ಶಹರ ಘಟಕ ಅಧ್ಯಕ್ಷರಾಗಿ ಸೋಮಣ್ಣ ಕುರಿ ನೇಮಕ

Somanna Kuri appointed as city unit president

ಶಹರ ಘಟಕ ಅಧ್ಯಕ್ಷರಾಗಿ ಸೋಮಣ್ಣ ಕುರಿ ನೇಮಕ 

ಶಿಗ್ಗಾವಿ 04  : ಶಾಸಕ ಯಾಸಿರಅಹ್ಮದಖಾನ್ ಪಠಾಣ ಇವರ ಸೂಚನೆ ಮೇರೆಗೆಜಿಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಆದೇಶದ ಮೇರೆಗೆ ಶಿಗ್ಗಾವಿ ತಾಲೂಕ ಬಂಕಾಪೂರ ಶಹರ ಘಟಕದ ನೂತನ ಅಧ್ಯಕ್ಷರಾಗಿ ಸೋಮಣ್ಣ ಸಣ್ಣಪ್ಪ ಕುರಿ ಸಾ. ಬಂಕಾಪೂರ ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ತಕ್ಷಣದಿಂದ ಪಕ್ಷದ ತತ್ವದ ಸಿದ್ದಾಂತ ಪಕ್ಷದ ಸಂಘಟನೆಯಲ್ಲಿ ನಿರಂತವಾಗಿ ಶ್ರಮಿಸಬೇಕು ಮತ್ತು ಪಕ್ಷದ ಸ್ಥಳಿಯ ಚುಣಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ.