ಲೋಕದರ್ಶನ ವರದಿ
ಮುಧೋಳ 13: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಜಯಂತ್ಯೋತ್ಸವ ಸಮಾರಂಭದಲ್ಲಿ ನಗರದ ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದೇಶಭಕ್ತ ಯುವಕರು,ನಾಗರಿಕರು ಭಾಗವಹಿಸಿದ್ದರು.
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಗರದ ಸಕರ್ಾರಿ ಆಸ್ಪತ್ರೆಗೆ ತೆರಳಿ ಬಡರೋಗಿಗಳಿಗೆ ಹಣ್ಣು-ಹಂಪಲ ವಿತರಿಸಲಾಯಿತು. ಈ ಸಂದರ್ಭದಲ್ಲಿ ದಯಾನಂದ ವಸ್ತ್ರದ, ಸದಾಶಿವ ಮಜ್ಜಗಿ, ಕೃಷ್ಣಾ ಸುಲಾಕೆ, ಶಮಕರ ಕಮತಗಿ, ಮಂಜು ಮುಂಡಗನೂರ, ಸಂತೋಷಸಿಂಗ್ ಹಜೇರಿ, ಪರಶುರಾಮ ನಿಗಡೆ, ಆನಂದ ಬನ್ನೂರ,ದತ್ತಾ ಮಾನೆ, ಚೇತನ ಉಳ್ಳಾಗಡ್ಡಿ, ಶಿವು ಹುಂಡೇಕಾರ, ಅಕ್ಷಯ ಘೋಪ್ಡೆ, ಮುರುಗೇಶ ಇಟ್ಟಂಗಿ, ನಾರಾಯಣ ಮಾನೆ ಮುಂತಾದವರು ಉಪಸ್ಥಿತರಿದ್ದರು.