ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನ ಭಯೋತ್ಪಾದಕ ದಾಳಿ ಆಘಾತಕಾರಿ : ನರಹರಿ ಕಟ್ಟಿ
ಶಿಗ್ಗಾವಿ 23 : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನ ಬೈಸರಾನ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿ ಭಾರತದೆಲ್ಲೆಡೆ ಆಘಾತ ಉಂಟುಮಾಡಿದ್ದು ಈ ಕ್ರೂರ ಹಲ್ಲೆಯಲ್ಲಿ 28ಕ್ಕೂ ಹೆಚ್ಚು ನಿರಪರಾದಿ ಪ್ರವಾಸಿಗರು ತಮ್ಮ ಜೀವ ತ್ಯಜಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಭಾಜಪ ಯುವ ಮುಖಂಡ ನರಹರಿ ಕಟ್ಟಿ ಹೇಳಿದರು. ವರದಿಗಾರರೊಂದಿಗೆ ಮಾತನಾಡಿದ ಅವರು ಭಯೋತ್ಪಾದಕರು ಸೈನಿಕರ ವೇಷದಲ್ಲಿ ಬಂದು ನಿರ್ದೋಷ ಸಾರ್ವಜನಿಕರ ಮೇಲೆ ನಡೆಸಿದ ಈ ದಾಳಿ ಮಾನವೀಯತೆಯ ವಿರುದ್ಧದ ಕ್ರೂರ ಕೃತ್ಯವಾಗಿದೆ. ಈ ರೀತಿಯ ದಾಳಿಗಳು ರಾಷ್ಟ್ರೀಯ ಏಕತೆಯನ್ನು ಗೆಲಿಸಬಲ್ಲದು ಎಂಬ ಭ್ರಮೆಯಲ್ಲಿರುವ ಭಯೋತ್ಪಾದಕರನ್ನು ರಾಷ್ಟ್ರ ಬಲವಾಗಿ ಪ್ರತಿರೋಧಿಸಲಿದೆ ಅಲ್ಲದೇ ಈ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಮತ್ತು ಗಾಯಗೊಂಡಿರುವವರ ಗುಣಮುಖತೆಗೆ ಹಾರೈಸುತ್ತೇವೆ. ಅವರ ಕುಟುಂಬಗಳೊಂದಿಗೆ ನಾವು ಈ ಸಂಕಷ್ಟದ ಹೊತ್ತಿನಲ್ಲಿ ಕೈಜೋಡಿಸುತ್ತೇವೆ ಎಂದರು.