ಸಾಹಿತ್ಯ ಓದು ಸ್ವಧ್ಯಾಯವಾಗಬೇಕು: ಪ್ರೊ.ಬಿ. ಪಿ.ನ್ಯಾಮಗೌಡ

Reading literature should be self-study: Prof. B. P. Nyamagowda

ಲೋಕದರ್ಶನ ವರದಿ 

ಸಾಹಿತ್ಯ ಓದು ಸ್ವಧ್ಯಾಯವಾಗಬೇಕು: ಪ್ರೊ.ಬಿ. ಪಿ.ನ್ಯಾಮಗೌಡ 

ಬಾಗಲಕೋಟ 26: ಸಂಶೋಧಕರು  ವ್ಯಾಕರಣದ ಶಬ್ದಗಳನ್ನು ಭೇರಿ​‍್ಡಸುವ ಗುಣ ಉಳ್ಳವರಾಗಬೇಕು ವಾಕ್ಯಗಳಲ್ಲಿ ಸಾಕಷ್ಟು ಅರ್ಥಗಳಿರುತ್ತವೆ ಹುಡುಕುವ  ಪ್ರಯತ್ನ ಮಾಡಬೇಕು ಯಾವುದೇ ಕೃತಿ ಇರಲಿ ಅದನ್ನು  ಅದನ್ನ ಸಾಹಿತಿಕ ಪರಿಭಾಷೆಯಲ್ಲಿ ಓದಬೇಕು ಧರ್ಮದ ಆಧಾರದ ಮೇಲೆ ಅಲ್ಲ ಎಂದು ಜಮಖಂಡಿಯ ಹಿರಿಯ ವಿದ್ವಾಂಸರಾದ ಪ್ರೊ.ಬಿ. ಪಿ.ನ್ಯಾಮಗೌಡ ಹೇಳಿದರು.  

ನಗರದ ಬಿವ್ಹಿವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ  ಸಂಶೋಧನಾ ಕೇಂದ್ರ,ಕನ್ನಡ ವಿಭಾಗ ಹಾಗೂ ಕನ್ನಡ ಸ್ನಾತಕೋತ್ತರ ವಿಭಾಗದ ಅಡಿಯಲ್ಲಿ ಆಯೋಜಿಸಲಾಗಿದ್ದ ನೋಂಪಿಯ ಕಥೆಗಳು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

 ಕವಿ ಬೇರೆ ವ್ಯಕ್ತಿ ಬೇರೆ ಕವಿಯಿಂದ ರಚಿತವಾಗುವ ಕೃತಿ ಸರ್ವರಿಗೂ ಬೇಕು, ನಾವು ಸಂಶೋಧಿಸಿ  ಬರೆಯುವ ಪುಸ್ತಕಗಳಿಗೆ  ಬೇಡಿಕೆ ಬರಬೇಕು  ಆರೀತಿಯಾಗಿ ಸಂಶೋಧನೆ ಮಾಡಬೇಕು, ಆದರೆ ಇಂದು ಪುಸ್ತಕ ಓದುವುರೇ ಇಲ್ಲದಂತಾಗಿದೆ ಎಂದರು. ಪುಸ್ತಕಗಳು ಕೈಯಿಂದ ಕೈಯಿಗೆ  ಹರಿದಾಡುತ್ತಿರಬೇಕು, ಅಂಕಗಳ ಆಧಾರದ ಮೇಲೆ ಜ್ಞಾನವನ್ನು ಅಳಿಯಬಾರದು. ಓದೋದು ಜ್ಞಾನಕ್ಕಾದರೆ ಸ್ವಧ್ಯಾಯ ನಿಮ್ಮನ್ನು ನೀವು ಅರ್ಥ ಮಾಡಿಕೋಳ್ಳುವುದಕ್ಕೆ ಆದ್ದರಿಂದ ಸ್ವಧ್ಯಾಯ ಹೆಚ್ಚಾಗಬೇಕು ಎಂದರು. 

