ರಾಮಸಾಗರದಲಿ ಜೋಡಿ ಮಹಾರಥೋತ್ಸವ

Ramsagaradali Jodi Maharatthasa

ಲೋಕದರ್ಶನ ವರದಿ 

ರಾಮಸಾಗರದಲಿ  ಜೋಡಿ ಮಹಾರಥೋತ್ಸವ 

ಕಂಪಿ  01:  ತಾಲ್ಲೂಕಿನ ರಾಮಸಾಗರ ಗ್ರಾಮದ ಆರಾಧ್ಯ ದೇವರಾದ   ಉಮಾಮಹೇಶ್ವರ (ನಗರೇಶ್ವರ) ಸ್ವಾಮಿಯ ಜೋಡಿ ರಥೋತ್ಸವವು ಹಿಂದೂಗಳ ಪವಿತ್ರ ಹಬ್ಬ ಹಾಗೂ ನೂತನ ವರ್ಷಾಚರಣೆಯ ದಿನವಾದ ಯುಗಾದಿ ಪಾಡ್ಯದಂದು ಸಂಜೆ ಸಡಗರ ಸಂಭ್ರಮಗಳಿಂದ ಜರುಗಿತು. ಆಕರ್ಷಕ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಬುಧವಾರ ಬೆಳಿಗ್ಗೆ ಹೋಮಹವನಗಳನ್ನು ನಡೆಸಿ ಉಮಾಮಹೇಶ್ವರ (ನಗರೇಶ್ವರ) ಸ್ವಾಮಿಗೆ ವಿವಿಧ ಅಭಿಷೇಕಗಳನ್ನು ನೆರವೇರಿವೇರಿಸಿದ ನಂತರ ಸಕಲ ಸದ್ಭಕ್ತರು ಮಡಿ ತೇರನ್ನು ಎಳೆದರು. ಜೋಡಿ ರಥೊತ್ಸವವು, ಭಕ್ತಾದಿಗಳ ಮುಗಿಲು ಮುಟ್ಟುವ ಘೋಷಣೆಗಳೊಂದಿಗೆ ಗ್ರಾಮದ ರಾಜಬೀದಿಯಲ್ಲಿ ವಿಜೃಂಭಣೆಯಿಂದ ಜರುಗಿತು. ರಥೋತ್ಸವದಲ್ಲಿ ತಾಷಾರಾಂ ಡೋಲ್, ಮಂಗಳ ವಾದ್ಯಗಳು ಭಾಗವಹಿಸಿದ್ದವು. ಮಹಿಳೆಯರು ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಭಾಗವಹಿಸಿ ತೇರುಗಳಿಗೆ ಉತ್ತತ್ತಿ ಹಣ್ಣು ಹೂಗಳನ್ನು ಎಸೆದು ತಮ್ಮ ಹರಕೆಗಳನ್ನು ತೀರಿಸಿದರು. ಮಹಾರಥೋತ್ಸವದಲ್ಲಿ ಹಾಲಿ, ಮಾಜಿ ಜನಪ್ರತಿನಿಧಿಗಳು ಭಾಗವಹಿಸಿ ಸ್ವಾಮಿಯ ದರ್ಶನಾರ್ಶೀವಾದ ಪಡೆದರು.ರಾತ್ರಿ ಗ್ರಾಮದ ಕಲಾವಿದರಿಂದ “ಪಾಂಡುವಿಜಯ” ಅರ್ಥಾತ್ ಕೀಚಕನ ವಧೆ ಎನ್ನುವ ಬಯಲು ನಾಟಕ ಪ್ರದರ್ಶನ ಗೊಂಡಿತು.