ಭಯೋತ್ಪಾದನೆ ಕೃತ್ಯಕ್ಕೆ ತೀವೃ ಖಂಡನೆ: ಗೌರವ ನಮನ ಸಲ್ಲಿಕೆ
ಕೊಪ್ಪಳ 26: ಜಮ್ಮು ಕಾಶ್ಮೀರದ ಪಹಲ್‌ಗಾಮ್ ನಲ್ಲಿ ನಡೆದ ಭಯೋತ್ಪಾದನೆಕೃತ್ಯತೀವ್ರಖಂಡನಾರ್ಹ ವಾಗಿದೆ, ಇದರಲ್ಲಿಜೀವ ಕಳೆದುಕೊಂಡ ಅಮಾಯಕಜನರಆತ್ಮಕ್ಕೆ ಶಾಂತಿದೊರೆಯಲೆಂದುಆಗಲಿದ ಆತ್ಮಗಳಿಗೆ ಗೌರವ ನಮನ ಸಲ್ಲಿಸಿ ಅವರಕುಟುಂಬ ವರ್ಗಕ್ಕೆದುಃಖ ಭರಿಸುವ ಶಕ್ತಿ ದಯಪಾಲಿಸಲೆಂದು ಪರಮಾತ್ಮನಲ್ಲಿ ಪ್ರಾರ್ಥಿಸಿ ಕೊಪ್ಪಳ ನಗರದಲ್ಲಿ ಶುಕ್ರವಾರ ಸಂಜೆ ಕೊಪ್ಪಳ ಇನ್ನರ್ ವೀಲ್‌ಕ್ಲಬ್ ಪದಾಧಿಕಾರಿಗಳು ಮೇಣಬತ್ತಿ ಹಚ್ಚಿ ಶ್ರದ್ಧಾಂಜಲಿ ಅರೆ್ಣ ಮಾಡಿದರು.ಕೂಡಲೆ ಭಯೋತ್ಪಾದನೆಕೃತ್ಯ ವ್ಯಸಗಿದ ಭಯೋತ್ಪಾದಕರನ್ನು ಹಿಡಿದುಗಲ್ಲಿಗೇರಿಸಬೇಕುಇಂಥಕೃತ್ಯ ವನ್ನು ಮೊಟ್ಟ ಹಾಕಬೇಕೆಂದರು.
ಬೇರು ಸಮೇತ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ನಮ್ಮಕೇಂದ್ರ ಸರ್ಕಾರದ ಗೃಹ ಇಲಾಖೆ ಕಠಿಣಕ್ರಮಜರುಗಿಸಬೇಕುಎಂದು ಉಮಾ ಮಹೇಶ್ ತಂಬ್ರಳ್ಳಿ ಸರಕಾರಕ್ಕೆ ಒತ್ತಾಯಿಸಿದರು. ಭಯೋತ್ಪಾದಕ ದಾಳಿಯಲ್ಲಿ ಕಳೆದು ಹೋದ ಮುಗ್ಧ ಜೀವಗಳನ್ನು ಗೌರವಿಸಿ ನಮನ ಸಲ್ಲಿಸಿ ಶಾಂತಿಕೋರಲಾಯಿತು ಮತ್ತುಎಲ್ಲರೂಒಟ್ಟುಗೂಡಿ ಮೇಣದಬತ್ತಿಗಳನ್ನು ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉಮಾ ಮಹೇಶ್ ತಂಬ್ರಳ್ಳಿ, ಖಜಾಂಚಿ ಆಶಾ ಕಾವಲೂರು, ಐಎಸ್‌ಒ ಮಧು ನಿಲೋಗಲ್ ಮಾಜಿ ಅಧ್ಯಕ್ಷರುಗಳಾದ ಪ್ರತಿಮಾ ಪಟ್ಟಣಶೆಟ್ಟಿ, ಶರಣಮ್ಮ ಪಾಟೀಲ್, ನಿತಾ ತಂಬ್ರಳ್ಳಿ ,ಸುಜಾತಾ ಪಟ್ಟಣಶೆಟ್ಟಿ, ಸದಸ್ಯರಾದ ಸುಜಾತ ಹಲಗೇರಿ ,ಪರಿಮಳ ,ಸುಮಂಗಳ ಎಚ್ , ಹೇಮಾ ಬಳ್ಳಾರಿ, ತ್ರಿವೇಣಿ, ಶೋಭಾ ಹಮ್ಮಿಗಿ, ಕವಿತಾ ಶೆಟ್ಟರ್, ಅನುಷಾ, ನಾಗರತ್ನ, ಪದ್ಮ ವೀರೇಶ್, ನಿರ್ಮಲಾ ಮಲಾಡ್ ಸೇರಿದಂತೆ ಕ್ಲಬ್ಬಿನ ಪದಾಧಿಕಾರಿಗಳು ಸದಸ್ಯರು ಮಹಿಳೆಯರು ಮೌನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.