ದೈವಜ್ಞ ಬ್ರಾಹ್ಮಣ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಸರಕಾರಿ ಅನುದಾನ ಬಿಡುಗಡೆಗೆ
ಗದಗ 19:- ಕಳೆದ ಮೂರು ದಶಕಗಳ ಹಿಂದೆ ಅಂದರೆ ಸನ್ 1994-95 ನೇ ಸಾಲಿನಲ್ಲಿ ಅವಳಿ ನಗರವಾದ ಗದಗ ಬೆಟಗೇರಿಯ ಪ್ರತಿಷ್ಟಿತ ಸಮಾಜವಾದ ದೈವಜ್ಞ ಬ್ರಾಹ್ಮಣ ಸಮಾಜದ ಹಿರಿಯರಾದ ದಿವಂಗತ ನಾಗೇಶ್ ವಿಠೋಬಾ ಪಾಲನಕರ ರವರ ನೇತೃತ್ವದಲ್ಲಿ ಸ್ಥಳೀಯ ಸಮಾಜದ ಮುಖಂಡರ ಸಹಾಯ ಸಹಕಾರದೊಂದಿಗೆ ಮುಳಗುಂದ ರಸ್ತೆಯಲ್ಲಿ ನಮ್ಮದೇಯಾದ ಸಮಾಜದ ಸಮುದಾಯ ಭವನ ನಿರ್ಮಾಣವಾಗಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಅಂದು 17000 ಚದರ ಅಡಿ ನಿವೇಶನವನ್ನು ಸಮಾಜದ ಹಿರಿಯರು ಖರೀದಿಸಿ ಅವಳಿ ನಗರವಾದ ಗದಗ ಬೆಟಗೇರಿಯ ಸಮಾಜ ಭಾಂದವರಿಗೆ ಒಂದು ಸುಸಜ್ಜಿತವಾದ ಸಮುದಾಯ ಭವನದ ಕನಸನ್ನು ಹೊತ್ತು ಸದರಿ ನಿವೇಶನವನ್ನು ಖರೀದಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಮೂರು ದಶಕಗಳ ಸುಧೀರ್ಘ ಅವಧಿ ಗತಿಸಿದರೂ ಗದಗ ಬೆಟಗೇರಿಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರ ಕಲ್ಯಾಣ ಕಾರ್ಯಕ್ರಮಗಳಿಗೆ ಸ್ವ ಸಮಾಜದ ಸಮುದಾಯ ಭವನ ಅನುಷ್ಠಾನಗೊಳ್ಳದಿರುವದು ವಿಷಾದನೀಯವಾಗಿರುತ್ತದೆ. ಇದರಿಂದಾಗಿ ಸಮಾಜ ಭಾಂದವರು ಹೆಚ್ಚಿನ ದುಬಾರಿ ಬೆಲೆ ನೀಡುವ ಮೂಲಕ ಬೇರೆ ಕಲ್ಯಾಣ ಮಂಟಪದಲ್ಲಿ ತಮ್ಮ ಸಾಮಾಜಿಕ ಕಾರ್ಯಕ್ರಮಗಳಾದ ಮದುವೆ, ಉಪನಯನ, ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಮಾಡುವ ದುಃಸ್ಥಿತಿಯನ್ನು ಅನುಭವಿಸುತ್ತಿದ್ದರು. ಇದನ್ನರಿತ ಸನ್ಮಾನ್ಯ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ!! ಎಚ್ ಕೆ ಪಾಟೀಲ್ ಸಾಹೇಬರು ಸರಕಾರದಿಂದ ಅನುದಾನದ ಮಂಜೂರಾತಿ ಆದೇಶ ಪತ್ರವನ್ನು ಇಂದು ಇದೇ ದಿನಾಂಕ 19/02/2025 ರಂದು ದೈವಜ್ಞ ಸಮಾಜ್ಯೋನ್ನತಿ ಸಂಘದ ಸಮಾಜದ ಮುಖಂಡರಾದ ಗಣಪತಿ ಪಾಲನಕರ, ಅರವಿಂದ್ ಪಾಲನಕರ ಬಾಲರಾಜ್ ರೇವಣಕರ, ದೇವರಾಜ್ ದೈವಜ್ಞ, ನರಸಿಂಹ ಕುಡತರಕರ, ಸಂತೋಷ ಕುರ್ಡೇಕರ, ಕಿಶನ್ ರೇವಣಕರ, ಇವರಿಗೆ ಹಸ್ತಾಂತರಿಸಿದರು. ಒಟ್ಟಿನಲ್ಲಿ ಅವಳಿ ನಗರದ ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರ ಈ ಒಂದು ಬಹುದೊಡ್ಡ ಕೊರತೆಯನ್ನು ಅರಿತ ಸನ್ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳ ಸಂಸದೀಯ ವ್ಯೆವಹಾರಗಳ ಶಾಸನ ರಚನೆ ಹಾಗೂ ಪ್ರವಾಸೋಧ್ಯೇಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಾ!! ಎಚ್ ಕೆ ಪಾಟೀಲ್ ಸಾಹೇಬರು ಗದಗ ಶಹರದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಕಲ್ಯಾಣ ಮಂಟಪದ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಸರಕಾರದ ಅನುದಾನವನ್ನು ಮಂಜೂರು ಮಾಡಿಸುವ ಮೂಲಕ ಘನ್ ಕಾಂಗ್ರೇಸ್ ಪಕ್ಷವೂ ದೈವಜ್ಞ ಬ್ರಾಹ್ಮಣ ಸಮಾಜದ ನೆರವಿಗೆ ಹಾಗೂ ಸಮಾಜ ಭಾಂದವರ ಕುಂದು ಕೊರತೆಗಳಿಗೆ ಸದಾ ನೆರವಿನ ಸಹಾಯ ಹಸ್ತ ನೀಡುವುದರಲ್ಲಿ ಮುಂಚುಣಿಲ್ಲಿದೆ. ಎಂಬುದನ್ನು ಸನ್ಮಾನ್ಯ ಡಾ!! ಎಚ್ ಕೆ ಪಾಟೀಲ್ ಸಾಹೇಬರು ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಗೆ ನೆರವು ನೀಡುವ ಮೂಲಕ ದೃಢಿಕರಿಸಿದಂತಾಗಿದೆ ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಸಂತಸವನ್ನು ವ್ಯಕ್ತಪಡಿಸಿರುತ್ತಾರೆ.