ಲೋಕದರ್ಶನ ವರದಿ
ಮುಧೋಳ-ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿದರ್ೇಶಕರ ಕಾಯರ್ಾಲಯ, ಬಾಗಲಕೋಟ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ, ಮುಧೋಳ ಹಾಗೂ ಸ್ಯಾಮುವೆಲ್ ಶಿಕ್ಷಣ ಸಂಸ್ಥೆ ಮುಧೋಳ ಇವರುಗಳ ಸಹಯೋಗದಲ್ಲಿ 2018-19 ನೇ ಸಾಲಿನ ವಿಭಾಗ ಮಟ್ಟದ ಹಾಗೂ ರಾಜ್ಯ ಮಟ್ಟದ 14/17 ವಯೋಮಿತಿಯೊಳಗಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ / ಬಾಲಕಿಯರ ಹ್ಯಾಂಡ್ಬಾಲ್ ಪಂದ್ಯಾವಳಿಯನ್ನು ದಿ.13, 14 ಮತ್ತು 15 ನವ್ಹೆಂಬರ 2018 ರವರೆಗೆ ಮುಧೋಳ ನಗರದ ಕವಿ ಚಕ್ರವತರ್ಿ ರನ್ನ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಪಂದ್ಯಾವಳಿಯಲ್ಲಿ ರಾಜ್ಯದ 9 ಜಿಲ್ಲೆಗಳಿಂದ ತಂಡಗಳು ವಿಭಾಗ ಮಟ್ಟದಲ್ಲಿ ಆಡಲಿದ್ದು ಹಾಗೂ ರಾಜ್ಯದ ಬೆಳಗಾವಿ, ಕಲಬುಗರ್ಿ, ಬೆಂಗಳೂರು ಹಾಗೂ ಮೈಸೂರು ವಿಭಾಗ ಮಟ್ಟದಲ್ಲಿ ಆಯ್ಕೆಯಾದ ತಂಡಗಳು ರಾಜ್ಯಮಟದಲ್ಲಿ ಸೆಣೆಸಾಡಲಿವೆ. ಪಂದ್ಯಾವಳಿಗೆ ಆಗಮಿಸಲಿರುವ ಕ್ರೀಡಾ ಪಟುಗಳು, ದೈಹಿಕ ಶಿಕ್ಷಕರು, ನಿದರ್ೇಶಕರು, ಮಾರ್ಗದರ್ಶಕರು ಹಾಗೂ ಪಂದ್ಯಾವಳಿಗೆ ನಿಯೋಜಿಸಿರುವ ಎಲ್ಲ ಅಧಿಕಾರಿ ವರ್ಗದವರಿಗೂ ಊಟ, ಉಪಹಾರ, ವಸತಿ ಸೌಕರ್ಯವನ್ನು ನಗರದ ಸ್ಯಾಮುವೆಲ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಶಿಸ್ತುಬದ್ದವಾಗಿ ಸಿದ್ದತೆ ಮಾಡಿಕೊಂಡಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಮಾರ್ಗರೇಟ್ ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಸಚಿವ ಶಿವಾನಂದ ಪಾಟೀಲ ಉಧ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ಗೋವಿಂದ ಕಾರಜೋಳ ವಹಿಸುವರು. ಮುಖ್ಯ ಅತಿಥಿಯಾಗಿ ಮಾಜಿ ಸಿ.ಎಂ, ಸಿದ್ದರಾಮಯ್ಯ, ಜಿ.ಪಂ. ಅಧ್ಯಕ್ಷ ವೀಣಾ ಕಾಶಪ್ಪನವರ, ಸಂಸದ ಪಿ.ಸಿ. ಗದ್ದಿಗೌಡರ, ಸೇರಿದಂತೆ ಜಿಲ್ಲೆಯ ಶಾಸಕರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗ ವಹಿಸಲಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ತೇಗೂರ ಹಾಗೂ ಪ್ರಾ, ಮಹಾಂತೇಶ ವಡ್ಲಿ ತಿಳಿಸಿದ್ದಾರೆ.