಗಳನ್ನ ಗ್ರಾಮ ಲೆಕ್ಕಾಧಿಕಾರಿ ಮೇಲೆ ಹೇರಲಾಗಿದೆ ಶಾಸಕ ಡಾಕ್ಟರ್ ಚಂದ್ರು ಲಮಾಣಿ.
ತಕ್ಷಣವೇ ಸರ್ಕಾರದ ಗಮನಕ್ಕೆ ನೀಡಿ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಗಳನ್ನು ಸ್ಪಂದಿಸುವಂತೆ ಮೇಲಾಧಿಕಾರಿಗಳ ಜೊತೆಗೆ ಮಾತನಾಡುತ್ತೇವೆ. ಶಿರಹಟ್ಟಿ ತಹಶೀಲ್ದಾರ್ ಅನಿಲ್ ಬಡಿಗೇರ್