ಸಚಿವ ರಾಮಲಿಂಗಾರೆಡ್ಡಿ ಭೇಟಿ ಮಾಡಿದ ಎಸ್.ಆರ್.ಪಾಟೀಲ
ಹಾವೇರಿ 13: ರಾಜ್ಯದ ಹೆಮ್ಮೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಸಮರ್ಕ ಅನುಷ್ಠಾನ ಕುರಿತು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಎಆರ್. ಪಾಟೀಲ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರೊಂದಿಗೆ ಚರ್ಚಿಸಿದರು.ವಿಧಾನಸೌಧದ ಸಚಿವರ ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಎಸ್. ಆರ್. ಪಾಟೀಲರು, ಬೆಳಗಾವಿ ವಿಭಾಗಕ್ಕೆ ಹೆಚ್ಚಿನ ಬಸ್ಸುಗಳನ್ನು ಒದಗಿಸಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದರು.ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯದ ಕಾಂಗ್ರೆಸ್ ಸರಕಾರ ಹೆಚ್ಚಿನ ಬಸ್ಸುಗಳನ್ನು ಖರೀದಿಸಿ ಎಲ್ಲ ವಿಭಾಗಕ್ಕೆ ಪೂರೈಸಲಾಗಿದೆ. ಇನ್ನೂ ಹೆಚ್ಚಿನ ಬಸ್ಸುಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದರು.ಪಂಚಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಗೆ ಜನರು ಸಮರ್ಕವಾಗಿ ಸ್ಪಂದಿಸುತ್ತಿದ್ದು, ಸಾರಿಗೆ ಸಂಸ್ಥೆಗಳಿಗೆ ಆದಾಯವು ಹೆಚ್ಚಿದೆ. ಸರಕಾರವು ಶಕ್ತಿ ಯೋಜನೆಗೆ ಬಳಕೆಯಾದ ಅನುದಾನವನ್ನು ಸಾರಿಗೆ ಸಂಸ್ಥೆಗಳಿಗೆ ಬಿಡುಗಡೆ ಮಾಡಿದೆ ಎಂದು ಸಚಿವರು ಹೇಳಿದರು. ತಾವು ಕಳೆದ ತಿಂಗಳು ಹುಬ್ಬಳ್ಳಿಯ ವಾಯುವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಶಕ್ತಿ ಯೋಜನೆ ಮತ್ತು ಬೆಳಗಾವಿ ವಿಭಾಗಕ್ಕೆ ಬಸ್ಸುಗಳನ್ನು ಪೂರೈಸಲು ಮನವಿ ಸಲ್ಲಿಸಿರುವ ಕುರಿತು ಪಾಟೀಲ ಅವರು ಸಚಿವರ ಗಮನಕ್ಕೆ ತಂದರು.
ಎಸ್.ಆರ್.ಪಾಟೀಲರು ಬ್ಯಾಡಗಿ ಕ್ಷೇತ್ರದ ವಿವಿಧ ವಿಷಯಗಳ ಕುರಿತು ಶಿಕ್ಷಣ ಸಚಿವ ಮಧು ಬಂಗಾರ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್.ತಂಗಡಗಿ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಹಲವಾರು ಸಚಿವರನ್ನು ಭೇಟಿ ಮಾಡಿದರು.
ಕಾವೇರಿ ತಾಲ್ಲೂಕಿನ ನೆಗಳೂರ ಗ್ರಾಮದ ಪ್ರಾಥಮಿಕ ಸಹಕಾರ ಸಂಘದ ಆವರಣದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆವತಿಯಿಂದ ಜಲಾನಯನ ಯಾತ್ರೆ ಕಾರ್ಯಕ್ರಮಕ, ಮಾನ ಶ್ರೀ ರುದ್ರ್ಪ ಮಾನಪ್ಪ ಲಮಾಣಿ, ಹಾವೇರಿ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಉಪಸಭಾಧ್ಯಕ್ಷರು ಕರ್ನಾಟಕ ವಿಧಾನ ಸಭೆ. ಬೆಂಗಳೂರು ಇವರು ಚಾಲನೆ ನೀಡಿದರು.