ಧಾರ್ಮಿಕ ಕಾರ್ಯಕ್ರಮಗಳು ಭಾವೈಕ್ಯತೆ ಸಂಕೇತವಾಗಿವೆ: ಹನಮಗೌಡ ಪೋಲಿಸ್ ಪಾಟೀಲ್‌

Religious programs are a symbol of unity: Hanamagouda Police Patil

ಧಾರ್ಮಿಕ ಕಾರ್ಯಕ್ರಮಗಳು ಭಾವೈಕ್ಯತೆ ಸಂಕೇತವಾಗಿವೆ: ಹನಮಗೌಡ ಪೋಲಿಸ್ ಪಾಟೀಲ್‌

ಕುಕನೂರು 11: ನಮ್ಮ ಗ್ರಾಮೀಣ ಭಾಗದ ಜನರಿಗೆ ಜಾತ್ರೆ, ಉತ್ಸವ, ಮೋಹರಂ, ಧಾರ್ಮಿಕ ಕಾರ್ಯಕ್ರಮಗಳು ಭಾವೈಕ್ಯತೆ ಸಂಕೇತಗಳಾಗಿದ್ದು ಪ್ರತಿಯೊಬ್ಬರ  ಮನೆಗಳಲ್ಲಿ ಹಾಗೂ ಮನಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು  ಗ್ರಾಮದವರೆಲ್ಲರೂ ಸೇರಿ ಆಚರಿಸುತ್ತಾ ಬಂದಿದ್ದೇವೆ ಎಂದು ದಳಪತಿ ಹನಮಗೌಡ ಪೋಲಿಸ್ ಪಾಟೀಲ್ ಹೇಳಿದರು. 

ಅವರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಪ್ರತಿಮೂರು ವರ್ಷಕ್ಕೊಮ್ಮೆ ನಡೆಸುವ ದ್ಯಾಮಮ್ಮ ದೇವಿ ಪೂಜಾ ಕಾರ್ಯಕ್ರಮ ಉತ್ಸವದಲ್ಲಿ ಭಾಗಿಯಾಗಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಈ ದ್ಯಾಮಮ್ಮ ದೇವಿಯ ಪೂಜೆಯನ್ನು ಸಲ್ಲಿಸಿ ಉತ್ಸವದೊಂದಿಗೆ ಗ್ರಾಮದ ಪ್ರತಿಯೊಂದು ಮನೆಗೆ ಹೋಗಿ ದ್ಯಾಮಮ್ಮ ದೇವಿಗೆ ಉಡಿ ತುಂಬಿಸಿಕೊಂಡು ಬರಲಾಗುತ್ತದೆ. 

 ಈ ದೇವಿಯ ಉತ್ಸವವನ್ನು ಗ್ರಾಮದ ಪ್ರಮುಖ ಬೀದೀಗಳಲ್ಲಿ ಮಹಿಳೆಯರ ಕಳಸ ಕನ್ನಡಿಗಳೊಂದಿಗೆ ಉತ್ಸವ ನಡೆಸಲಾಗುತ್ತದೆ ಎಂದರು.ನಂತರ ಪ್ರಸಾದ ವಿತರಣೆ ಮಾಡಲಾಗುವುದು ಎಂದರು.ನಮ್ಮ ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಇದ್ದು ಇಲ್ಲಿ ಎಲ್ಲಾ ಹಬ್ಬ ಹರಿದಿನ, ಜಾತ್ರೆ, ಉತ್ಸವಗಳನ್ನು ಸರ್ವ ಸಮುದಾಯದವರು ಸಹೋದರ, ಸಹೋದರಿಯರು  ಒಂದಾಗಿ ಅಚ್ಚುಕಟ್ಟಾಗಿ ಆಚರಿಸುವುದು ನಮ್ಮ ಗ್ರಾಮದ ವಿಷೇಶವಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸಪ್ಪ ದೊಡ್ಡಮನಿ, ಸುಭಾಷ್ ಈಡಿಗೇರ್, ಮಂಜುನಾಥ ಗಟ್ಟೆಪ್ಪನವರ್, ವಿರುಪಣ್ಣ ಮೂಲಿಮನಿ, ಡಾ.ಬಾಷಾಸಾಬ ಮಕಾಂದರ್ ಸೇರಿದಂತೆ ಮಹಿಳೆಯರು, ಭಕ್ತಾಧಿಗಳು, ಯುವಕರು ಉಪಸ್ಥಿತರಿದ್ದರು.