ಎಸ್.ಬಿ.ಬಿ.ಎಂ.ಡಿ ಫಲಿತಾಂಶ
ಶಿಗ್ಗಾವಿ 03: ಪಟ್ಟಣದ ಶ್ರೀಮಂತ ಬಸವಂತರಾವ್ ಬುಳ್ಳಪ್ಪ ಮಾಮಲೆ ದೇಸಾಯಿ ಪದವಿ ಪೂರ್ವ ಕಾಲೇಜಿನ2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ 57.04ರಷ್ಟಾಗಿದೆ. ಉನ್ನತ ಶ್ರೇಣಿಯಲ್ಲಿ 15 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 38 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 25 ವಿದ್ಯಾರ್ಥಿಗಳು, ಮತ್ತು ತೃತೀಯ ಶ್ರೇಣಿಯಲ್ಲಿ 03 ವಿದ್ಯಾರ್ಥಿಗಳು ಪಾಸಾಗಿ ವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ. ಅಮೃತಾ ಯಲ್ನಾಯಕ 96.48 ಪ್ರಥಮ.ಅಮೃತಾ ನವಲಗುಂದ 95.2 ದ್ವಿತೀಯ.ವಿನಾಯಕ ಉಡುಪಿ 94.7 ತೃತೀಯ ಸ್ಥಾನ ಪಡೆದಿದ್ದಾರೆ.