ಮರಳಿನಲ್ಲಿ ಅರಳಿದ ಸ್ವಾಮಿ ವಿವೇಕಾನಂದರು

ಧಾರವಾಡ 13: ಸ್ವಾಮಿ ವಿವೇಕಾನಂದರ 157ನೇ ಜಯಂತಿಯನ್ನು ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಬೇಂದ್ರೆ ನಗರ ಕ್ರಾಸ್ ನಲ್ಲಿ ಜನಜಾಗೃತಿ ಸಂಘದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಭಾನುವಾರ ಬೆಳಗ್ಗೆ ಕಲಾವಿದ ಮಂಜುನಾಥ ಹಿರೇಮಠ ಅವರು ಸ್ವಾಮಿ ವಿವೇಕಾನಂದರ ಕಲಾಕೃತಿಯನ್ನು ಮರಳಿನಲ್ಲಿ ಅರಳಿಸಿದರು.  ಬೆಳಗ್ಗೆ 5-.30ರಿಂದ 9ಗಂಟೆಯವರೆಗೆ ಸತತ ನಾಲ್ಕು ಗಂಟೆಗಳಲ್ಲಿ ತಮ್ಮ ಕೈ ಚಳಕ ತೋರುವಲ್ಲಿ ಯಶಸ್ವಿಯಾದರು. ಮರಳಿನಲ್ಲಿ ಅರಳಿದ ಒಂಬತ್ತನೇ ಕಲಾಕೃತಿ ಇದಾಗಿದ್ದು, 

ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿಗಳು ಕಲಾಕೃತಿಯನ್ನು ವೀಕ್ಷಿಸಿ, ಭಕ್ತಿಯಿಂದ ನಮಿಸಿ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಎಂದಿಗೂ ಅಮರರಾಗಿರುತ್ತಾರೆ. ಒಬ್ಬ ವೀರಸನ್ಯಾಸಿ ಹೇಗೆ ಬದುಕಬೇಕು, ಇತರರಿಗೆ ಯಾವ ರೀತಿ ಸ್ಪೂರ್ತಿ  ತುಂಬಬೇಕು ಎಂಬುದನ್ನು ಬದುಕಿ ತೋರಿಸಿದ ಧೀಮಂತ ವ್ಯಕ್ತಿಯಾಗಿದ್ದರು. ಇಂದಿನ ಯುವ ಪೀಳಿಗೆ ಅವರ ಬದುಕನ್ನು ಅರ್ಥೈ ಸಿಕೊಂಡು ಬಾಳು ಸಾಗಿಸಬೇಕಿದೆ ಎಂದರು. 

ಸಂಘದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಈರಣ್ಣ ಅಗಳಗಟ್ಟಿ, ಬಸವಣ್ಣೆಪ್ಪ ಕಮತಿ, ಸುಮಾ ಕೊರವರ, ರೇಷ್ಮಾ, ಸುರೇಶ ಪವಾರ, ಆನಂದ ಪಾಟೀಲ, ಸಚಿನ್ ತಡವಾಡಕರ್, ಮಲ್ಲೇಶ ಅಂಬಿಗೇರ, ವೀರಣ್ಣ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.