ರಾಜ್ಯ ಮಟ್ಟದ 3 ದಿನಗಳ ಅಧ್ಯಯನ ಶಿಬಿರ
ಹಾವೇರಿ 12: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೋ.ಬಿ ಕೃಷ್ಣಪ್ಪ ಸ್ಥಾಪಿತ)ಯ ರಾಜ್ಯ ಸಮಿತಿ ವತಯಿಂದ ಮಾರ್ಚ-17,18 ಮತ್ತು 19 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನಿಬೆಸೆಂಟ್ ಪಾರ್ಕ-ದೊಡ್ಡ ಬಳ್ಳಾಪೂರ ತಾಲ್ಲೂಕಿನಲ್ಲಿ ರಾಜ್ಯ ಮಟ್ಟದ 3 ದಿನಗಳ ಅಧ್ಯಯನ ಶಿಬಿರವನ್ನು ಆಯೋಜನೆ ಮಾಡಲಾಗಿದೆ.ಡಿಎಸ್‌ಎಸ್,ದಲಿತ ಚಳುವಳಿಯ ಹಾದಿ,ಡಾ. ಬಿ.ಆರ್ ಅಂಬೇಡರ್ ಆಶಯಗಳ ಭಾರತ ಸಂವಿಧಾನ ಹಾಗೂ ಪ್ರೋ.ಬಿ ಕೃಷ್ಣಪ್ಪನವರ ತತ್ವ-ಸಿದ್ದಾಂತಗಳು,ಮುಂದಿನ ಹೋರಾಟಗಳ ಹಾದಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅಧ್ಯಯನ ಶಿಬಿರದಲ್ಲಿ ವಿಷಯ ಚರ್ಚೆ ಜರುಗಲಿದ್ದು,ಈ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ರಾಜ್ಯ ಸಮಿತಿಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್ ಅವರ ಅಧ್ಯಕ್ಷತೆವಹಿಸುವರು. ಎಲ್ಲಾ ಪದಾಧಿಕಾರಿಗಳು, ದಲಿತ ಚಳುವಳಿಯ ನೇತಾರರು, ಮುಖಂಡರು, ಗಣ್ಯರು ಆಗಮಿಸಲಿದ್ದು,ಈ ಅಧ್ಯಯನ ಶಿಬಿರಕ್ಕೆ ಜಿಲ್ಲೆಯ ದಲಿತ ಚಳುವಳಿಯ ಮುಖಂಡರು,ತಾಲ್ಲೂಕ ಸಂಚಾಲಕರು,ಗ್ರಾಮ ಸಂಚಾಲಕರು, ಮಹಿಳೆಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.