ಅಮ್ಮಿನಬಾವಿ ಗ್ರಾಮದ ಶಾಂತೇಶ್ವರ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸ್ವಾತಿ ಟಾಪ
ದಾರವಾಡ 03 : ಶುಕ್ರವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ-1 ರ ಫಲಿತಾಂಶದಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಶಾಂತೇಶ್ವರ ಪ್ರೌಢ ಶಾಲೆಯ ಸ್ವಾತಿ ಹಾರೋಬೆಳವಡಿ ಶೇ. 93.44 (584/625) ಅಂಕ ಸಂಪಾದಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಒಟ್ಟು 10 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಅಧಿಕ ಅಂಕ ಸಂಪಾದಿಸಿ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಇತರೇ ವಿದ್ಯಾರ್ಥಿಗಳ ವಿವರ ಹೀಗಿದೆ. ರಕ್ಷಿತಾ ಚವ್ಹಾಣ (ಶೇ.92.80), ಶಿಲ್ಪಾ ಹೊಂಬಳ (ಶೇ. 92.48), ರಕ್ಷಿತಾ ಧನಶೆಟ್ಟಿ (ಶೇ.92.48), ಅನಿತಾ ಬೆಳದಡಿ (ಶೇ.92), ನಿಖಿತಾ ಶಿಂಧೆ (ಶೇ.91.34), ಗಂಗಾಧರ ಬಂಡಿವಾಡ (ಶೇ.90.88), ಅಂಜಲಿ ತಳವಾರ (ಶೇ.90.72), ಗೂಳಪ್ಪ ಕಡ್ಲೆಪ್ಪನವರ (ಶೇ.90.40) ಹಾಗೂ ಪ್ರೀತಿ ಹುಲಗೂರ (ಶೇ.90.24). ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 175 ವಿದ್ಯಾರ್ಥಿಗಳಲ್ಲಿ 143 ವಿದ್ಯಾರ್ಥೀಗಳು ಉತ್ತೀರ್ಣರಾಗಿದ್ದು, ಶಾಲೆಯ ಒಟ್ಟು ಶೇಕಡಾ ಫಲಿತಾಂಶ 81.71ಆಗಿದೆ. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಶಾಲೆಯ ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು ಹಾಗೂ ಮುಖ್ಯಾಧ್ಯಾಪಕರು ಅಧಿಕ ಅಂಕ ಸಂಪಾದಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.