ತಪ್ಪಸು ಅಂದರೆ ಕೇವಲ ಕಣ್ಣು ಮುಚ್ಚಿಕೊಳ್ಳುವುದಲ್ಲ ಅದು ಆಂತರಾಳದ ಆಧ್ಯಾತ್ಮದ ಸುದ್ದಿ, ಜೀವನದ ಅನವಶ್ಯಕ ಸಂಗತಿಗಳನ್ನ  ಸುಡುವುದೆ ತಪವಾಗುತ್ತದೆ. ವೃತ ಎಂದರೇನು ದೋಷಗಳು ಇದ್ದಲ್ಲಿ ತೊಳಿದುಕೊಳ್ಳುವುದು, ಇವುಗಳೇಲ್ಲಾ ನೋಂಪಿಯ ಕಥೆಗಳು ಎಂದರು. ಪಾಶ್ಚಾತ್ಯರು ಬರುವ ಮುಂಚೆಯೇ ನಮ್ಮ ದೇಶದಲ್ಲಿ 20ವಿಶ್ವ ವಿದ್ಯಾಲಯಗಳು ಇದ್ದವು, ಮನುಷ್ಯ ಯಾವಾಗ ಆಚಾರ ವಿಚಾರಗಳ ಕುರಿತು ಯೋಚಿಸಿದನೋ ಅದೇ ಆರಾಧನೆ ಆಯಿತು. ಮೊಟ್ಟಮೊದಲು ನಮಗೆ ನೋಂಪಿ ಪ್ರಕಾರಗಳು 9ಶತಮಾನದದಲ್ಲಿ ಕಂಡು ಬಂದವು, ನೋಂಪಿಯ ಉತ್ತರ ಭಾಗದಲ್ಲಿ ಹೆಚ್ಚು ಪ್ರಚಾರತೆ ಎಲ್ಲಿವೆ ಸಧ್ಯ ದಾಖಲೆಯ ಪ್ರಕಾರ 365 ನೋಂಪಿಯ ವಿಧಗಳು ದೊರಕಿವೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಎಸ್‌. ಆರ್‌. ಮುಗನೂರಮಠ ಮಾತನಾಡಿ ಕೇಶಿವರ್ಮನಂತ ಕವಿಗಳು ವ್ಯಾಕರಣಗಳ ರೂಪದಲಿ ಮಾಹಿತಿಯನ್ನು ಕೊಟ್ಟರು. ಮನಸ್ಸಿಗೆ ಮಿತಿ ಹಾಕಿಕೊಳ್ಳುವುದುದೇ ನೋಂಪಿಯ ಕಥೆಗಳಲ್ಲಿ ಹೇಳಲಾಗುತ್ತದೆ, ವಿಪಷಣ ನೋಂಪಿಯಲ್ಲಿ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸಿ ಮನಸ್ಸನ್ನ ಸ್ವಚ್ಛ ಮಾಡಿಕೊಳ್ಳವುದುದಾಗಿದೆ,  ಸ್ವಯಂ ಮತ್ತು ಬಾಹ್ಯ ಅಪರಾಧಗಳು ಮನವರಿಕೆ ಮಾಡಿಕೊಂಡು ನೋಂಪಿಯ ಕಥೆಗಳ ಪ್ರಕಾರ ನಿಯಮ ಅಳವಡಿಸಿಕೊಳ್ಳುವುದು, ನಮ್ಮನ್ನು ಪರಿಷ್ಕರಿಸುವುದಾಗಿದೆ ಎಂದರು.  

ಡಾ. ಆರ್‌.ನಾಗರಾಜು, ಡಾ. ಅಪ್ಪು ರಾಠೋಡ್, ಡಾ. ಎಸ್‌. ಡಿ.ಕೆಂಗಲಗುತ್ತಿ, ಡಾ ವೀಣಾ ಕಲ್ಮಠ, ಡಾ ಬಸವರಾಜ ಕುಂಬಾರ, ಡಾ. ಎನ್‌. ಬಿ. ವಿರುಪಾಕ್ಷಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.