ಶಿಕ್ಷಕರ ಗೌರವಿಸುವ ಪರಂಪರೆ ಘನವಾದುದು: ಖಾಜಿ

ಧಾರವಾಡ, 07: ಶಿಕ್ಷಕರ ದಿನೋತ್ಸವ ಹಾಗೂ ಇತರೇ ಸಂದರ್ಭಗಳಲ್ಲಿ ಸೃಜನಶೀಲ ಶ್ರೇಷ್ಠ ಶಿಕ್ಷಕರ ಸೇವೆಯನ್ನು ಗುರುತಿಸಿ ಗೌರವಿಸುವ ಪರಂಪರೆ ಘನವಾದುದು ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿದರ್ೆಶಕ ಅಬ್ದುಲ್ ವಾಜೀದ್ ಖಾಜಿ ಹೇಳಿದರು.

ಅವರು ಇಲ್ಲಿಯ  ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 58ನೆಯ ಶಿಕ್ಷಕರ ದಿನೋತ್ಸವ ಸಮಾರಂಭದಲ್ಲಿ ತರಬೇತಿ ಪಡೆಯಲು ಆಗಮಿಸಿದ್ದ ಎಲ್ಲ 125 ಶಿಕ್ಷಕ-ಶಿಕ್ಷಕಿಯರಿಗೂ ತಮ್ಮ ಸ್ವಂತ ಖಚರ್ಿನಿಂದ ತರಿಸಿದ್ದ ಸೇಬುಹಣ್ಣು ಹಾಗೂ ಗುಲಾಬಿ ಹೂಗಳ ಫಲ-ಪುಷ್ಪ ಗೌರವ ನೀಡಿ ಗುರುನಮನ ಸಲ್ಲಿಸಿ ಮಾತನಾಡುತ್ತಿದ್ದರು.

ತರಗತಿಗಳಲ್ಲಿ ಸತತ ಪರಿಶ್ರಮದ ಬೋಧನೆಯ ಮೂಲಕ ವಿದ್ಯಾಥರ್ಿಗಳಲ್ಲಿ ಜ್ಞಾನದ ಬೆಳಕನ್ನು ತುಂಬುವ ಗುರುತರ ಕೆಲಸವನ್ನು ನಿರ್ವಹಿಸುವ ಶಿಕ್ಷಕ ಸಂಕುಲವನ್ನು ಸರಕಾರ, ಸಮಾಜ ಹಾಗೂ ಇತರೇ ವಲಯಗಳಿಂದ ಗೌರವಿಸುವ ಘನ ಪರಂಪರೆ ನಿರಂತರವಾಗಿ ನಡೆಯಬೇಕು ಎಂದರು.

ಡಯಟ್ ಹಿರಿಯ ಉಪನ್ಯಾಸಕ ಡಾ. ಗುರುನಾಥ ಹೂಗಾರ ಮಾತನಾಡಿ, ಹೃದಯವಂತ ಭಾರತೀಯರ ಸಂಖ್ಯೆಯನ್ನು ಅಧಿಕಗೊಳಿಸುವ ಕೆಲಸವನ್ನು ಶಿಕ್ಷಕರೆಲ್ಲರೂ ಆಸಕ್ತಿಯಿಂದ ಮಾಡಬೇಕಿದೆ. ತನ್ನ ತರಗತಿಯ ವಿದ್ಯಾಥರ್ಿಗಳತ್ತ ಕೇಂದ್ರೀಕರಣಗೊಳ್ಳುವ ಶಿಕ್ಷಕರ ಒಂದು ಭರವಸೆಯ ನೋಟದಿಂದಲೇ ಅನಂತ ಬದಲಾವಣೆಗಳನ್ನು ತರಬಹುದಾಗಿದೆ ಎಂದರು.

ಜೆ.ಜಿ.ಸೈಯ್ಯದ್, ಎಂ.ಕೆ.ಮರಿಗೌಡರ, ಜಯಶ್ರೀ ಕಾರೇಕರ, ಡಾ. ಜಿ.ವೈ.ಹೂಗಾರ, ವೈ.ಬಿ.ಬಾದವಾಡಗಿ ಡಯಟ್ ವಿವಿಧ ವಿಭಾಗಗಳ ಉಪನ್ಯಾಸಕರು, ಅಧೀಕ್ಷಕರುಗಳಾದ ಕುಂದಾ ಶೇಟಿಯಾ ಹಾಗೂ ರಮೇಶ ದಂಡಿಗೆದಾಸರ, ಲಿಪಿಕ ನೌಕರರು ಮತ್ತು ಇತರೇ ಸಿಬ್ಬಂದಿ ಇದ್ದರು. ಉಪನ್ಯಾಸಕಿ ಡಾ.ರೇಣುಕಾ ಅಮಲಝರಿ ಸ್ವಾಗತಿಸಿದರು. 'ಜೀವನ ಶಿಕ್ಷಣ' ಮಾಸಪತ್ರಿಕೆ ಸಂಪಾದಕ ಗುರುಮೂತರ್ಿ ಯರಗಂಬಳಿಮಠ ನಿರೂಪಿಸಿದರು. ಉಪನ್ಯಾಸಕ ಎಚ್.ಎಚ್. ಮೇಟಿ ವಂದಿಸಿದರು.