ರಾಜ್ಯ ಮಟ್ಟದ ಕುಸ್ತಿ: ಜಿಲ್ಲೆಗೆ 2 ಚಿನ್ನದ ಪದಕ

ಬಾಗಲಕೋಟೆ 30: ರಾಮನಗರ ಜಿಲ್ಲೆಯ ಕನಕಪುರದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕುಸ್ತಿ ಪಂದ್ಯಾವಳಿಯಲ್ಲಿ ಜಿಲ್ಲೆಯ ಕ್ರೀಡಾ ಶಾಲೆ ಮತ್ತು ನಿಲಯದ ಕುಸ್ತಿಪಟುಗಳು 2 ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

35 ಕೆಜಿ ದೇಹ ತೂಕದಲ್ಲಿ ಅಭಿಷೇಕ ಪವಾರ (ಪ್ರಥಮ), 38 ದೇಹತೂಕದಲ್ಲಿ ಆದರ್ಶ ತೋಟದಾರ (ಪ್ರಥಮ), 48 ದೇಹತೂಕದಲ್ಲಿ ಕಾತರ್ಿಕ ಪಡತಾರೆ, 55 ಕೆಜಿ ತೂಕದಲ್ಲಿ ಕೆಂಪನಗೌಡ ಕೆಂಪನ್ನವರ, 45 ಕೆಜಿ ತೂಕದಲ್ಲಿ ದರ್ಶನ ಅಡೇಕರ, 57 ಕೆಜಿ ತೂಕದಲ್ಲಿ ಆಕಾಶ ಪಟೇದ, 43 ಕೆಜಿ ತೂಕದಲ್ಲಿ ಕಾವೇರಿ ಯಡಹಳ್ಳಿ (ದ್ವಿತೀಯ) ಹಾಗೂ 44 ಕೆಜಿ ತೂಕದಲ್ಲಿ ಕಾತರ್ಿಕ ತಳವಾರ, 65 ಕೆಜಿ ತೂಕದಲ್ಲಿ ಜ್ಯೋತಿಬಾ ಜಾಂದ್ರೆ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. 

ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದ ಕುಸ್ತಿ ಕ್ರೀಡಾಪಟುಗಳಿಗೂ ಹಾಗೂ ಕುಸ್ತಿ ತರಬೇತುದಾರರಿಗೆ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕರು ಅಭಿನಂದನೆ ಸಲ್ಲಿಸಿದ್ದಾರೆ.