ಪ್ರಾದೇಶಿಕ ಆಯುಕ್ತರು ಬೆಳಗಾವಿಯ ವಿಭಾಗೀಯ ನ್ಯಾಯಾಲಯದಿಂದ ಕಳಂಕಿತ ಮೂವರ ನಗರಸಭಾ ಸದಸ್ಯತ್ವ ರದ್ದು : ರಾಘವೇಂದ್ರ ಪಾಲನಕರ ಸ್ವಾಗತ
ಗದಗ 16 : ಸನ್ 2023 ರ ಅಕ್ಟೋಬರ್ 25 ರಿಂದ 2024 ರ ಜುಲೈ 22 ರ ನಡುವಿನ ಅವಧಿಯಲ್ಲಿ ಗದಗ-ಬೆಟಗೇರಿ ಮಾಲೀಕತ್ವದ ಸಾವಿರಾರು ಕೋಟಿ ರೂ. ಮೌಲ್ಯದ 54 ವಕಾರಸಾಲುಗಳನ್ನು ಕಾನೂನು ಬಾಹಿರವಾಗಿ ದೀರ್ಘಾವಧಿಗೆ ಒಪ್ಪಂದ ಮಾಡಿಕೊಂಡು ಸುಳ್ಳು ಠರಾವು ಸೃಷ್ಟಿಸಿದ ಆರೋಪದಡಿ ನಗರಸಭೆ ಮಾಜಿ ಪ್ರಭಾರ ಪೌರಾಯಕ್ತ ಪ್ರಶಾಂತ ವರಗಪ್ಪನವರ ಅವರು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ 2024 ರ ಆ. 15 ರಂದು ದೂರು ದಾಖಲಿಸಿದ್ದರು. 2024 ರ ಫೆಬ್ರವರಿ 9 ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸಾಗಿದೆ ಎಂದು ನಕಲಿ ಠರಾವು ಸೃಷ್ಟಿಸಿ 2024 ರ ಜುಲೈ 22 ರಂದು ವಕಾರಸಾಲಿನ ಎಲ್ಲ ಅನುಭೋಗದಾರರಿಗೆ ಕಬ್ಜಾ ನೀಡಲಾಗಿದೆ ಎಂದು ನಕಲಿ ಪತ್ರವನ್ನು ಸೃಷ್ಟಿಸಿ ಎರಡೂ ದಾಖಲೆಗಳಿಗೆ ಪಿರ್ಯಾದಿದಾರರ ನಕಲಿ ಸಹಿಯನ್ನು ಮಾಡಿ ಗದಗ-ಬೆಟಗೇರಿ ನಗರಸಭೆಗೆ ಹಾಗೂ ಸರಕಾರಕ್ಕೆ ಮೋಸ ಮಾಡಿದ ಆರೋಪದಡಿ ದೂರು ದಾಖಲಾಗಿತ್ತು. ಈಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಇಂತಹದೊಂದು ಘಟನೆಯು ರಾಜ್ಯಾದ್ಯೇಠ ಸಂಚಲನ ಸೃಷ್ಟಿಸಿದ್ದು ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ಮಾಲೀಕತ್ವವುಳ್ಳ ಆಸ್ತಿಗಳಾದ ವಕಾರಸಾಲುಗಳ ಅಕ್ರಮ ಲೀಜ್ ಪ್ರಕರಣಕ್ಕೆ ಸಂಭಂಧಿಸಿದಂತೆ ನಗರಸಭೆಯ ಮಾಜಿ ಅಧ್ಯಕ್ಷೆ, ಹಾಗೂ ಇಬ್ಬರು ಸದಸ್ಯರು ಸೇರಿ 8 ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಇಂದು ಸಲ್ಲಿಸಲಾಗಿರುತ್ತದೆ. ಗದಗ ಶಹರದ ಅಕ್ಷಯ ಕಾಲೋನಿ ನಿವಾಸಿ ವಿರುಪಾಕ್ಷಪ್ಪ(ರಾಜು) ಗಂಗಾಧರ್ಪ ಮಾನ್ವಿ, ರೀಯಲ್ ಎಸ್ಟೇಟ್ ಉದ್ಯಮಿ ಪಂಕಜ್ ರೂಪಚಂದ್ ಬಾಫಣಾ, ಶಿದ್ದಪ್ಪ ಮಲ್ಲಪ್ಪ ಮಾರನಬಸರಿ, ವೀರೇಶ ಷಣ್ಮುಖಪ್ಪ ಕುಂದಗೋಳ, ಮಹೇಶ ವೆಂಕಟೇಶ ದಾಸರ, ಉಷಾ ಮಹೇಶ ದಾಸರ, ಅನಿಲ(ಶಿದ್ದಲಿಂಗಪ್ಪ) ಮಲ್ಲಪ್ಪ ಅಬ್ಬಿಗೇರಿ, ಗೂಳಪ್ಪ ಶಿವಪ್ಪ ಮುಶೀಗೇರಿ ಈ ಎಂಟೂ ಜನರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಅಧಿಕಾರ ಗದ್ದುಗೆಗಾಗಿ ಬೀದಿಗಿಳಿದು ಪ್ರತಿಭಟನೆಯ ಹೋರಾಟ ಗೈದ ಕಳಂಕಿತ ಜನ ಪ್ರತಿನಿಧಿಗಳು : ಇದರ ನಡುವೆಯೂ ಗದಗ ಬೆಟಗೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವಿಳಂಬ ಖಂಡಿಸಿ ನಗರಸಭೆಯ ಬಿಜೆಪಿ ಸದಸ್ಯರು ಗದಗ ಶಹರದ ಉಪವಿಭಾಗಾಧೀಕಾರಿಗಳ ಕಚೇರಿಯ ಎದುರಿಗೆ ಪ್ರತಿಭಟನೆ ನಡೆಸಿದ್ದರು. ನಂತರ ಏಕಾಏಕಿ ಪಾಲಾ ಬಾದಾಮಿ ರಸ್ತೆಗಿಳಿದು ರಸ್ತೆಯ ಒಂದು ಭಾಗ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಜಿಲ್ಲಾಧಿಕಾರಿಗಳು ಡಿಸಿ ಬರುವಂತೆ ಪಟ್ಟು ಹಿಡಿದಿದ್ದರು. ಕಾನೂನು ಸಚಿವರ ತವರಲ್ಲೇ ಕಾನೂನು ಉಲ್ಲಂಘನೆಯಾಗಿದೆ. ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆಲ್ಲಾ ಪೂರ್ಣವಿರಾಮ ವೆಂಬಂತೆ ಇದೇ ದಿನಾಂಕ 13/02/2025 ರಂದು ಫೋರ್ಜರಿ ಆರೋಪದಡಿಯಲ್ಲಿ ಗದಗಹಿಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು ಗದಗ ಬೆಟಗೇರಿ ನಗರಸಭೆಗೆ ಸೇರಿರುವ 54 ವಕಾರಸಾಲು ಆಸ್ತಿಯನ್ನು ಅಕ್ರಮವಾಗಿ ಗುತ್ತಿಗೆ ನೀಡಲು ನಕಲಿ ಠರಾವು ಸೃಷ್ಟಿಸಿ ಅದಕ್ಕೆ ಪೌರಾಯುಕ್ತರ ಸಹಿಯನ್ನೂ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಗದಗ ಬೆಟಗೇರಿ ನಗರಸಭೆಗೆ ಮೊದಲ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದ ಉಷಾ ದಾಸರ, ಸದಸ್ಯರಾದ ಅನಿಲ್ ಎಂ. ಅಬ್ಬಿಗೇರಿ ಹಾಗೂ ಗುಳ್ಳಪ್ಪ ಎಸ್. ಮುಶಿಗೇರಿ ಸದಸ್ಯತ್ವದಿಂದ ಅನರ್ಹರಾದವರು. ಗದಗ ಬೆಟಗೇರಿ ನಗರಸಭೆಗೆ ಸೇರಿದ ಸಾವಿರಾರು ಕೋಟಿ ಮೌಲ್ಯದ 54 ವಕಾರಸಾಲು ಆಸ್ತಿಯನ್ನು ಐದು ವರ್ಷಗಳ ಗುತ್ತಿಗೆ ನೀಡಲು ಈ ಮೂವರು ಆರೋಪಿಗಳು ನಕಲಿ ಠರಾವು ಸೃಷ್ಟಿಸಿದ್ದರು. ಅಲ್ಲದೇ ನಕಲಿ ಠರಾವಿಗೆ ಪೌರಾಯುಕ್ತರ ಸಹಿಯನ್ನೂ ಹಾಕಿದ್ದರು. ಈ ಸಂಬಂಧ ಅಂದಿನ ಪ್ರಭಾರ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ತನಿಖೆ ನಡೆಸಿ, ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ನಗರಸಭೆಯ ಚುನಾಯಿತ ಜನ ಪ್ರತಿನಿಧಿಗಳು ನಕಲಿ ಠರಾವು ಸೃಷ್ಟಿಸಿ, ದಾಖಲೆಗಳಲ್ಲಿ ಸಹಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಕಾರಣ ಚುನಾಯಿತ ಜನಪ್ರತಿನಿಧಿಗಳ ಮೇಲೆ ಕ್ರಮವಹಿಸುವಂತೆ ಗದಗ ಜಿಲ್ಲಾಧಿಕಾರಿ ಮತ್ತು ಪೌರಾಯುಕ್ತರು ಜ.24ರಂದು ಪ್ರಾದೇಶಿಕ ಆಯುಕ್ತರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ಅವರು ಈ ಮೂವರು ಆರೋಪಿಗಳನ್ನು ಇದೇ ಫೆ.13ರಂದು ಬೆಳಗಾವಿಗೆ ಕರೆಯಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿಗಳು ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದ್ದರು. ಆದರೆ, ಯಾವ ದಾಖಲೆ ಸಲ್ಲಿಸುತ್ತೇವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿಲ್ಲ. ವಿಚಾರಣೆ ವೇಳೆ ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿರುವುದನ್ನು ಒಪ್ಪಿಕೊಂಡಿದ್ದರು. ಆಪಾದನೆಯನ್ನು ಹೊತ್ತ ಮೂವರು ನಗರಸಭಾ ಸದಸ್ಯರು ತಮ್ಮ ಕರ್ತವ್ಯಗಳ ನಿರ್ವಹಣೆಯಲ್ಲಿ ದುರ್ವತನೆ ಹಾಗೂ ಅಪಮಾನಕರ ರೀತಿಯಲ್ಲಿ ವರ್ತಿಸಿರುವುದು ಸಾಬೀತಾಗಿರುವುದರಿಂದ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 41 (1) ಮತ್ತು (2)ರಂತೆ ಅವರ ಸದಸ್ಯತ್ವ ಅನರ್ಹಗೊಳಿಸುವಂತೆ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಒಟ್ಟಿನಲ್ಲಿ ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ಆಡಳಿತದಲ್ಲಿ ಹಿಂದೆಂದೂ ಕಂಡರಿಯದ ಬ್ರಹತ್ ಬ್ರಹ್ಮಾಠ ಹಗರಣದ ಆಪಾದನೆಯ ಗದಗ ಬೆಟಗೇರಿ ನಗರಸಭೆಯ ವಕಾರಸಾಲುಗಳ ಅಕ್ರಮ ಲೀಜ್ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ನಡುವೆಯೂ ಅಧಿಕಾರ ಗದ್ದುಗೆಗಾಗಿ ಹಗರಣದ ಆರೋಪವನ್ನು ಹೊತ್ತಿರುವಂತಹ ಜನಪ್ರತಿನಿಧೀಗಳೇ ಮತ್ತೇ ಅಧಿಕಾರ ಗದ್ದುಗೆಯನ್ನಲಂಕರಿಸಲು ಹವಣಿಸುತ್ತಲಿರುವದಕ್ಕೆ ಕೊನೆಎಂಬಂತೆ .ಪ್ರಾದೇಶಿಕ ಆಯುಕ್ತರು ಬೆಳಗಾವಿಯ ವಿಭಾಗೀಯ ನ್ಯಾಯಾಲಯದಿಂದ ಕಳಂಕಿತ ಮೂವರ ನಗರಸಭಾ ಸದಸ್ಯತ್ವ ರದ್ದುಗೊಳಿಸಿರುವದು ಗದಗ ಬೆಟಗೇರಿ ಅವಳಿ ನಗರದ ನಾಗರಿಕರ ಹಿತದೃಷ್ಟಿಯಿಂದ ಸ್ವಾಗತಾರ್ಹ*ವಾಗಿದೆ ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಸಂತಸವನ್ನು ವ್ಯಕ್ತಪಡಿಸಿರುತ್ತಾರೆ.