ಭಾರತ ವಿಕಾಸ ಪರಿಷತ್‌ನಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಬೆಳಗಾವಿ 17: ಭಾರತ ವಿಕಾಸ ಪರಿಷತ್ ವತಿಯಿಂದ ಜಿಜಿಸಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಅಭೂತಪೂರ್ವ ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೃಷ್ಣಾನಂದ ಕಾಮತ್ ಮತ್ತು ರಾಷ್ಟ್ರ ಸೇವಿಕಾ ಸಮಿತಿಯ ವಿದ್ಯಾ ಜೋಶಿ ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದ ಹಾಗೂ ಭಾರತಮಾತೆಯ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿ ಪೂಜೆ ಸಲ್ಲಿಸಲಾಯಿತು. ಗಣ್ಯರಿಂದ ದೀಪ ಬೆಳಗಿಸಲಾಯಿತು. ನಂತರ ಸಾಮೂಹಿಕ ಸಂಪೂರ್ಣ ವಂದೇ ಮಾತರಂ ನಡೆಯಿತು. ಅಧ್ಯಕ್ಷ ವಿನಾಯಕ ಮೋರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪಾಂಡುರಂಗ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಅತಿಥಿಗಳನ್ನು ಅಧ್ಯಕ್ಷ ವಿನಾಯಕ ಮೋರೆ ಸನ್ಮಾನಿಸಿದರು. ಪ್ರಾಂತೀಯ ಅಧ್ಯಕ್ಷೆ ಸ್ವಾತಿ ಘೋಡೇಕರ್ ಭಾರತ ವಿಕಾಸ ಪರಿಷತ್ ಕುರಿತು ಮಾಹಿತಿ ನೀಡಿದರು.
ಅತಿಥಿ ಕೃಷ್ಣಾನಂದ ಕಾಮತ ಸ್ವಾಮಿ ವಿವೇಕಾನಂದ ಮತ್ತು ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೆಲಸ, ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು. ವಿದ್ಯಾ ಜೋಶಿ ಅವರು ವಿವಿಧ ದೈಹಿಕ ಮತ್ತು ಬೌದ್ಧಿಕ ಆಟಗಳನ್ನು ಕೈಗೆತ್ತಿಕೊಂಡರು. ಕಾರ್ಯಕ್ರಮವನ್ನು ಸುಖದ ದೇಶಪಾಂಡೆ ನಿರ್ವಹಿಸಿದರು. ಕಾರ್ಯದರ್ಶಿ ಕೆ. ವಿ. ಪ್ರಭೂ ವಂದಿಸಿದರು.
ಪ್ರಾಚಾರ್ಯ ವಿ. ಎನ್. ಜೋಶಿ, ಎನ್. ಬಿ. ದೇಶಪಾಂಡೆ, ವಿನಾಯಕ ಘೋಡೇಕರ್, ಸುಭಾಷ ಮಿರಾಶಿ, ಕುಮಾರ ಪಾಟೀಲ್, ರಾಮಚಂದ್ರ ತಿಗಡಿ, ಜಯಂತ್ ಜೋಶಿ, ಗಣಪತಿ ಭುಜಗುರಾವ್, ಪಿ. ಎಂ. ಪಾಟೀಲ, ಕಾ. ಪ್ರಾಣೇಶ ಕುಲಕರ್ಣಿ, ಪಿ. ಜೆ. ಘಾಡಿ, ಕಿಶೋರ ಕಾಕಡೆ, ಮಧುಕರ ಸಾಮಂತ್, ಸುಧನ್ವ ಪೂಜಾರ್, ಜಯಾ ಜೋಶಿ, ವಿದ್ಯಾ ಇಟಿ, ಶುಭಾಂಗಿ ಮಿರಾಶಿ, ಯೋಗಿತಾ ಹಿರೇಮಠ, ಪ್ರಿಯಾ ಪಾಟೀಲ್, ಪೂಜಾ ಪಾಟೀಲ್, ಉಷಾ ದೇಶಪಾಂಡೆ, ಲಕ್ಷ್ಮೀ ತಿಗಡಿ, ಜ್ಯೋತಿ ಪ್ರಭು, ಅಕ್ಷತಾ ಮೋರೆ, ಜ್ಯೋತ್ಸ್ನಾ, ಶಾಲಿನಿ ನಾಯಕ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.